ಕೊಡಗಿನ ಕುವರಿಯ ಹಾಟ್ ಫೋಟೋ ವೈರಲ್ – ಬಾಲಿವುಡ್‌ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

ಕೊಡಗಿನ ಕುವರಿಯ ಹಾಟ್ ಫೋಟೋ ವೈರಲ್ – ಬಾಲಿವುಡ್‌ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಹುಡುಕಿಕೊಳ್ತಿದ್ದಾರೆ ಎಂಬ ಮಾತು ಈಗ ಕೇಳಿಬರುತ್ತಿದೆ. ಈಗಾಗಲೇ ರಣ್‌ಬೀರ್ ಕಪೂರ್ ಜೊತೆ ಸಖತ್ ಬೋಲ್ಡ್ ಆಗಿ ನಟಿಸಿರುವ ಫೋಟೋಸ್ ವೈರಲ್ ಆಗ್ತಿದೆ. ಅದರಲ್ಲೂ ರಶ್ಮಿಕಾ ಲಿಪ್‌ಲಾಕ್ ಸೀನ್ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ತನ್ನ ಬೋಲ್ಡ್ ಅವತಾರ ಅಭಿಮಾನಿಗಳಿಗೆ ಖುಷಿಯಾಗಿದೆ ಎಂದು ಗೊತ್ತಾಯ್ತೋ ಏನೋ, ತನ್ನ ಫ್ಯಾನ್ಸ್‌ಗಾಗಿ ಮತ್ತೊಂದು ಫೋಟೋವನ್ನು ರಶ್ಮಿಕಾ ಖುದ್ದಾಗಿ ತಾನೇ ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ – ಅನಿಮಲ್ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಜೊತೆ ಸುದೀರ್ಘ ಚುಂಬನ

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ನಟಿಸಿರುವ ಎನಿಮಲ್ ಚಿತ್ರ ರಿಲೀಸ್‌ಗೂ ಮೊದಲೇ ಬಾರಿ ಸದ್ದು ಮಾಡುತ್ತಿದೆ. ರಶ್ಮಿಕಾ ಮಂದಣ್ಣ ಮತ್ತು ರಣ್‌ಬೀರ್ ಕಪೂರ್ ರೋಮ್ಯಾಂಟಿಕ್ ದೃಶ್ಯಗಳು  ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ. ಅದರಲ್ಲೂ ರಶ್ಮಿಕಾ ಮಂದಣ್ಣ ಪ್ರೈವೇಜ್ ಜೆಟ್‌ನಲ್ಲಿ ಕುಳಿತು ರಣ್‌ಬೀರ್ ಕಪೂರ್ ಜೊತೆ ಸುದೀರ್ಘ ಚುಂಬನದಲ್ಲಿ ಮೈಮರೆತಿರುವ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೀಗಿರುವಾಗಲೇ ಕೊಡಗಿನ ಕುವರಿಯೀಗ ತನ್ನ ಬೋಲ್ಡ್ ಫೋಟೋ ಶೇರ್ ಮಾಡುವ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಇದೀಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಇದು ಸುಮಾರು ಒಂದು ವರ್ಷದ ಹಿಂದೆ ತೆಗೆದಿರೋ ಫೋಟೋ. ಆದರೆ ನಿಮಗಾಗಿ ಈ ಚಿತ್ರವನ್ನು ಪೋಸ್ಟ್ ಮಾಡಿಕೊಂಡಿದ್ದೇನೆ ಎಂದು ನಟಿ ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋ ನೋಡಿದ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಹಾಟ್ ಆಗಿ ಕಾಣುತ್ತಿದ್ದಾರಾ ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.

ರಣ್ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಅನಿಮಲ್ ಚಿತ್ರ ಡಿಸೆಂಬರ್ 1ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ..

Sulekha