ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಛಾವಾ – ಮೂರೇ ಮೂರು ದಿನದಲ್ಲಿ 121 ಕೋಟಿ ರೂ ಕಲೆಕ್ಷನ್!

ನಟಿ ರಶ್ಮಿಕಾ ಮಂದಣ್ಣ ಈಗ ಮುಟ್ಟಿದ್ದೆಲ್ಲಾ ಚಿನ್ನ.. ಒಂದಾದಮೇಲೊಂದು ಹಿಟ್ ಸಿನಿಮಾಗಳ ಮೂಲಕ ತೆರೆಮೇಲೆ ಅಬ್ಬರಿಸ್ತಿದ್ದಾರೆ. ಕಳೆದ ವರ್ಷದ ಪುಷ್ಪಾ 2 ಸಿನಿಮಾದಲ್ಲಿ ರಶ್ಮಿಕಾ ಕಂಡಿದ್ರು. ಈಗ ಛಾವ ಸಿನಿಮಾ ಸಹ ಬ್ಲಾಕ್ ಬಸ್ಟರ್ ಆಗುವತ್ತ ಹೆಜ್ಜೆ ಇಡುತ್ತಿದೆ. ಮೂರೇ ಮೂರು ದಿನಗಳಲ್ಲಿ ಬಾಕ್ಸ ಆಫೀಸ್ ನಲ್ಲಿ ಛಾವಾ ಕಮಾಲ್ ಮಾಡಿದೆ. ಈ ಮೂಲಕ ರಶ್ಮಿಕಾ ಮಂದಣ್ಣ ಅವರು ಲಕ್ಕಿ ಹೀರೋಯಿನ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಇದನ್ನೂ ಓದಿ: ಕೀರ್ತಿ ಹಳೆ ನೆನಪು ವಾಪಸ್? – ವೈಷ್ಣವ್ ಗೆ ಮತ್ತೊಂದು ಮದುವೆ
ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಕ್ಕಿ ಕೌಶಲ್ ನಟಿಸಿರುವ ಛಾವಾ ಸಿನಿಮಾ ಫೆಬ್ರವರಿ 14ರಂದು ರಿಲೀಸ್ ಆಗಿದೆ. ಸಿನಿಮಾ ರಿಲೀಸ್ ಆದ ಮೂರು ದಿನಕ್ಕೆ ಈ ಸಿನಿಮಾ ಬರೋಬ್ಬರಿ 121 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಸೂಪರ್ ಹಿಟ್ ಎನಿಸಿಕೊಂಡಿದೆ. ರಶ್ಮಿಕಾ ಮಂದಣ್ಣ ಅವರ ಹಿಟ್ ಸಿನಿಮಾಗಳ ಪಟ್ಟಿಗೆ ಈಗ ‘ಛಾವ’ ಕೂಡ ಸೇರ್ಪಡೆ ಆದಂತೆ ಆಗಿದೆ.
ಮೊದಲ ದಿನ ‘ಛಾವ’ ಸಿನಿಮಾ 33.10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಸಿನಿಮಾ ನೋಡಿದ ಅನೇಕರು ಪಾಸಿಟಿವ್ ಪ್ರತಿಕ್ರಿಯೆ ನೀಡಿದರು. ಅಂದು ವ್ಯಾಲೆಂಟೈನ್ಸ್ ಡೇ (ಫೆ.14) ಆದ್ದರಿಂದ ಹಲವರು ಚಿತ್ರಮಂದಿರಕ್ಕೆ ಬಂದರು. ಎರಡನೇ ದಿನದ ಕಲೆಕ್ಷನ್ 39.30 ಕೋಟಿ ರೂಪಾಯಿ ಆಯಿತು. ವೀಕೆಂಡ್ನಲ್ಲಿ ಸಿನಿಮಾದ ಬಗ್ಗೆ ಟಾಕ್ ಜಾಸ್ತಿ ಆಯಿತು. ಅದರ ಫಲವಾಗಿ 3ನೇ ದಿನವಾದ ಭಾನುವಾರ (ಫೆ.16) ಈ ಸಿನಿಮಾ 49.03 ಕೋಟಿ ರೂಪಾಯಿ ಗಳಿಸಿತು.
ಛಾವ ಸಿನಿಮಾದಲ್ಲಿ ಛತ್ರಪತಿ ಶಂಭಾಜಿ ಮಹಾರಾಜ್ ಜೀವನದ ಕಥೆ ಇದೆ. ಆ ಪಾತ್ರವನ್ನು ವಿಕ್ಕಿ ಕೌಶಲ್ ಅವರು ನಿಭಾಯಿಸಿದ್ದಾರೆ. ಶಂಭಾಜಿ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ನಟಿಸಿದ್ದಾರೆ. ಲಕ್ಷ್ಮಣ್ ಉಟೇಕರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಮೆಡಾಕ್ ಫಿಲ್ಮ್ಸ್’ ಮೂಲಕ ಈ ಚಿತ್ರ ನಿರ್ಮಾಣ ಆಗಿದ್ದು, ನಿರ್ಮಾಪಕರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. ‘ಛಾವ’ ಚಿತ್ರದಿಂದಾಗಿ ವಿಕ್ಕಿ ಕೌಶಲ್ ಅವರ ಚಾರ್ಮ್ ಹೆಚ್ಚಾಗಿದೆ.