ನಾನು ವಿಜಯ್ ದೇವರಕೊಂಡರನ್ನ ಮದುವೆ ಆಗುತ್ತೇನೆ.. ಕಡೆಗೂ ಗಾಸಿಪ್ಗೆ ಬ್ರೇಕ್ ಹಾಕಿದ ರಶ್ಮಿಕಾ ಮಂದಣ್ಣ

ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮಧ್ಯೆ ಸಂಥಿಂಗ್ ಸಂಥಿಗ್ ನಡಿತಾ ಇದೆ ಎಂಬ ಗಾಸಿಪ್ ಹರಿದಾಡುತ್ತಲೇ ಇತ್ತು. ಆದ್ರೆ ಈ ಬಗ್ಗೆ ಇವರಿಬ್ಬರು ಎಲ್ಲೂ ಹೇಳಿಕೊಂಡಿರಲಿಲ್ಲ. ಇದೀಗ ರಶ್ಮಿಕಾ ತಮ್ಮ ಮದುವೆ ಬಗ್ಗೆ ಅಪ್ಡೇಟ್ ನೀಡಿದ್ದಾರೆ. I will Marry Vijay ಅಂತಾ ಹೇಳೋ ಮೂಲಕ ಹರಿದಾಡ್ತಿರೋ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.
ಇದನ್ನೂ ಓದಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಕಾಂತಾರ ಕನಕವತಿ! – ರುಕ್ಮಿಣಿ ವಸಂತ್ ಕೇಸ್ ಕೊಟ್ಟಿದ್ದು ಯಾರ ಮೇಲೆ?
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಪ್ರೀತಿಸುತ್ತಿದ್ದಾರೆ. ಈ ಜೋಡಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದೆ ಎಂಬ ಸುದ್ದಿ ಹರಿದಾಡಿದ್ದು, ಇದಕ್ಕೆ ರಶ್ಮಿಕಾ ಮಂದಣ್ಣ ಕಡೆಯಿಂದ ಸ್ಪಷ್ಟ ಉತ್ತರ ಸಿಕ್ಕಿರ್ಲಿಲ್ಲ. ಇದನ್ನು ಅವರು ಪರೋಕ್ಷವಾಗಿ ಅಲ್ಲಗಳೆಯುತ್ತಲೇ ಬಂದಿದ್ರು.. ಆದ್ರೀಗ ರಶ್ಮಿಕಾ ಮಂದಣ್ಣ ಈ ವಿಚಾರದಲ್ಲಿ ಮೌನ ಮುರಿದಿದ್ದಾರೆ. ತಾವು ವಿಜಯ್ನ ಮದುವೆ ಆಗೋದಾಗಿ ಅವರು ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್ಫ್ರೆಂಡ್’ ಸಿನಿಮಾ ನವೆಂಬರ್ 7ರಂದು ರಿಲೀಸ್ ಆಗಿದೆ. ಈ ಚಿತ್ರದ ಪ್ರಚಾರದಲ್ಲಿ ರಶ್ಮಿಕಾ ಭಾಗಿ ಆಗಿದ್ದಾರೆ. ರಶ್ಮಿಕಾ ಜೊತೆ ಸಹ ನಟ ದೀಕ್ಷಿತ್ ಶೆಟ್ಟಿ ಕೂಡ ಇದ್ದರು. ಈ ವೇಳೆ ರಶ್ಮಿಕಾಗೆ ವಿವಿಧ ಪ್ರಶ್ನೆಗಳು ಎದುರಾಗಿವೆ. ಇದರಲ್ಲಿ ಅವರ ಮದುವೆ ವಿಚಾರದ ಬಗ್ಗೆ ಹೆಚ್ಚು ಪ್ರಶ್ನೆಗಳು ಎದುರಾಗಿವೆ. ನಿಮ್ಮ ಬಗ್ಗೆ ಒಂದು ವದಂತಿ ಕೇಳಿ ಬಂದಿರುತ್ತದೆ. ಆದರೆ, ಅದು ನಿಜವಾಗಿರುತ್ತದೆ. ಯಾವುದು ಅದು ಎಂದು ರಶ್ಮಿಕಾಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ನಗುತ್ತಾ ಉತ್ತರಿಸಿದ ಅವರು, ‘ಏನು ಹೇಳಬಹುದು? ಅದು ಎಲ್ಲರಿಗೂ ಗೊತ್ತಿದೆ’ ಎಂದರು. ಈ ಮೂಲಕ ವಿಜಯ್ ಜೊತೆಗಿನ ನಿಶ್ಚಿತಾರ್ಥ ವಿಚಾರವನ್ನು ಅವರು ಬಹುತೇಕ ಖಚಿತಪಡಿಸಿದರು.
‘ಯಾರನ್ನು ಮದುವೆ ಆಗುತ್ತೀರಿ’ ಎಂದು ಕೂಡ ಕೇಳಲಾಯಿತು. ಇದಕ್ಕೆ ರಶ್ಮಿಕಾ ಮಂದಣ್ಣ ಅವರು, ಹಿಂದೂ ಮುಂದೂ ಯೋಚಿಸದೆ ‘ವಿಜಯ್ ಅವರನ್ನು ಮದುವೆ ಆಗ್ತೀನಿ’ ಎಂದರು. ಸದ್ಯ ರಶ್ಮಿಕಾ-ವಿಜಯ್ ಸುದ್ದಿ ಎಲ್ಲ ಕಡೆಗಳಲ್ಲಿ ಹರಡಿದೆ. ಇದು ಸುಳ್ಳು ಎಂದಾಗಿದ್ದರೆ ಇದನ್ನು ಅವರು ಅಲ್ಲಗಳೆಯುತ್ತಿದ್ದರು. ಆದರೆ, ರಶ್ಮಿಕಾ ಆ ರೀತಿ ಮಾಡುತ್ತಿಲ್ಲ. ಪರೋಕ್ಷವಾಗಿ ಇದನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ.

ನೋಡಿರಿ

