ರಶ್ಮಿಕಾ ಮಂದಣ್ಣಗೆ ಅತ್ತೆಯಿಂದ ಭರ್ಜರಿ ಉಡುಗೊರೆ – ವಿಜಯ್ ದೇವರಕೊಂಡ ಅಮ್ಮನಿಂದ ಸೊಸೆಗೆ ವಿಶೇಷ ಗಿಫ್ಟ್

ರಶ್ಮಿಕಾ ಮಂದಣ್ಣಗೆ ಅತ್ತೆಯಿಂದ ಭರ್ಜರಿ ಉಡುಗೊರೆ – ವಿಜಯ್ ದೇವರಕೊಂಡ ಅಮ್ಮನಿಂದ ಸೊಸೆಗೆ ವಿಶೇಷ ಗಿಫ್ಟ್

ಫೆಬ್ರವರಿ 26. ಇನ್ನೊಂದೇ ದಿನ. ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ನಡೆಯಲಿದೆ. ವಿರೋಶ್ ಮದುವೆಗೆ ಭರ್ಜರಿ ಸಿದ್ಧತೆ ನಡೆದಿದೆ. ಇದರ ಮಧ್ಯೆ ಭಾವಿಸೊಸೆಗೆ ವಿಜಯ್ ದೇವರಕೊಂಡ ತಾಯಿ ವಿಶೇಷ ಉಡುಗೊರೆ ನೀಡಿದ್ದಾರೆ.

ಇದನ್ನೂ ಓದಿ:ದಿ ವೆಡ್ಡಿಂಗ್ ಆಫ್ ವಿರೋಶ್! – ಮದುವೆ ಫ್ಯಾನ್ಸ್‌ ಸೂಚಿಸಿದ ಹೆಸರನ್ನಿಟ್ಟ ರಶ್ಮಿಕಾ‌, ವಿಜಯ್!

ಸೆಲೆಬ್ರಿಟಿ ಜೋಡಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಗೆ ಕ್ಷಣಗಣನೆ ಶುರುವಾಗಿದೆ. ಈ ಸಂಭ್ರಮದ ನಡುವೆ ವಿಜಯ್ ದೇವರಕೊಂಡ ತಾಯಿ ಮಾಧವಿ ದೇವರಕೊಂಡ ಅವರು ಭಾವಿ ಸೊಸೆಗೆ ವಿಶೇಷ ಉಡುಗೊರೆ ಕೊಟ್ಟಿದ್ದಾರೆ. ಈ ಮೂಲಕ ರಶ್ಮಿಕಾ ಮಂದಣ್ಣರನ್ನ ತಮ್ಮ ಕುಟುಂಬಕ್ಕೆ ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದಾರೆ. ಉದಯಪುರದಲ್ಲಿ ಮಂಗಳವಾರ ರಾತ್ರಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ತಮ್ಮ ವಂಶಪಾರಂಪರ್ಯದ  ಬಳೆಗಳನ್ನು ರಶ್ಮಿಕಾ ಮಂದಣ್ಣಗೆ ಉಡುಗೊರೆಯಾಗಿ ನೀಡಿದ್ದಾರೆ ಮಾಧವಿ ದೇವರಕೊಂಡ. ಉದಯಪುರದ ಐ‍ಷಾರಾಮಿ ಹೋಟೆಲ್‌ ನಲ್ಲಿ ವಿರೋಶ್ ಮದುವೆ ನಡೆಯಲಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಗೆ ಬಂದ 100 ಜನ ಅತಿಥಿಗಳಿಗೆ ಇಲ್ಲಿ ವಿಶೇಷ ಡಿನ್ನರ್ ಪ್ಲಾನ್ ಆಗಿತ್ತು. ಜಪನೀಸ್ ಶೈಲಿಯ ಡಿನ್ನರ್ ವ್ಯವಸ್ಥೆ ಮಾಡಲಾಗಿತ್ತು. ಇದರೊಟ್ಟಿಗೆ ಇಲ್ಲಿ ವಿರೋಷ್ ಪ್ರೀಮಿಯರ್ ಲೀಗ್ ಅಂತ ಎರಡು ಪಂದ್ಯಗಳನ್ನು ಆಡಲಾಗಿದೆ. ಒಂದು ಕ್ರಿಕೆಟ್ ಪಂದ್ಯ, ಮತ್ತೊಂದು ವಾಲಿಬಾಲ್ ಪಂದ್ಯ ನಡೆದಿದೆ.

Sulekha

Leave a Reply

Your email address will not be published. Required fields are marked *