ಕೊಡಗಿನಲ್ಲಿ ವಿರೋಶ್‌ ಗ್ರ್ಯಾಂಡ್‌ ಪಾರ್ಟಿ! –  ಕೊಡವ ಸಂಪ್ರದಾಯದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ

ಕೊಡಗಿನಲ್ಲಿ ವಿರೋಶ್‌ ಗ್ರ್ಯಾಂಡ್‌ ಪಾರ್ಟಿ! –  ಕೊಡವ ಸಂಪ್ರದಾಯದಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆ ಇತ್ತೀಚೆಗೆ ಅದ್ದೂರಿಯಾಗಿ ನಡೆದಿತ್ತು. ಇದೀಗ ಮದುವೆಯಾದ ಬಳಿಕ ಮೊದಲ ಬಾರಿಗೆ ವಿಜಯ್‌ ದೇವರಕೊಂಡ ಜೊತೆ ವಿರಾಜಪೇಟೆ ಬಂದಿದ್ದಾರೆ. ಅಷ್ಟೇ ಅಲ್ಲ ಕೊಡಗಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಲ್ಲದೆ, ಗ್ರ್ಯಾಂಡ್‌ ಡಿನ್ನರ್‌ ಪಾರ್ಟಿ ಆಯೋಜನೆ ಮಾಡಿದ್ದಾರೆ.

ಇದನ್ನೂ ಓದಿ: ವಿಜಯ್‌ ಜೊತೆ ತವರು ಮನೆಗೆ ಬಂದ ರಶ್ಮಿಕಾ! – ನ್ಯಾಷನಲ್‌ ಕ್ರಶ್‌ಗೆ ತಂದೆಯಿಂದ ದುಬಾರಿ ಗಿಫ್ಟ್!

ಮದುವೆಯಾದ ಬಳಿಕ ಮೊದಲ ಬಾರಿಗೆ ತವರಿಗೆ ಬಂದ ರಶ್ಮಿಕಾ ಇಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ರಶ್ಮಿಕಾಗೆ ತಂದೆಯಿಂದ ಐಶಾರಾಮಿ ಬಂಗಲೆ ಉಡುಗೊರೆಯಾಗಿ ಲಭಿಸಿದೆ. ಇದೀಗ ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬದ ಅಂಗವಾಗಿ ವಿರಾಜಪೇಟೆ ನಗರದ ಸೆರೆನಿಟಿ ಹಾಲ್‌ ನಲ್ಲಿ ಅದ್ಧೂರಿ ಡಿನ್ನರ್‌ ಪಾರ್ಟಿ ಆಯೋಜಿಸಲಾಗಿದೆ. ಈ ಸಂತಸದ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವಿಶೇಷ ಅಂದ್ರೆ, ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಮದುವೆಯಾದ ನಂತರ ಮೊದಲ ಬಾರಿಗೆ ಕೊಡಗಿಗೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿರಾಜಪೇಟೆಯ ಸೆರೆನಿಟಿ ಹಾಲ್‌ʼನಲ್ಲಿ ಡಿನ್ನರ್‌ ಪಾರ್ಟಿ ಹಮ್ಮಿಕೊಳ್ಳಲಾಗಿತ್ತು. ವಿರಾಜಪೇಟೆಯ ಗಣ್ಯರು, ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಈ ಡಿನ್ನರ್‌ ಪಾರ್ಟಿಯು ಸಂಭ್ರಮದಿಂದ ಕೂಡಿತ್ತು.

ಮದುವೆ ಬಳಿಕ ಕೊಡಗಿನಲ್ಲೂ ಸಾಂಪ್ರದಾಯಿಕವಾಗಿ ಆರತಕ್ಷತೆ ಇಟ್ಟುಕೊಳ್ಳುವುದಾಗಿ ಹೇಳಲಾಗಿತ್ತು. ಇದೀಗ ಆರತಕ್ಷತೆ ಹಾಗೂ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಒಟ್ಟಿಗೆ ನೆರವೇರಿದೆ. ಬಂಧು ಬಳಗ, ಆಪ್ತರನ್ನಷ್ಟೇ ಆಹ್ವಾನಿಸಿ ಔತಣ ಮುಗಿಸಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ರಶ್ಮಿಕಾ ಕೊಡಗಿನ ಸಾಂಪ್ರದಾಯಿಕ ಉಡುಪಿನಲ್ಲಿ ಕೊಡವ ಶೈಲಿಯ ಸೀರೆಯಲ್ಲಿ ಕಂಗೊಳಿಸಿದ್ದಾರೆ.

Shwetha M