ಗೋಲ್ಡನ್‌ ಚಾನ್ಸ್‌ ಮಿಸ್‌ ಮಾಡ್ಕೊಂಡ್ರಾ ನ್ಯಾಷನಲ್‌ ಕ್ರಶ್‌? – 150 ಕೋಟಿ ಸಿನಿಮಾ ರಿಜೆಕ್ಟ್‌ ಮಾಡಿದ್ಯಾಕೆ ರಶ್ಮಿಕಾ ಮಂದಣ್ಣ?

ಗೋಲ್ಡನ್‌ ಚಾನ್ಸ್‌ ಮಿಸ್‌ ಮಾಡ್ಕೊಂಡ್ರಾ ನ್ಯಾಷನಲ್‌ ಕ್ರಶ್‌? – 150 ಕೋಟಿ ಸಿನಿಮಾ ರಿಜೆಕ್ಟ್‌ ಮಾಡಿದ್ಯಾಕೆ ರಶ್ಮಿಕಾ ಮಂದಣ್ಣ?

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಕಿರೀಕ್‌ ಪಾರ್ಟಿ ಸಿನಿಮಾದಿಂದ ಚಿತ್ರರಂಗಕ್ಕೆಎಂಟ್ರಿ ಕೊಟ್ಟಿದ್ದರು. ಈಗ ಟಾಲಿವುಡ್‌, ಬಾಲಿವುಡ್‌, ಕಾಲಿವುಡ್‌ ಅಂತಾ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿದ್ದಾರೆ. ಹೀಗೆ ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿಟ್ಟಿಕೊಂಡಿರುವ ರಶ್ಮಿಕಾ ಮಂದಣ್ಣ 150 ಕೋಟಿ ಸಿನಿಮಾವನ್ನು ರಿಜೆಕ್ಟ್‌ ಮಾಡಿದ್ದಾರೆ. ಇದೀಗ ಗೋಲ್ಡನ್‌ ಚಾನ್ಸ್‌ ಮಿಸ್‌ ಮಾಡಿಕೊಂಡ್ರಾ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿದೆ.

ಇದನ್ನೂ ಓದಿ: ರಕ್ಷಾ ಬಂಧನದ ಇತಿಹಾಸ ಏನು ಗೊತ್ತಾ? – ರಾಖಿ ಕಟ್ಟೋ ಮುನ್ನ ಈ ವಿಚಾರ ತಿಳಿದುಕೊಳ್ಳಿ!

ಕೈತುಂಬಾ ಸಿನಿಮಾಗಳಿರುವ ನಟಿ ಅಂದ್ರೆ ಅದು ರಶ್ಮಿಕಾ ಮಂದಣ್ಣ.. ಆದ್ರೆ ಈಗ ತಮಗೆ ಸಿಕ್ಕ ಗೋಲ್ಡನ್ ಚಾನ್ಸ್ ಅನ್ನು ರಿಜೆಕ್ಟ್ ಮಾಡಿರೋದನ್ನು ತಿಳಿದು ಫ್ಯಾನ್ಸ್‌ ಅಚ್ಚರಿಗೊಂಡಿದ್ದಾರೆ. ತಮಿಳಿನ ಸೂಪರ್ ಹಿಟ್ ಚಿತ್ರವನ್ನು ರಶ್ಮಿಕಾ ಕೈಬಿಟ್ಟಿದ್ದಾರೆ.  ಆ ಸಿನಿಮಾ ಬೇರೆ ಯಾವುದೂ ಅಲ್ಲ.. ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಕೋಟಿಗಟ್ಟಲೇ ಕಮಾಯಿ ಮಾಡುತ್ತಿರುವ ವಿಕ್ರಮ್‌ ನಟನೆಯ ‘ತಂಗಲಾನ್’ ಸಿನಿಮಾವನ್ನು ರಶ್ಮಿಕಾ ಕೈಬಿಟ್ಟಿದ್ದಾರೆ. ಈ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.

ನಿರ್ದೇಶಕ ಪಾ ರಂಜಿತ್ ಅವರು ಮಾಳವಿಕಾ ಮೋಹನನ್ ನಟಿಸಿರುವ ನಾಯಕಿ ಪಾತ್ರಕ್ಕೆ ಮೊದಲು ರಶ್ಮಿಕಾರನ್ನು ಸಂಪರ್ಕಿಸಿದ್ದರಂತೆ. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಈ ಚಿತ್ರವನ್ನು ನಟಿ ಕೈಚೆಲ್ಲಿದ್ದರು. ಈಗ ‘ತಂಗಲಾನ್’ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಿನಿಮಾ ಸಕ್ಸಸ್ ರೇಸ್ ನೋಡಿ ಅಯ್ಯೋ ಶ್ರೀವಲ್ಲಿ ಎಂತಹ ಗೋಲ್ಡನ್ ಚಾನ್ಸ್ ಮಿಸ್ ಮಾಡಿಕೊಂಡರು ಎಂದು ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

Shwetha M

Leave a Reply

Your email address will not be published. Required fields are marked *