ನ್ಯೂಯಾರ್ಕ್​ನಲ್ಲಿ ಕೈ ಕೈ ಹಿಡಿದು ನಡೆದ ರಶ್ಮಿಕಾ, ವಿಜಯ್‌ ದೇವರಕೊಂಡ! – ಮದುವೆ ಆಗ್ತಾರಾ ಸ್ಟಾರ್‌ ಜೋಡಿ?

ನ್ಯೂಯಾರ್ಕ್​ನಲ್ಲಿ ಕೈ ಕೈ ಹಿಡಿದು ನಡೆದ ರಶ್ಮಿಕಾ, ವಿಜಯ್‌ ದೇವರಕೊಂಡ! – ಮದುವೆ ಆಗ್ತಾರಾ ಸ್ಟಾರ್‌ ಜೋಡಿ?

ಕಾಂಟ್ರವರ್ಸಿ ಕ್ವೀನ್‌ ರಶ್ಮಿಕಾ ಮಂದಣ್ಣ ಸದಾ ಸುದ್ದಿಯಲ್ಲಿರೋದು ಕಾಮನ್..‌ ಇತ್ತೀಚೆಗಂತೂ ಕೂತ್ರೂ ನಿಂತೂ ಸುದ್ದಿಯಾಗ್ತಿದ್ದಾರೆ.. ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮಧ್ಯೆ ಸಮ್‌ಥಿಂಗ್‌  ಸಮ್‌ಥಿಂಗ್‌ ನಡಿತಾ ಇದೆ.. ಇದೀಗ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಫಾರಿನ್‌ನಲ್ಲಿ ಕೈ ಕೈ ಹಿಡಿದುಕೊಂಡು ಓಡಾಡಿದ್ದಾರೆ. ಇದ್ರ ಫೋಟೋ, ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: POKಯಲ್ಲಿ ಮಳೆಯ ಆರ್ಭಟ – 337 ಮಂದಿ ಸಾ*ವು, 150 ಕ್ಕೂ ಹೆಚ್ಚು ನಾಪತ್ತೆ

ಕೂರ್ಗ್‌ ಬ್ಯೂಟಿ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್‌  ಹರಿದಾಡುತ್ತಿದೆ. ಈ ಬಗ್ಗೆ ಇವರಿಬ್ಬರು ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ.. ಆದ್ರೆ ಆಗಾಗ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ತಾರೆ. ಇದೀಗ ಮತ್ತೆ ವಿಜಯ್ ಹಾಗೂ ರಶ್ಮಿಕಾ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈಗ ವಿಜಯ್ ಹಾಗೂ ರಶ್ಮಿಕಾ ಅವರು ನ್ಯೂಯಾರ್ಕ್​ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಮ್ಯಾನ್​ಹಾಟನ್ ರಸ್ತೆಗಳಲ್ಲಿ ವಿಜಯ್ ಹಾಗೂ ರಶ್ಮಿಕಾ ಒಟ್ಟಾಗಿ ನಡೆದಿದ್ದಾರೆ. ಈ ವೇಳೆ ಅವರು ಕೈ ಕೈ ಹಿಡಿದುಕೊಂಡಿದ್ದರು.

ಅಂದ್ಹಾಗೆ ರಶ್ಮಿಕಾ ಹಾಗೂ ವಿಜಯ್‌ ದೇವರಕೊಂಡ ವಿದೇಶದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಕ್ಕೂ ಒಂದು ಕಾರಣ ಇದೆ.  ನ್ಯೂಯಾರ್ಕ್​​ನಲ್ಲಿ ನಡೆದ 43ನೇ ‘ಇಂಡಿಯನ್ ಡೇ ಪರೇಡ್​’ಗೆ ಇಬ್ಬರೂ ಮುಖ್ಯ ಅತಿಥಿ ಆಗಿದ್ದರು. ಅಲ್ಲಿರುವ ಭಾರತೀಯರು ಇವರನ್ನು ಅತಿಥಿಯಾಗಿ ಕರೆಸಿದ್ದರು.  ಹೀಗಾಗಿ ಇವರಿಬ್ಬರು ಒಟ್ಟಿಗೆ ಇರುವ ಫೋಟೋಗಳು ವೈರಲ್ ಆಗಿವೆ.

ರಶ್ಮಿಕಾ ಹಾಗೂ ವಿಜಯ್ ಜೋಡಿಯನ್ನು ಅನೇಕರು ಕೊಂಡಾಡಿದ್ದಾರೆ. ‘ವಿರಶ್’ ಈಸ್ ಬ್ಯಾಕ್ ಎಂದು ಕೆಲವರು ಹೇಳಿದ್ದಾರೆ. ವಿರಶ್ ಎಂದರೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪದವನ್ನು ಶಾರ್ಟ್ ಆಗಿ ಹೇಳಿರುವುದು.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ‘ಗೀತ ಗೋವಿಂದಂ’ ಸಿನಿಮಾಗೆ 7 ವರ್ಷ ಆಗಿದ್ದನ್ನು ಸಂಭ್ರಮಿಸುತ್ತಿದ್ದಾರೆ. ಇತ್ತೀಚೆಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಗೀತ ಗೋವಿಂದಂ ಸಿನಿಮಾದ ಪೋಸ್ಟರ್ ಹಾಕಿ, ಸಂತಸ ಹೊರಹಾಕಿದ್ದರು. ಇವರ ಮಧ್ಯೆ ಇದೇ ಸೆಟ್​ನಲ್ಲಿ ಪ್ರೀತಿ ಮೂಡಿತು ಎಂದು ಹೇಳಲಾಗುತ್ತಿದೆ.

Shwetha M