ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಡೇಟಿಂಗ್ ವಿಡಿಯೋ ವೈರಲ್ – ಮದುವೆಯಾದರೆ ಚೆಂದ ಅಂತಿದ್ದಾರೆ ಫ್ಯಾನ್ಸ್

ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಡೇಟಿಂಗ್ ವಿಡಿಯೋ ವೈರಲ್ – ಮದುವೆಯಾದರೆ ಚೆಂದ ಅಂತಿದ್ದಾರೆ ಫ್ಯಾನ್ಸ್

ಸೆಲೆಬ್ರಿಟಿಗಳು ಏನು ಮಾಡಿದ್ರೂ ಸುದ್ದಿಯೇ. ಅದರಲ್ಲೂ ನಟ, ನಟಿಯರು ಒಟ್ಟೊಟ್ಟಿಗೆ ಕಾಣಿಸಿಕೊಂಡದೆ ರೆಕ್ಕೆ ಪುಕ್ಕ ಎಲ್ಲಾ ಸೇರಿ ಏನೇನೋ ರೂಪ ಪಡೆದುಬಿಡುತ್ತೆ. ಇನ್ನೂ ಹಲವು ಸಲ ಗುಟ್ಟು ಗುಟ್ಟಾಗಿಯೇ ಸುತ್ತಾಡಿ ಕೊನೆಗೆ ಮದುವೆಯಾಗುವುದಾಗಿ ಘೋಷಣೆ ಮಾಡಿಬಿಡುತ್ತಾರೆ. ಇದೀಗ ಟಾಲಿವುಟ್ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯೂ ಕೂಡ ಸೀಕ್ರೆಟ್ ಆಗಿಯೇ ಸುತ್ತಾಡುತ್ತಿದೆ. ಇಬ್ಬರ ಬಗ್ಗೆ ಮೊದಲಿನಿಂದಲೂ ಗಾಸಿಪ್ ಇದ್ರೂ ಇಬ್ಬರೂ ಅಧಿಕೃತವಾಗಿ ಏನನ್ನೂ ಬಾಯಿ ಬಿಟ್ಟಿಲ್ಲ.

ಇದನ್ನೂ ಓದಿ : ಕಿಚ್ಚ ಸುದೀಪ್ ಅಭಿನಯದ ʼK46ʼ ಚಿತ್ರದ ಟೀಸರ್ ರಿಲೀಸ್ ಡೇಟ್ ಅನೌನ್ಸ್!

ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮಧ್ಯೆ ಪ್ರೀತಿ ಹುಟ್ಟಿದೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಆದರೆ, ಈವರೆಗೂ ಈ ಬಗ್ಗೆ ಇಬ್ಬರೂ ಕೂಡ ಎಲ್ಲಿಯೂ ಹೇಳಿಕೊಂಡಿಲ್ಲ. ‘ನಾವಿಬ್ಬರೂ ಗೆಳೆಯರಷ್ಟೇ’ ಎಂದು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ (Vijay Devarakonda) ಹೇಳಿಕೊಂಡು ಬರುತ್ತಲೇ ಇದ್ದಾರೆ. ಈಗ ರಶ್ಮಿಕಾ ಅವರು ವಿಜಯ್ ಜೊತೆ ಲಂಚ್ ಡೇಟ್ ತೆರಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದ ‘ಗೀತ ಗೋವಿಂದಂ’ ಸಿನಿಮಾದಲ್ಲಿ ಇಬ್ಬರ ಮಧ್ಯೆ ಕಿಸ್ಸಿಂಗ್ ದೃಶ್ಯಗಳು ಕೂಡ ಇತ್ತು. ರಶ್ಮಿಕಾ ಎಂಗೇಜ್​ಮೆಂಟ್ ಮುರಿದು ಬೀಳಲು ಇದು ಕೂಡ ಕಾರಣ ಎಂಬುದು ಅನೇಕರ ವಾದ. ಆದರೆ, ಇದನ್ನು ರಶ್ಮಿಕಾ ಒಪ್ಪಿಕೊಂಡಿಲ್ಲ. ಆ ಬಳಿಕ ವಿಜಯ್ ಹಾಗೂ ರಶ್ಮಿಕಾ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಂಡರು. ವಿಜಯ್ ಹಾಗೂ ರಶ್ಮಿಕಾ ಸಂಬಂಧ ಮುರಿದು ಬಿದ್ದ ಬಗ್ಗೆ ಈ ಮೊದಲು ವರದಿ ಆಗಿತ್ತು. ಬಳಿಕ ಇಬ್ಬರೂ ಪ್ಯಾಚಪ್ ಮಾಡಿಕೊಂಡರು ಎನ್ನಲಾಯಿತು. ಈಗ ವಿಜಯ್-ರಶ್ಮಿಕಾ ಮಧ್ಯೆ ಎಲ್ಲವೂ ಸರಿಯಾಗಿದೆ. ವಿಜಯ್ ಹಾಗೂ ರಶ್ಮಿಕಾ ರೆಸ್ಟೋರೆಂಟ್ ಒಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಇವರ ಕುಟುಂಬದವರು ಕೂಡ ಇದ್ದರು ಅನ್ನೋದು ವಿಶೇಷ.

ರಶ್ಮಿಕಾ-ವಿಜಯ್ ಮದುವೆ ಆಗಬೇಕು ಎಂಬುದು ಅನೇಕ ಅಭಿಮಾನಿಗಳ ಕೋರಿಕೆ. ಇದು ಮುಂದೊಂದು ದಿನ ನಿಜವಾದರೂ ಅಚ್ಚರಿ ಏನಿಲ್ಲ. ರಶ್ಮಿಕಾ ಹಾಗೂ ವಿಜಯ್ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಇವರ ಜನಪ್ರಿಯತೆ ಸದ್ಯಕ್ಕಂತೂ ಕಡಿಮೆ ಆಗುವಂಥದ್ದಲ್ಲ. ‘ಲೈಗರ್’ ಬಳಿಕ ವಿಜಯ್ ಅವರು ಬ್ಯಾಕ್ ಟು ಬ್ಯಾಕ್ 3 ಸಿನಿಮಾ ಒಪ್ಪಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಕೈಯಲ್ಲಿ ‘ಪುಷ್ಪ 2’ ಸೇರಿ ಕೆಲವು ಮಹತ್ವದ ಪ್ರಾಜೆಕ್ಟ್​ಗಳಿವೆ.

suddiyaana