ರಣ್ಬೀರ್ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್.. – ಪಾಪ ವಿಜಯ್ ದೇವರಕೊಂಡ ಗತಿಯೇನು?

ರಣ್ಬೀರ್ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್.. – ಪಾಪ ವಿಜಯ್ ದೇವರಕೊಂಡ ಗತಿಯೇನು?

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ  ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ರಣ್‌ಬೀರ್ ಕಪೂರ್ ಕಾಂಬಿನೇಷನ್‌ ನಲ್ಲಿ ಮೂಡಿಬಂದಿರುವ ಸಿನಿಮಾದಲ್ಲಿ ಸಿನಿಮಾದಲ್ಲಿ ಆಗಾಗ ಚುಂಬನದ ದೃಶ್ಯಗಳು ಕಾಣಿಸಿಕೊಂಡಿದೆ. ಅದರಲ್ಲೂ ಪ್ರೈವೇಟ್ ಜೆಟ್‌ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣ್‌ಬೀರ್ ಕಪೂರ್ ಅವರು ಲಿಪ್ ಲಾಕ್ ಮಾಡಿರುವ ದೃಶ್ಯಗಳು ನಿನ್ನೆಯಷ್ಟೇ ವೈರಲ್ ಆಗಿದ್ದವು. ಇದೀಗ ಈ ಸೀನ್‌ ಟ್ರೋಲ್‌ ಪೇಜ್‌ಗಳಿಗೆ ಆಹಾರವಾಗಿದೆ.

ರಶ್ಮಿಕಾಗೆ ಲಿಪ್ ಲಾಕ್ ದೃಶ್ಯದಲ್ಲಿ ನಟಿಸೋದು ಹೊಸದೇನಲ್ಲ. ಈ ಹಿಂದೆ ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ನಟಿ ಬೋಲ್ಡ್ ಆಗಿಯೇ ಲಿಪ್ ಲಾಕ್ ಮಾಡಿದ್ದರು. ಇದೀಗ ಮತ್ತೆ ರಶ್ಮಿಕಾ ಮಂದಣ್ಣ ಈಗ ಲಿಪ್ ಲಾಕ್ ವಿಚಾರವಾಗಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.  ರಣ್‌ಬೀರ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ಚುಂಬನದ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಫೋಟೋ ಸಖತ್ ವೈರಲ್ ಆಗುತ್ತಿವೆ.

ಇದನ್ನೂ ಓದಿ: ಬಾಲಿವುಡ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ – ಅನಿಮಲ್ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಜೊತೆ ಸುದೀರ್ಘ ಚುಂಬನ

ಅನಿಮಲ್ ಸಿನಿಮಾದಲ್ಲಿ ರಣ್‌ಬೀರ್‌ಗೆ ರಶ್ಮಿಕಾ ಜೊತೆಯಾಗಿದ್ದಾರೆ. ಕೆಲ ದಿನಗಳ ಹಿಂದೆ ಟ್ರೈಲರ್ ಮೂಲಕ ಅನಿಮಲ್ ಚಿತ್ರದ ತುಣುಕು ಗಮನ ಸೆಳೆದಿತ್ತು. ಈಗ ಚಿತ್ರದ ಪೋಸ್ಟರ್‌ನಲ್ಲಿ ಹಸಿ ಬಿಸಿ ದೃಶ್ಯದ ಫೋಟೋ ಪಡ್ಡೆಹುಡುಗರ ನಿದ್ದೆ ಕೆಡಿಸಿದೆ. ಹುವಾ ಮೈನ್‍ ಹೆಸರಿನ ಈ ಹಾಡಿನಲ್ಲಿ ರಶ್ಮಿಕಾ ಮತ್ತು ರಣಬೀರ್ ತುಟಿಗೆ ತುಟಿಗೆ ಬೆರೆಸಿದ್ದಾರೆ. ಈ ದೃಶ್ಯವನ್ನು ಕಂಡ ಫ್ಯಾಮಿಲಿ ಶಾಕ್ ಆಗಿದ್ದಾರೆ. ತನ್ನ ಗೆಳೆಯನನ್ನು ಕುಟುಂಬಕ್ಕೆ ಪರಿಚಯಿಸುವಂತಹ ಗೀತೆ ಇದಾಗಿದೆ. ಮನೆಯಲ್ಲಿ ಮತ್ತು ವಿಮಾನದಲ್ಲಿ ಎರಡರಲ್ಲೂ ಈ ಜೋಡಿ ಲಿಪ್ ಲಾಕ್ ಮಾಡಿಕೊಂಡಿದೆ. ಇದೀಗ ಈ ಜೋಡಿಯ ಹಸಿಬಿಸಿ ದೃಶ್ಯ ಟ್ರೋಲ್‌ ಪೇಜ್‌ಗಳಿಗೆ ಆಹಾರವಾಗಿದೆ. ರಣ್‌ಬೀರ್ ಜೊತೆ ರಶ್ಮಿಕಾ ಲಿಪ್ ಲಾಕ್ ಮಾಡಿಕೊಂಡರೆ, ವಿಜಯ್ ದೇವರಕೊಂಡ ಗತಿ ಏನು? ಅವರು ಭಗ್ನಪ್ರೇಮಿಯಂತಾಗಿದ್ದಾರೆ ಎಂದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಸಿನಿಮಾ ಡಿಸೆಂಬರ್ 1ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ರಶ್ಮಿಕಾ ಅವರ ಬಾಲಿವುಡ್‌ನ ಭವಿಷ್ಯ ತಿಳಿಯಲಿದೆ. ಈ ಹಿಂದೆ, ರಶ್ಮಿಕಾ ನಟಿಸಿದ ಗುಡ್ ಬೈ, ಮಿಷನ್ ಮಜ್ನು ಚಿತ್ರಗಳು ಮಕಾಡೆ ಮಲಗಿವೆ. ರಣ್‌ಬೀರ್ ಜೊತೆ ಕಿರಿಕ್ ಪಾರ್ಟಿ ನಟಿ ಗೆದ್ದು ಬೀಗುತ್ತಾರಾ ಕಾಯಬೇಕಿದೆ.

Shwetha M