ಪೋಸ್ಟ್ ಮಾಡಿದ್ದು ಬೇರೆ ಬೇರೆ ಫೋಟೋ.. ಲೊಕೇಷನ್ ಮಾತ್ರ ಒಂದೇ! – ರಶ್ಮಿಕಾ, ದೇವರಕೊಂಡ ಗುಟ್ಟು ರಟ್ಟು!

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಡೇಟಿಂಗ್ ನಡೆಸ್ತಿದ್ದಾರೆ ಎಂಬ ಗಾಸಿಪ್ ಹಲವು ಸಮಯದಿಂದ ಹರಿದಾಡ್ತಿದೆ. ಇದೀಗ ಅವರಿಬ್ಬರ ರಿಲೇಷನ್ಶಿಪ್ಗೆ ಸಾಕ್ಷಿ ನೀಡುವಂತಹ ಫೋಟೋ ವೈರಲ್ ಆಗಿದೆ. ಆದರೆ ಈ ಫೋಟೋಗಳಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಜೊತೆಯಾಗಿ ಕಾಣಿಸಿಕೊಂಡಿಲ್ಲ. ಹಾಗಿದ್ದರೂ ಕೂಡ ನೆಟ್ಟಿಗರಿಗೆ ಅಸಲಿ ವಿಷಯ ಏನೆಂಬುದು ಗೊತ್ತಾಗಿದೆ. ಅದಕ್ಕೆ ಕಾರಣ ಆಗಿರುವುದು ಒಂದೇ ಲೊಕೇಷನ್!
ಇದನ್ನೂ ಓದಿ: ಇಂದು ಸೋದರರ ನಡುವೆ ಕದನ- ಆರ್ಸಿಬಿ Vs ಮುಂಬೈ ಪಂದ್ಯದಲ್ಲಿ ಗೆಲ್ಲೋದು ಯಾರು?
ಹೌದು, ರಶ್ಮಿಕಾ ಮಂದಣ್ಣ ಅವರು ಏಪ್ರಿಲ್ 5ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಅವರ ಸಾಲು ಸಾಲು ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿರುವುದರಿಂದ ಈ ಬಾರಿಯ ಹುಟ್ಟುಹಬ್ಬ ಅವರಿಗೆ ತುಂಬ ವಿಶೇಷ ಆಗಿದೆ. ಹಾಗಾಗಿ ಅವರು ಒಮನ್ಗೆ ತೆರಳಿ ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಅಲ್ಲಿಂದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಳಿಕ ವಿಜಯ್ ದೇವಕೊಂಡ ಕೂಡ ಕೆಲವು ಫೋಟೋ ಪೋಸ್ಟ್ ಮಾಡಿದ್ದು, ಅವರ ಬ್ಯಾಕ್ಗ್ರೌಂಡ್ ನೋಡಿದ ನೆಟ್ಟಿಗರಿಗೆ ಸಾಕ್ಷಿ ಸಿಕ್ಕಂತೆ ಆಗಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಜೊತೆಯಾಗಿ ವಿಮಾನದಲ್ಲಿ ಪ್ರಯಾಣ ಮಾಡಿಲ್ಲ. ಜನರಿಗೆ ಅನುಮಾನ ಬಾರದೇ ಇರಲಿ ಎಂಬ ಕಾರಣಕ್ಕೆ ಒಂದು ದಿನದ ಅಂತರದಲ್ಲಿ ಅವರಿಬ್ಬರು ಬೇರೆ ಬೇರೆಯಾಗಿ ವಿದೇಶಕ್ಕೆ ತೆರಳಿದ್ದರು. ಆದರೆ ವಿದೇಶಕ್ಕೆ ಹೋಗಿ ಸೇರಿಕೊಂಡಿರುವುದು ಒಂದೇ ಲೊಕೇಷನ್ನಲ್ಲಿ! ಇಬ್ಬರು ಕೂಡ ಒಂದೇ ಬೀಚ್ನನಲ್ಲಿ ಇದ್ದಾರೆ ಎಂಬುದಕ್ಕೆ ಅವರಿಬ್ಬರ ಫೋಟೋದಲ್ಲಿ ಇರುವ ಬ್ಯಾಕ್ಗ್ರೌಂಡ್ ಸಾಕ್ಷಿಯಾಗಿದೆ.
ಈ ಮೊದಲು ಕೂಡ ಇದೇ ರೀತಿ ಆಗಿತ್ತು. ಗುಟ್ಟಾಗಿ ಫಾರಿನ್ ಟ್ರಿಪ್ಗೆ ತೆರಳಿದ್ದ ಅವರು ಬೇರೆ ಬೇರೆ ಫೋಟೋಗಳನ್ನು ಹಂಚಿಕೊಂಡಿದ್ದರೂ ಕೂಡ ಜನರು ಫೋಟೋದ ಬ್ಯಾಕ್ಗ್ರೌಂಡ್ ನೋಡಿ ಅಸಲಿ ವಿಷಯ ಪತ್ತೆ ಮಾಡಿದ್ದರು. ಈ ಬಾರಿ ಕೂಡ ಅದು ಮರುಕಳಿಸಿದೆ. ಹಲವು ವರ್ಷಗಳಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಆಪ್ತವಾಗಿದ್ದಾರೆ. ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತುಕೊಂಡಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಬಗ್ಗೆ ಸಾಕಷ್ಟು ಗಾಸಿಪ್ಗಳು ಹರಿದಾಡುತ್ತಿವೆ. ಅನೇಕ ವಿಶೇಷ ಸಂದರ್ಭಗಳಲ್ಲಿ ರಶ್ಮಿಕಾ ಮಂದಣ್ಣ ಅವರು ದೇವರಕೊಂಡ ಕುಟುಂಬದ ಜೊತೆಗೆ ಕಾಣಿಸಿಕೊಂಡಿದ್ದರು. ಆದರೆ ಎಂದಿಗೂ ಕೂಡ ತಮ್ಮ ಪ್ರೀತಿಯ ಬಗ್ಗೆ ಅವರು ಬಹಿರಂಗವಾಗಿ ಮಾತನಾಡಿಲ್ಲ ಅಷ್ಟೇ.