ಮದುವೆ ಸಂಭ್ರಮದ ನಂತರ ಶೂಟಿಂಗ್‌ನಲ್ಲಿ ರಶ್ಮಿಕಾ, ವಿಜಯ್ – ರಣಬಾಲಿ ಸಿನಿಮಾ ಚಿತ್ರೀಕರಣದಲ್ಲಿ ನವದಂಪತಿ ಬ್ಯುಸಿ

ಮದುವೆ ಸಂಭ್ರಮದ ನಂತರ ಶೂಟಿಂಗ್‌ನಲ್ಲಿ ರಶ್ಮಿಕಾ, ವಿಜಯ್ – ರಣಬಾಲಿ ಸಿನಿಮಾ ಚಿತ್ರೀಕರಣದಲ್ಲಿ ನವದಂಪತಿ ಬ್ಯುಸಿ

ಸೆಲೆಬ್ರಿಟಿ ದಂಪತಿ ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಮದುವೆಯ ಸಂಭ್ರಮದಲ್ಲಿದ್ದಾರೆ. ಈ ಜೋಡಿ ಹನಿಮೂನ್‌ಗೆ ಎಲ್ಲಿ ಪ್ಲಾನ್ ಮಾಡಿದ್ದಾರೆ ಅನ್ನೋದಕ್ಕಿಂತ ಹೆಚ್ಚಾಗಿ ಟೆಂಪಲ್ ರನ್‌ನಲ್ಲಿ ಬ್ಯುಸಿಯಾಗಿದ್ದರು. ಇದೀಗ ಮದುವೆ ಸಂಭ್ರಮ ಮುಗಿಯುತ್ತಿದ್ದಂತೆ ವಿರೋಶ್ ಜೋಡಿ ಶೂಟಿಂಗ್‌ಗೆ ಹಾಜರಾಗಿದ್ದಾರೆ.

ಇದನ್ನೂ ಓದಿ:ಫ್ಯಾನ್ಸ್‌ಗೆ ಶಾಕ್‌ ಕೊಟ್ಟ ವಿರೋಶ್‌ ಜೋಡಿ! – ರಶ್ಮಿಕಾ, ವಿಜಯ್ ಆರತಕ್ಷತೆಗೆ ಆಹ್ವಾನಿತರಿಗೆ ಮಾತ್ರ ಪ್ರವೇಶ!

ತೆಲುಗು ನಟ ವಿಜಯ್ ದೇವರಕೊಂಡ ಮತ್ತು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ವಿವಾಹ ಸಂಭ್ರಮ ಮುಗಿಯುತ್ತಿದ್ದಂತೆ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ನವದಂಪತಿ ಇಬ್ಬರೂ ಕೂಡಾ ಒಂದೇ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ರಣಬಾಲಿ ಸಿನಿಮಾದಲ್ಲಿ ಈ ಜೋಡಿ ಒಟ್ಟಾಗಿ ನಟಿಸುತ್ತಿದ್ದು, ಮಾರ್ಚ್ 12 ರಿಂದ ಶೂಟಿಂಗ್ ಆರಂಭವಾಗಿದೆ. ರಣಬಾಲಿ ಅಡ್ಡಾಕ್ಕೆ ಎಂಟ್ರಿ ಕೊಟ್ಟಿರುವ ವಿರೋಶ್ ದಂಪತಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಗೀತ ಗೋವಿಂದಂ ನಲ್ಲಿ ಸ್ನೇಹಿತರಾಗಿದ್ದ ಇವರಿಬ್ಬರು, ಡಿಯರ್ ಕಾಮ್ರೆಡ್ ಸಮಯದಲ್ಲಿ ಪ್ರೇಮಿಗಳಾದರು. ಅಲ್ಲಿಂದಲೇ ಶುರುವಾಗಿತ್ತು ಗಾಸಿಪ್. ಇಬ್ಬರ ನಡುವೆ ಏನೋ ನಡೀತಿದೆ ಎಂಬ ಗುಲ್ಲು ಮೆಲ್ಲನೇ ಕೇಳಿಬಂದಿತ್ತು. ಅಂತೂ ಈ ಜೋಡಿ ರಾಜಸ್ಥಾನದ ಉದಯಪುರದಲ್ಲಿ ಮದುವೆಯಾದರು. ಇದೀಗ ಇಬ್ಬರೂ ರಣಬಾಲಿ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ರಣಬಾಲಿ ಸಿನಿಮಾ ಸ್ವತಂತ್ರ ಪೂರ್ವದ ಕತೆಯನ್ನು ಒಳಗೊಂಡ ಸಿನಿಮಾ ಎಂದು ಹೇಳಲಾಗುತ್ತಿದೆ. ಈಗಾಗಲೇ ರಣಬಾಲಿ ಚಿತ್ರ ಹಾಡು ರಿಲೀಸ್ ಆಗಿದೆ.

Sulekha

Leave a Reply

Your email address will not be published. Required fields are marked *