ದಿ ವೆಡ್ಡಿಂಗ್ ಆಫ್ ವಿರೋಶ್! – ಮದುವೆ ಫ್ಯಾನ್ಸ್ ಸೂಚಿಸಿದ ಹೆಸರನ್ನಿಟ್ಟ ರಶ್ಮಿಕಾ, ವಿಜಯ್!

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ನಟ ವಿಜಯ್ ದೇವರಕೊಂಡ ಇಬ್ಬರು ಏಕಕಾಲಕ್ಕೆ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ಮದುವೆಯ ಬಗ್ಗೆ ಕೊನೆಗೂ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ಇದೀಗ ನಾವಿಬ್ಬರು ಮದುವೆ ಆಗುತ್ತಿರುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ಹೀನಾಯ ಸೋಲು! – 76 ರನ್ಗಳಿಂದ ಗೆದ್ದ ಸೌತ್ ಆಫ್ರಿಕಾ!
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಬಗ್ಗೆ ವದಂತಿಗಳು ಹರಿದಾಡುತ್ತಿತ್ತು. ಇದೀಗ ಈ ಜೋಡಿ ಮದುವೆ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಈ ಮೂಲಕ ಎಲ್ಲ ಅಂತೆ ಕಂತೆಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ವಿವಾಹವನ್ನು ಅಧಿಕೃತವಾಗಿ “ದಿ ವೆಡ್ಡಿಂಗ್ ಆಫ್ ವಿರೋಶ್” ಎಂದು (‘Virosh’ ) ಕರೆದುಕೊಂಡಿದ್ದಾರೆ.
ಯಾವುದೇ ವಿವಾಹ ಯೋಜನೆಗಳನ್ನು ರೂಪಿಸುವ ಮೊದಲೇ ಅಭಿಮಾನಿಗಳು ತಮ್ಮ ಬಂಧಕ್ಕೆ ಒಂದು ಅರ್ಥವನ್ನು ನೀಡಿದ್ದರು. ಅಭಿಮಾನಿಗಳು ಸೃಷ್ಟಿಸಿದ ಈ ನಿಕ್ ನೇಮ್ ವಿರೋಶ್ ಹೆಸರನ್ನು ತಮ್ಮ ಮದುವೆಗೆ ಇಡುವ ಮೂಲಕ, ವಿಜಯ್ ಮತ್ತು ರಶ್ಮಿಕಾ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ರಶ್ಮಿಕಾ ಪೋಸ್ಟ್ನಲ್ಲಿ ಏನಿದೆ?
ರಶ್ಮಿಕಾ ಪೋಸ್ಟ್ನಲ್ಲಿ, “ನಮ್ಮ ಪ್ರೀತಿಯ ಫ್ಯಾನ್ಸ್, ನಾವು ಯಾವುದೇ ಯೋಜನೆಗಳನ್ನು ಮಾಡುವ ಮೊದಲು,ನಾವು ನಮಗಾಗಿ ಏನನ್ನಾದರೂ ಆಯ್ಕೆ ಮಾಡಿಕೊಳ್ಳುವ ಮೊದಲು, ನೀವು ಈಗಾಗಲೇ ನಮಗೆ ಒಂದು ಹೆಸರನ್ನು ಕೊಟ್ಟಿದ್ದೀರಿ.
ನೀವು ನಮ್ಮನ್ನು ‘ವಿರೋಶ್’ ಎಂದು ಕರೆದಿದ್ದೀರಿ. ಹಾಗಾಗಿ ಇಂದು – ಪೂರ್ಣ ಹೃದಯದಿಂದ, ನಿಮ್ಮ ಗೌರವಾರ್ಥವಾಗಿ ನಾವು ನಮ್ಮ ಮದುವೆಗೆ ಆಹ್ವಾನಿಸುತ್ತಿದ್ದೇವೆ. ‘ವಿರೋಶ್ ವಿವಾಹ’ ಎಂದು, ನಮ್ಮನ್ನು ಇಷ್ಟೊಂದು ಪ್ರೀತಿಯಿಂದ ಇಲ್ಲಿಯವರೆಗೆ ಸಾಥ್ ಕೊಟ್ಟಿದ್ದಕ್ಕೆ ಧನ್ಯವಾದ. ನೀವು ನಮ್ಮ ಜೀವನದಲ್ಲಿ ಒಂದು ಭಾಗ – ಯಾವಾಗಲೂ. ನಿಮಗೆ ನನ್ನ ಪ್ರೀತಿಗೆ ಅಪ್ಪುಗೆ ಎಂದು ಬರೆದುಕೊಂಡಿದ್ದಾರೆ.
ಫೆಬ್ರವರಿ 24 ರಿಂದಲೇ ಮದುವೆ ಶಾಸ್ತ್ರಗಳು ಶುರುವಾಗಲಿದ್ದು, ಫೆಬ್ರವರಿ 26 ರಂದು ಮುಹೂರ್ತ ನಡೆಯಲಿದೆ. ಇನ್ನು, ಮದುವೆಯ ಮುಖ್ಯ ಸಮಾರಂಭಕ್ಕೆ ಚಿತ್ರರಂಗದ ಸಹೋದ್ಯೋಗಿಗಳು ಅಥವಾ ಸಹನಟರಿಗೆ ಆಹ್ವಾನ ನೀಡಿಲ್ಲವಂತೆ. ಆದರೆ, ಮಾರ್ಚ್ 4 ರಂದು ಹೈದರಾಬಾದ್ನಲ್ಲಿ ಅದ್ದೂರಿ ಆರತಕ್ಷತೆ ನಡೆಯುವ ನಿರೀಕ್ಷೆಯಿದೆ.

ನೋಡಿರಿ

