ಬಾಲಿವುಡ್ ಅಂಗಳದಲ್ಲಿ ಮಂಕಾದ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ
ರಶ್ಮಿಕಾ ನಟಿಸಿದ ಚಿತ್ರ ಥಿಯೇಟರ್‌ಗಳಲ್ಲಿ ರಿಲೀಸ್ ಆಗ್ತಿಲ್ಲ..!

ಬಾಲಿವುಡ್ ಅಂಗಳದಲ್ಲಿ ಮಂಕಾದ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣರಶ್ಮಿಕಾ ನಟಿಸಿದ ಚಿತ್ರ ಥಿಯೇಟರ್‌ಗಳಲ್ಲಿ ರಿಲೀಸ್ ಆಗ್ತಿಲ್ಲ..!

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ ತನ್ನದೇ ಆದ ಹವಾ ಸೃಷ್ಟಿಸಿರೋ ಬ್ಯೂಟಿಕ್ವೀನ್. ಕನ್ನಡದ ಬೆಡಗಿ ರಶ್ಮಿಕಾ, ತೆಲುಗು ಚಿತ್ರರಂಗದಲ್ಲಿ ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟು ಅಭಿಮಾನಿಗಳ ಹಾಟ್ ಫೆವರೇಟ್ ಹೀರೋಯಿನ್ ಅಂತಾನೇ ಫೇಮಸ್ ಆಗಿದ್ದಾರೆ.  ಆದರೆ ಇತ್ತೀಚೆಗೆ ಯಾಕೋ ರಶ್ಮಿಕಾ ಮಂದಣ್ಣ ಸ್ವಲ್ಪ ಮಂಕಾಗಿದ್ದಾರೆ. ಅದರಲ್ಲೂ ಹಿಂದಿ ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ  ಮಿಂಚುತ್ತಲೇ ಇಲ್ಲ.

ಇದನ್ನೂ ಓದಿ:  ‘ಆದಿಪುರುಷ್’ ಚಿತ್ರದಲ್ಲಿ ರಾವಣನ ಗಡ್ಡಕ್ಕೆ ಗ್ರಾಫಿಕ್ಸ್ ಮೂಲಕ ಶೇವಿಂಗ್..!

ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣಗೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗುತ್ತಿಲ್ಲ. ಅಮಿತಾಭ್​ ಬಚ್ಚನ್​ ಅವರಂತಹ ಸ್ಟಾರ್​ ನಟನ ಜೊತೆ ತೆರೆ ಹಂಚಿಕೊಂಡಿದ್ದರೂ ಕೂಡ ಗೆಲುವು ಸಿಕ್ಕಿಲ್ಲ. ಬಾಲಿವುಡ್‌ನಲ್ಲಿ ಬಹು ನಿರೀಕ್ಷೆ ಮೂಡಿಸಿದ್ದ ‘ಗುಡ್‌ಬೈ’ ಸಿನಿಮಾ ಹೇಳಿಕೊಳ್ಳುವಂತಾ ಸಕ್ಸಸ್ ಕಾಣಲಿಲ್ಲ.  ಇದಾದ ನಂತರ ‘ಮಿಷನ್ ಮಜ್ನು’ ಸಿನಿಮಾದ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದರು. ಆದರೆ ಮಿಷನ್ ಮಜ್ನು ಚಿತ್ರ ಥಿಯೇಟರ್‌ಗಳಲ್ಲಿ ರಿಲೀಸ್ ಆಗೋದೇ ಡೌಟು ಎನ್ನಲಾಗ್ತಿದೆ. ಇಷ್ಟೊರಳಗೆ ಮಿಷನ್ ಮಜ್ನು ಸಿನಿಮಾ ರಿಲೀಸ್ ಆಗಬೇಕಿತ್ತು. ಖ್ಯಾತ ನಟ ಸಿದ್ಧಾರ್ಥ್​ ಮಲ್ಹೋತ್ರಾ ಜೊತೆ ರಶ್ಮಿಕಾ ಮಂದಣ್ಣನ ಕಾಂಬಿನೇಷನ್ ನೋಡಲು ಅಭಿಮಾನಿಗಳು ಕೂಡಾ ಕಾಯ್ತಿದ್ರು. ಆದರೆ, ಈ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗದೇ ನೇರವಾಗಿ ಓಟಿಟಿ ಅಂಗಳಕ್ಕೆ ಕಾಲಿಡಲಿದೆ ಅನ್ನೋ ಮಾತು ಈಗ ಕೇಳಿಬರ್ತಿದೆ. ಮೂಲಗಳ ಪ್ರಕಾರ 2023ರ ಜನವರಿ 18ರಂದು ‘ಮಿಷನ್​ ಮಜ್ನು’ ಸಿನಿಮಾ ನೇರವಾಗಿ ನೆಟ್​ಫ್ಲಿಕ್ಸ್​ ಮೂಲಕ ಬಿಡುಗಡೆ ಆಗಲಿದೆ. ಈ ಕುರಿತು ನಿರ್ಮಾಪಕರಿಂದ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ.

suddiyaana