ರಣ್‌ಬೀರ್‌ಗೆ ಕನ್ನಡ ಹೇಳಿಕೊಟ್ಟ ರಶ್ಮಿಕಾ – ಇವಳು ಕೊಡಗಿನ ಕುವರಿ ಅಲ್ಲ ತೆಲುಗು ಅಮ್ಮಾಯಿ ಎಂದು ಕಿಡಿ

ರಣ್‌ಬೀರ್‌ಗೆ ಕನ್ನಡ ಹೇಳಿಕೊಟ್ಟ ರಶ್ಮಿಕಾ – ಇವಳು ಕೊಡಗಿನ ಕುವರಿ ಅಲ್ಲ ತೆಲುಗು ಅಮ್ಮಾಯಿ ಎಂದು ಕಿಡಿ

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇದೀಗ ಸೌತ್ ಮತ್ತು ಬಾಲಿವುಡ್ ಇಂಡಸ್ಟ್ರಿಯಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈಗಾಗಲೇ ‘ಅನಿಮಲ್’ ಪೋಸ್ಟರ್, ಟೀಸರ್, ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿ, ರಣ್‌ಬೀರ್- ರಶ್ಮಿಕಾ ಕಾಂಬಿನೇಷನ್‌ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಎರಡು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ರು ರಶ್ಮಿಕಾಗೆ ಬ್ರೇಕ್ ಸಿಕ್ಕಿರದ ಕಾರಣ ‘ಅನಿಮಲ್’ ಚಿತ್ರದ ಮೇಲೆ ಭಾರೀ ಭರವಸೆಯಿಂದ ಇದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಹಿಂದಿ ನಟ ರಣ್‌ಬೀರ್ ಕಪೂರ್‌ಗೆ ರಶ್ಮಿಕಾ ಕನ್ನಡದ ಪಾಠ ಮಾಡಿದ್ದಾರೆ.

ಹೌದು ರಶ್ಮಿಕಾ ಹಾಗೂ ರಣ್‌ಬೀರ್‌ ಅವರು ಮುಂಬೈನಲ್ಲಿ ಪ್ರಮೋಷನ್‌ನಲ್ಲಿ ಭಾಗವಹಿಸಲು ಹೋಗಿದ್ದರು. ಈ ವೇಳೆ ಫೋಟೊಗ್ರಫರ್‌ಗಳು ರಶ್ಮಿಕಾ ಹಾಗೂ ರಣ್‌ಬೀರ್‌ ಅವರನ್ನು ಮಾತನಾಡಿಸಿದ್ದಾರೆ. ಈ ವೇಳೆ ರಣ್‌ಬೀರ್‌ ಎಲ್ಲರಿಗೂ ನಮಸ್ಕಾರ ಎಂದು ಹೇಳಿದ ರಣಬೀರ್ ಕಪೂರ್​ಗೆ ರಶ್ಮಿಕಾ ಮಂದಣ್ಣ ಎಲ್ಲರೂ ಹೇಗಿದ್ದೀರಾ? ನಾನು ಚೆನ್ನಾಗಿದ್ದೇನೆ ಎಂದು ತೆಲುಗಿನಲ್ಲಿ ಹೇಗೆ ಹೇಳುವುದು ಎನ್ನುವುದನ್ನು ಹೇಳಿಕೊಟ್ಟಿದ್ದಾರೆ. ಈ ವೇಳೆ ಫೋಟೋಗ್ರಾಫರ್‌ ಒಬ್ಬರು  ಕನ್ನಡದಲ್ಲಿ ಮಾತನಾಡಲು ಹೇಳಿದ್ದು, ತಕ್ಷಣ ರಶ್ಮಿಕಾ “ಎಲ್ಲರಿಗೂ ನಮಸ್ಕಾರ” ಎಂದು ಹೇಳಿ, ರಣ್‌ಬೀರ್‌ಗೂ ಸಹ ಹೇಳಿಕೊಟ್ಟಿದ್ದಾರೆ.  ಬಳಿಕ ರಣ್‌ಬೀರ್ ಫೋಟೋಗ್ರಫರ್‌ನ ನೋಡಿ ನಿಮಗೆ ಕನ್ನಡ ಬರುತ್ತಾ ಎಂದು ಪ್ರಶ್ನಿಸಿದಾಗ, ಆತ ಹೌದು ಸರ್, ನಾನು ಕರ್ನಾಟಕ, ಹುಬ್ಬಳ್ಳಿಯಿಂದ ಬಂದಿದ್ದೀನಿ ಎಂದಿದ್ದಾರೆ. ಅದಕ್ಕೆ ರಣಬೀರ್‌,ಸರಿ ನೀವೇ ಹೇಳಿಕೊಡಿ, ರಶ್ಮಿಕಾ ಜೊತೆ ಕನ್ನಡ ಮಾತಾಡಿ ಎಂದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಭಾರತದ ನಂಬರ್ 1 ಶ್ರೀಮಂತ ನಟ ಶಾರುಖ್ ಖಾನ್ – 2ನೇ ಸ್ಥಾನದಲ್ಲಿರುವ ನಟ ಹೃತಿಕ್ ರೋಷನ್ ಆದಾಯ ಎಷ್ಟು ಗೊತ್ತಾ?

ವಿಡಿಯೋ ವೈರಲ್‌ ಆಗುತ್ತಿದ್ದಂತೆ ರಶ್ಮಿಕಾ ಅವರನ್ನು ಸೋಶಿಯಲ್‌ ಮೀಡಿಯಾ ಬಳಕೆದಾರರು ಫುಲ್‌ ಕ್ಲಾಸ್‌ಗೆ ತೆಗೆದುಕೊಂಡಿದ್ದಾರೆ. ರಶ್ಮಿಕಾಗೆ ಕನ್ನಡ ಸರಿಯಾಗಿ ಬರಲ್ಲ, ಆಕೆ ಏನು ಕನ್ನಡ ಪಾಠ ಮಾಡೋದು, ಸಿನಿಮಾ ಪ್ರಚಾರಕ್ಕೆ ಇದೆಲ್ಲ ಡ್ರಾಮಾ ಅಷ್ಟೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ರಶ್ಮಿಕಾ ಕನ್ನಡ ಹೊರತುಪಡಿಸಿ ಇಂಗ್ಲೀಷ್‌ನಲ್ಲಿ ಮಾತನಾಡುತ್ತಾರೆ. ಬೇರೆ ರಾಜ್ಯಗಳಿಗೆ ಹೋದರೆ ಅಲ್ಲಿನ ಭಾಷೆಗಳಲ್ಲಿ ಮಾತನಾಡಲು ಯತ್ನಿಸುತ್ತಿದ್ದು, ಕರ್ನಾಟಕದಲ್ಲಿ ಮಾತ್ರ ಯಾಕೆ ಕನ್ನಡ ಮಾತಾಡೋದಿಲ್ಲ. ಇವಳು ಕೊಡಗಿನ ಕುವರಿ ಅಲ್ಲ ತೆಲುಗು ಅಮ್ಮಾಯಿ ಎಂದು ಹಲವರು ಕಿಡಿ ಕಾರಿದ್ದಾರೆ.

ರಶ್ಮಿಕಾ ಈ ಹಿಂದೆ ಸಾಕಷ್ಟು ಬಾರಿ ತಮ್ಮ ಹೇಳಿಕೆಗಳಿಂದ ವಿವಾದ ಸೃಷ್ಟಿಸಿಕೊಂಡಿದ್ದರು, ಈಕೆಗೆ ಕರ್ನಾಟಕದಲ್ಲಿ ಕನ್ನಡಕ್ಕಿಂತ ಹೆಚ್ಚು ಇಂಗ್ಲೀಷ್‌ನಲ್ಲಿ ಮಾತನಾಡುತ್ತಾರೆ. ಬೇರೆ ರಾಜ್ಯಗಳಿಗೆ ಹೋದರೆ ಅಲ್ಲಿನ ಭಾಷೆಗಳಲ್ಲಿ ಮಾತನಾಡಲು ಯತ್ನಿಸುತ್ತಿದ್ದು, ಕರ್ನಾಟಕದಲ್ಲಿ ಮಾತ್ರ ಯಾಕೆ ಈ ರೀತಿ ಮಾಡುತ್ತಾರೆ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದರು.

 

View this post on Instagram

 

A post shared by Voompla (@voompla)

‘ಡಿಯರ್ ಕಾಮ್ರೆಡ್’ ಸಿನಿಮಾ ಪ್ರಚಾರದ ವೇಳೆ “ಕನ್ನಡ ತುಂಬ ಕಷ್ಟ, ಮಾತನಾಡಲು ಸರಿಯಾಗಿ ಬರಲ್ಲ” ಎಂದು ಹೇಳಿ ಸಂಕಷ್ಟಕ್ಕೆ ಸಿಲುಕಿದ್ದರು. ಆಕೆಯ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ‘ಪೊಗರು’ ಬಳಿಕ ರಶ್ಮಿಕಾ ಮತ್ತೆ ಕನ್ನಡ ಸಿನಿಮಾ ಒಪ್ಪಿಕೊಳ್ಳಲಿಲ್ಲ. ಬರೀ ತೆಲುಗು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ‘ಅನಿಮಲ್’ ಚಿತ್ರ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ರಶ್ಮಿಕಾ ಕನ್ನಡದಲ್ಲಿ ತಮ್ಮ ಗೀತಾಂಜಲಿ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ.

Shwetha M