ರಶ್ಮಿಕಾಗೆ ಕಾಡ್ತಿದೆಯೇ‌ ಕಾಯಿಲೆ? – ಕಿರಿಕ್ ಚೆಲುವೆಗೆ ಏನಾಯ್ತು?
ಸಿನಿ ಕೆರಿಯರ್‌ಗೆ ಹೊಡೆತ?      

ರಶ್ಮಿಕಾಗೆ ಕಾಡ್ತಿದೆಯೇ‌ ಕಾಯಿಲೆ? – ಕಿರಿಕ್ ಚೆಲುವೆಗೆ ಏನಾಯ್ತು?ಸಿನಿ ಕೆರಿಯರ್‌ಗೆ ಹೊಡೆತ?      

ರಶ್ಮಿಕಾ ಮಂದಣ್ಣ.. ಕೊಡಗಿನ ಕುವರಿ.. ಇದೀಗ ಸೌತ್ ನಲ್ಲಿ ಬಹುಬೇಡಿಕೆಯ ನಟಿ.. ಬಾಲಿವುಡ್ ನಲ್ಲೂ ರಶ್ಮಿಕಾ ಹವಾ ಜೋರಾಗಿದೆ. ಸಿನಿ ಇಂಡಸ್ಟ್ರಿಗೆ ಕಾಲಿಟ್ಟು 8 ವರ್ಷಗಳೇ ಕಳೆದಿವೆ.. ಸದ್ಯ ರಶ್ಮಿಕಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕಿರಿಕ್ ಬೆಡಗಿಯ ಆರೋಗ್ಯದ ವಿಚಾರ ಭಾರಿ ಚರ್ಚೆಯಾಗ್ತಿದೆ. ರಶ್ಮಿಕಾಗೆ ಗಂಭೀರ ಆರೋಗ್ಯ ಸಮಸ್ಯೆ ಕಾಡ್ತಿದೆ. ಈ ಕಾಯಿಲೆ ಆಕೆಯ ಸೌಂದರ್ಯಕ್ಕೂ ಮುಳುವಾಗ್ತಿದೆ ಅಂತಾ ಹೇಳಲಾಗ್ತಿದೆ. ಹಾಗಾದ್ರೆ ರಶ್ಮಿಕಾ ನಿಜಕ್ಕೂ ಅನಾರೋಗ್ಯಕ್ಕೆ ತುತ್ತಾಗಿದ್ದಾರಾ? ಸೋಶಿಯಲ್ ಮೀಡಿಯಾದಲ್ಲಿ ಏನ್ ಚರ್ಚೆ ನಡಿತಾ ಇದೆ? ರಶ್ಮಿಕಾಗೆ ಕಾಡ್ತಿರೋ ಸಮಸ್ಯೆ ಏನು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಕುಸುಮಾ ಕೆಟ್ಟ ಅತ್ತೆನಾ? – ಸೊಸೆ ಇರೋದು ಮನೆ ಕೆಲ್ಸಕ್ಕಾ?

ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್, ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿ.. ಅದೂ ಸಿನಿ ಇಂಡಸ್ಟ್ರಿಗೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ತನ್ನ ಕೆರಿಯರ್ ದೊಡ್ಡ‌ ಮಟ್ಟಕ್ಕೆ ಬಿಲ್ಡ್ ಮಾಡ್ಕೊಂಡಿದ್ದಾರೆ. ಮಂದಣ್ಣ ಸದಾ ಸುದ್ದಿಯಲ್ಲಿರೋ ಬೆಡಗಿ.. ಆಗಾಗ ಟ್ರೋಲ್ ಗೂ ಆಹಾರ ಆಗೋದು ಕಾಮನ್ ಆಗಿದೆ..  ಅಷ್ಟೇ ಅಲ್ಲ ಕೆಲ ತಿಂಗಳಿನಿಂದ ವೈಯಕ್ತಿಕ ಕಾರಣಕ್ಕೂ ಹೆಚ್ಚು ಸದ್ದು ಮಾಡ್ತಿದ್ದಾರೆ. ನಟ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ನಡೆಸ್ತಿದ್ದಾರೆ. ಆದಷ್ಟು ಬೇಗ ಮದುವೆ ಆಗ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಇದ್ರ ಬೆನ್ನಲ್ಲೆ ಮದುವೆ ಆಗೋ ಹುಡುಗನ ಬಗ್ಗೆ ಆದಷ್ಟು ಬೇಗ ಅಪ್ಡೇಟ್ ಕೊಡ್ತೇನೆ ಅಂತಾ ಹೇಳಿದ್ರು. ಆದ್ರೀಗ ರಶ್ಮಿಕಾ ಮಂದಣ್ಣ ಆರೋಗ್ಯದ ಬಗ್ಗೆ ಒಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಇದು ಫ್ಯಾನ್ಸ್ ಆತಂಕಕ್ಕೂ ಕಾರಣ ಆಗಿದೆ.

ರಶ್ಮಿಕಾ ಮಂದಣ್ಣ ಅಪರೂಪದ ಹಾಗೂ ಗಂಭೀರ ಸ್ಕಿನ್ ಸಮಸ್ಯೆಯಿಂದ ಬಳಲ್ತಾ ಇದ್ದಾರಂತೆ.. ಆಕೆಗೆ ಸೋರಿಯಾಸಿಸ್ ಕಾಣಿಸಿಕೊಂಡಿದೆ ಎಂದು ಹೇಳಲಾಗ್ತಿದೆ. ಇದಕ್ಕಾಗಿಯೇ ಅವರು ಚರ್ಮರೋಗ ವೈದ್ಯರ ಬಳಿ ಹೋಗಿದ್ರು ಎನ್ನಲಾಗುತ್ತಿದೆ. ಅಂದಹಾಗೆ ಸೆಲೆಬ್ರಿಟಿ ಅಂದ್ಮೇಲೆ ಅವ್ರ ಲೈಫ್ ಸ್ಟೈಲ್ ಫುಲ್ ಡಿಫ್ರೆಂಟ್ ಆಗಿರುತ್ತೆ.. ಬಿಸಿಲು, ಗಾಳಿ, ಚಳಿ, ಮಳೆ ಅನ್ನೋದನ್ನ ಬಿಟ್ಟು ಎಲ್ಲಾ ಕಡೆ ಸುತ್ತಾಡ್ಬೇಕಾಗುತ್ತೆ.‌ ದಿನವಿಡೀ ಮೇಕಪ್ ಮಾಡ್ಕೊಂಡು ಇರ್ಬೇಕು.  ಅದ್ರೆ ಅವ್ರು ಬಳಸುವ ಸೌಂದರ್ಯವರ್ಧಕಗಳಿಗೆ ಅನೇಕ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಶೂಟಿಂಗ್ ಟೈಮ್ ನಲ್ಲಂತೂ ಲೈಟ್ ಮುಂದೆ ಗಂಟೆಗಟ್ಟಲೆ ನಿಲ್ಬೇಕಾಗುತ್ತೆ.. ಈ ಟೈಮ್ ನಲ್ಲಿ ಮೇಕಪ್ ಕರಗಿ ಹೋಗುತ್ತೆ. ಇದ್ರಿಂದ ತ್ಚಚೆ ಮೇಲೆ ಕಿರಿಕಿರಿ, ತುರಿಕೆ ಮತ್ತು ಕೆಂಪು ಬಣ್ಣ ಉಂಟಾಗುತ್ತದೆ. ಅಷ್ಟೇ ಅಲ್ಲ ರಾಸಾಯನಿಕ ತುಂಬಿದ ಸೌಂದರ್ಯವರ್ಧಕಗಳ ಬಳಕೆಯಿಂದ ಪಿಗ್ಮೆಂಟೇಶನ್ ಹೆಚ್ಚಾಗುತ್ತದೆ.

ಇದರ ನಂತರ, ಕೂದಲು ಉದುರುವುದು ಮತ್ತು ಚರ್ಮ  ಡ್ರೈ ಆಗಿ ಒಡೆದು‌ ಕಿತ್ತುಬರಲು ಪ್ರಾರಂಭವಾಗುತ್ತದೆ. ಇನ್ನು  ಕೆಲವು ನಟಿಯರು ತಮ್ಮ ತ್ವಚೆಯ ಅಂದವನ್ನು ಕಾಪಾಡಿಕೊಳ್ಳಲು ಡಯಟ್ ಟೈಮ್ ನಲ್ಲಿ ವಿಟಮಿನ್ ಮಿನರಲ್ ಗಳನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳದ ಕಾರಣ ಅನೇಕ ಕಾಯಿಲೆಗಳಿಂದ ಬಳಲುವುದು ಕಾಮನ್ ಆಗಿದೆ.  ಈ ರೀತಿಯ ಸ್ಕಿನ್‌ ಪ್ರಾಬ್ಲಂನಿಂದ ಹಲವು ನಟನಟಿಯರು ಬಳಲ್ತಿದ್ದಾರೆ ಎಂದು ಹೇಳಲಾಗ್ತಿದೆ. ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಅವರು ಮಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು. ಇದೀಗ ರಶ್ಮಿಕಾ ಸೋರಿಯಾಸಿಸ್ ನಿಂದ‌ ಬಳಲ್ತಿದ್ದಾರೆ ಅಂತಾ ಹೇಳಲಾಗ್ತಿದೆ. ಆದ್ರೆ ಇದುವರೆಗೂ ರಶ್ಮಿಕಾ ಅಥವಾ ಅವರ ತಂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.‌ ಹೀಗಾಗಿ ನಿಜಕ್ಕೂ ರಶ್ಮಿಕಾ ಅವ್ರಿಗೆ ಯಾವ ರೀತಿಯ ತೊಂದರೆ ಇದೆ ಅನ್ನೋದು ಅಧಿಕೃತವಾಗಿ ದೃಢಪಟ್ಟಿಲ್ಲ. ಹೀಗಾಗಿ ರಶ್ಮಿಕಾ ಸಿನಿ ಕೆರಿಯರ್‌ಗೆ ಯಾವುದೇ ಹೊಡೆತ ಬೀಳಲ್ಲ..

ಸೋರಿಯಾಸಿಸ್ ಮಾರಣಾಂತಿಕವಲ್ಲ. ಇದೊಂದು ಧೀರ್ಘಕಾಲಿಕ ಚರ್ಮರೋಗವಾಗಿದ್ದು, ಬಹಳಷ್ಟು ಜನರು ಬಳಲುತ್ತಿದ್ದಾರೆ.. ಆದ್ರೆ ಅನೇಕ ಜನರು  ಇದನ್ನು ಸಾಧಾರಣ ಕಾಯಿಲೆ ಎಂದು ಭಾವಿಸುತ್ತಾರೆ. ಹಾಗಾಗಿ ಇದನ್ನ ನಿರ್ಲಕ್ಷ್ಯ ಮಾಡುವವರೇ ಹೆಚ್ಚು. ಆದರೆ ಇದು ನಮ್ಮ ಶರೀರದಲ್ಲಿನ ರೋಗ ನಿರೋಧಕ ಶಕ್ತಿ ಕುಂಠಿತಗೊಳಿಸುತ್ತಾ ಹೋಗುತ್ತೆ.. ಇದ್ರಿಂದಾಗಿ ದೇಹ ಆರೋಗ್ಯ ಮಾತ್ರವಲ್ಲದೇ  ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಸೋರಿಯಾಸಿಸ್‌ ಲಕ್ಷಣ ಕಾಣಿಸಿಕೊಂಡ್ರೆ ಆರಂಭದಲ್ಲೇ ಚಿಕಿತ್ಸೆ ಪಡೆಯೋದು ಉತ್ತಮ.

Shwetha M

Leave a Reply

Your email address will not be published. Required fields are marked *