ಬಿಗ್ ಪ್ರಾಜೆಕ್ಟ್ ಬಾಚಿಕೊಂಡ ರಶ್ಮಿಕಾ ಮಂದಣ್ಣ! – ದೆವ್ವವಾಗಿ ಕಾಡಲಿದ್ದಾರೆ ಕಿರಿಕ್ ಬ್ಯೂಟಿ!

ನಟಿ ರಶ್ಮಿಕಾ ಮಂದಣ್ಣ.. ಸದ್ಯ ಈಕೆ ಮುಟ್ಟಿದ್ದೆಲ್ಲಾ ಚಿನ್ನ ಅನ್ನೋತರ ಆಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಿರೋ ಕೂರ್ಗ್ ಬ್ಯೂಟಿನ ಈಗ ಬಿಗ್ ಪ್ರಾಜೆಕ್ಟ್‌ವೊಂದು ಹುಡುಕಿಕೊಂಡು ಬಂದಿದೆ. ಇದೀಗ ರಶ್ಮಿಕಾ ಮಂದಣ್ಣ ಕಾಂಚಾಣ 4 ಮೂಲಕ ದೆವ್ವವಾಗಿ ಕಾಡಲಿದ್ದಾರೆ.
ಇದನ್ನೂ ಓದಿ: ಆನೆ ಮೇಲೆ ಅಂಬಾರಿ.. ಅಂಬಾರಿಯೊಳಗೆ ಗಣಪತಿ! – ಇದು ಜಂಬೂ ಸವಾರಿಯಲ್ಲ.. ಗಣಪತಿ ಮೆರವಣಿಗೆ!
ನಟಿ ರಶ್ಮಿಕಾ ಸ್ಟಾರ್ ಸಿನಿಮಾಗಳ ನಾಯಕಿಯಾಗುವುದರ ಜೊತೆ ಜೊತೆಗೆ ನಾಯಕಿ ಪ್ರಧಾನ ಸಿನಿಮಾಗಳಲ್ಲೂ ನಟಿಸುತ್ತಾ ಬಂದಿದ್ದಾರೆ. ಸದ್ಯ ಗರ್ಲ್‍ಫ್ರೆಂಡ್, ಮೈಸಾ, ಥಮಾ ಸಿನಿಮಾಗಳ ಚಿತ್ರೀಕರಣದಲ್ಲಿ ರಶ್ಮಿಕಾ ಬ್ಯುಸಿ ಇದ್ದಾರೆ. ಇವೆಲ್ಲದ್ರ ನಡುವೆ ರಶ್ಮಿಕಾ ಕಾಂಚನ 4 ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಹೌದು, ದಕ್ಷಿಣ ಭಾರತದಲ್ಲಿ ಕಾಂಚನ ಸಿರೀಸ್ ಒಂದು ದಾಖಲೆ ಬರೆದ ಚಿತ್ರ ಸರಣಿ. ಪ್ರತಿ ಸರಣಿಯಲ್ಲೂ ರಾಘವ ಲಾರೆನ್ಸ್ ಕುತೂಹಲದ ಕಥೆ ಕಟ್ಟಿಕೊಡುವಲ್ಲಿ ಗೆದ್ದಿದ್ದಾರೆ. ಈ ಸಲದ ಕಾಂಚನ ಸಿರೀಸ್‍ನ ನಾಯಕಿಯ ಆಫರ್ ರಶ್ಮಿಕಾಗೆ ಹೋಗಿದೆ ಎನ್ನಲಾಗುತ್ತಿದೆ. ಗ್ಲ್ಯಾಮರ್, ಪರ್ಫಾಮೆನ್ಸ್ ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದಾರೆ. ಇದೀಗ ರಶ್ಮಿಕಾ ಕಾಂಚನ 4 ಚಿತ್ರದಲ್ಲಿ ದೆವ್ವದ ಪಾತ್ರ ಮಾಡಲಿದ್ದಾರಂತೆ.
ಶೀಘ್ರದಲ್ಲೇ ಕಾಂಚನ 4 ಚಿತ್ರದ ಘೋಷಣೆ ಆಗಲಿದ್ದು ಇಲ್ಲಿ ರಶ್ಮಿಕಾ ಪ್ರಧಾನ ನಾಯಕಿಯಾಗಿ ಅಭಿನಯಿಸಲಿದ್ದಾರಂತೆ. ಹಾರರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗ್ಲೇ ರಿಲೀಸ್ ಆಗಿರುವ ರಶ್ಮಿಕಾ ಅಭಿನಯಿಸಿರುವ ಥಮಾ ಸಿನಿಮಾದ ಪೋಸ್ಟರ್ ಪ್ರಕಾರ ನೋಡೋದಾದ್ರೆ ಹಾರರ್ ಶೈಲಿಯಲ್ಲೇ ಕಾಣಿಸುತ್ತದೆ. ಮೈಸಾದಲ್ಲೂ ಅಗ್ರೆಸ್ಸಿವ್ ಪಾತ್ರ ಪೋಷಿಸಿದ್ದು ಮತ್ತೊಮ್ಮೆ ರಶ್ಮಿಕಾ ಅಂಥದ್ದೇ ಪರ್ಫಾಮೆನ್ಸ್ ಓರಿಯೆಂಟೆಡ್ ಪಾತ್ರ ಮಾಡುತ್ತಿರುವುದು ವಿಶೇಷ.

ನೋಡಿರಿ

