ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಕಲ್ಯಾಣ! – ಉದಯಪುರದಲ್ಲಿ ಶ್ರೀವಲ್ಲಿ ವಿವಾಹ!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದಿದೆ. ರಾಜಸ್ಥಾನದ ಉದಯಪುರದಲ್ಲಿ ಆಪ್ತರು, ಬಂಧು-ಮಿತ್ರರು ಹಾಗೂ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ಈ ತಾರಾಜೋಡಿಯ ವಿವಾಹ ಮಹೋತ್ಸವ ಅದ್ದೂರಿಯಾಗಿ ನೆರವೇರಿದೆ.
ಇದನ್ನೂ ಓದಿ: ಕನ್ನಡಿಗನಿಗೆ ಡಿಚ್ಚಿ ಕೊಟ್ಟ ಡೋಗ್ರಾಗೆ ಬಿಸಿಸಿಐನಿಂದ ಶಿಕ್ಷೆ – ಅಶಿಸ್ತಿನ ವರ್ತನೆ ತೋರಿದ ಡೋಗ್ರಾಗೆ ಬಿತ್ತು ದಂಡ
ಇಂದು ಬೆಳಗ್ಗೆ ಸರಿಯಾಗಿ 10 ಗಂಟೆ 10 ನಿಮಿಷಕ್ಕೆ ಹಿಂದೂ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳು ನಡೆದಿವೆ. ವೇದ ಮಂತ್ರಗಳ ಪಠಣ ಹಾಗೂ ಮಂಗಳ ವಾದ್ಯಗಳ ಮೊಳಗುವಿಕೆಯ ನಡುವೆ ರಶ್ಮಿಕಾ ಕೊರಳಿಗೆ ವಿಜಯ್ ದೇವರಕೊಂಡ ಮಾಂಗಲ್ಯ ಧಾರಣೆ ಮಾಡಿದ್ದಾರೆ. ಹಿಂದೂ ಸಂಪ್ರದಾಯದಂತೆ ನಡೆದ ಈ ಮದುವೆಯಲ್ಲಿ ವಿಜಯ್ ಮತ್ತು ರಶ್ಮಿಕಾ ಜೋಡಿ ನೋಡಲು ಕಣ್ಣುಗಳೆರಡು ಸಾಲದು ಎಂಬಂತೆ ಕಂಗೊಳಿಸುತ್ತಿದ್ದರು. ಮದುವೆಯ ದಿರಿಸಿನಲ್ಲಿ ವಧು ರಶ್ಮಿಕಾ ಅವರ ಮುಖದಲ್ಲಿ ಮದುವೆಯ ಸಂಭ್ರಮ ಹಾಗೂ ಮಂದಹಾಸ ಎದ್ದು ಕಾಣುತ್ತಿತ್ತು.
ಇನ್ನು ಈ ಹಿಂದೆಯೇ ನಿರ್ಧರಿಸಿದಂತೆ ಎರಡು ಸಂಸ್ಕೃತಿಗಳ ಪ್ರಕಾರ ಈ ಜೋಡಿಯ ಮದುವೆ ನಡೆಯುತ್ತಿದೆ. ಬೆಳಗ್ಗೆ ಹಿಂದೂ (ತೆಲುಗು) ಪದ್ಧತಿಯಂತೆ ಮದುವೆಯಾಗಿದ್ದು, ಸಂಜೆ 4.30ಕ್ಕೆ ರಶ್ಮಿಕಾ ಅವರ ಮೂಲವಾದ ‘ಕೊಡವ ಸಂಪ್ರದಾಯ’ದಂತೆ ಮತ್ತೊಮ್ಮೆ ವಿವಾಹ ಕಾರ್ಯಕ್ರಮ ಜರುಗಲಿದೆ.

ನೋಡಿರಿ

