ವಿಜಯ್ ಜೊತೆ ತವರು ಮನೆಗೆ ಬಂದ ರಶ್ಮಿಕಾ! – ನ್ಯಾಷನಲ್ ಕ್ರಶ್‌ಗೆ ತಂದೆಯಿಂದ ದುಬಾರಿ ಗಿಫ್ಟ್!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇತ್ತೀಚೆಗೆ ನಟ ವಿಜಯ್ ದೇವರಕೊಂಡ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಬಳಿಕ ಇದೇ ಮೊದಲ ಬಾರಿಗೆ ರಶ್ಮಿಕಾ, ವಿಜಯ್ ಜೊತೆ ಕೊಡಗಿನ ವಿರಾಜಪೇಟೆಗೆ ಭೇಟಿ ನೀಡಿದ್ದಾರೆ. ಇದೀಗ ರಶ್ಮಿಕಾಗೆ ತಂದೆಯಿಂದ ಭರ್ಜರಿ ಉಡುಗೊರೆ ಸಿಕ್ಕಿದೆ.
ಇದನ್ನೂ ಓದಿ: ಕೆಡಿ ಸಿನಿಮಾ ಹಾಡಿಗೆ ಇನ್ನೂ ಮುಗಿಯದ ಸಂಕಷ್ಟ! – ನೋರಾ ಫತೇಹಿ, ಸಂಜಯ್ ದತ್ಗೆ ಮತ್ತೊಮ್ಮೆ ನೋಟಿಸ್
ಮದುವೆಯಾದ ಬಳಿಕ ಇದೇ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆ ವಿರಾಜಪೇಟೆಗೆ ಬಂದಿದ್ದಾರೆ. ಭಾನುವಾರ ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬವಿತ್ತು. ಈ ವಿಶೇಷ ದಿನವನ್ನು ಆಚರಿಸಲು ರಶ್ಮಿಕಾ ಮತ್ತು ವಿಜಯ್ ಅವರು ಕೊಡಗು ಜಿಲ್ಲೆಯ ವಿರಾಜಪೇಟೆ ಹೊರವಲಯದಲ್ಲಿರುವ ಕದನೂರಿನ ತಮ್ಮ ನಿವಾಸಕ್ಕೆ ಆಗಮಿಸಿದ್ದರು. ಮದುವೆಯ ನಂತರ ಮೊದಲ ಬಾರಿಗೆ ಮಗಳು ಮತ್ತು ಅಳಿಯ ಮನೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ರಶ್ಮಿಕಾ ತಂದೆ ಮದನ್ ಮಂದಣ್ಣ ಅವರು ಮನೆಯನ್ನು ವಿಶೇಷವಾಗಿ ನವೀಕರಣಗೊಳಿಸಿದ್ದರು.
ಇನ್ನು ರಶ್ಮಿಕಾ ಅವರ ಈ ಬಾರಿಯ ಹುಟ್ಟುಹಬ್ಬಕ್ಕೆ ತಂದೆ ಮದನ್ ಮಂದಣ್ಣ ಕಡೆಯಿಂದ ಅತ್ಯಮೂಲ್ಯ ಉಡುಗೊರೆ ಸಿಕ್ಕಿದೆ. ಕದನೂರು ಬಳಿಯಿರುವ ಸುಸಜ್ಜಿತ ‘ಸೆರೆನಿಟಿ’ ಬಂಗಲೆಯನ್ನು ಮದನ್ ಮಂದಣ್ಣ ಅವರು ಮಗಳು ರಶ್ಮಿಕಾಗೆ ಗಿಫ್ಟ್ ನೀಡಿದ್ದಾರೆ. ಈಗಾಗಲೇ ವಿರಾಜಪೇಟೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬಂಗಲೆಯ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಧಿಕೃತವಾಗಿ ರಶ್ಮಿಕಾ ಅವರ ಹೆಸರಿಗೆ ಆಸ್ತಿ ವರ್ಗಾವಣೆಯಾಗಿದೆ.
ಮದುವೆಗೂ ಮುಂಚೆಯೇ ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್ನಲ್ಲಿ ಸೆಟ್ಲ್ ಆಗಿದ್ದರು. ತೆಲುಗು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಅವರು ಹೆಚ್ಚು ಬ್ಯುಸಿ ಆಗಿದ್ದಾರೆ. ವಿಜಯ್ ದೇವರಕೊಂಡ ಜೊತೆ ಅವರು ‘ರಣಬಾಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ವಿಜಯ್ ದೇವರಕೊಂಡ ಮೇಕಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ.

ನೋಡಿರಿ

