ದೀಪಾವಳಿಗೆ ದೆವ್ವವಾಗಿ ಬರಲಿದ್ದಾರೆ ರಶ್ಮಿಕಾ ಮಂದಣ್ಣ – ಹಾರರ್ ಸಿನಿಮಾದಲ್ಲಿ ನ್ಯಾಷನಲ್ ಕ್ರಷ್ ಹವಾ

ಬಾಲಿವುಡ್‌ನಲ್ಲಿ ಈಗ ರಶ್ಮಿಕಾ ಮಂದಣ್ಣ ಬೇಡಿಕೆಯ ನಟಿಯಾಗಿದ್ದಾರೆ. ಲವ್ಲಿ ಗರ್ಲ್, ಬಬ್ಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ರಶ್ಮಿಕಾ ಇದೀಗ ದೆವ್ವವಾಗಿಯೂ ಕಾಡಲಿದ್ದಾರೆ. ಇದೇ ಮೊದಲ ಬಾರಿಗೆ ರಶ್ಮಿಕಾ ಹಾರರ್ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದಲ್ಲಿ ಗ್ಲಾಮರಸ್ ಭೂತವಾಗಿ ಅಭಿಮಾನಿಗಳನ್ನ ಕಾಡಲಿದ್ದಾರೆ.
ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಒಂದಕ್ಕಿಂತ ಒಂದು ಅದ್ಭುತ ಅವಕಾಶಗಳು ಸಿಗ್ತಿದೆ. ಇದೀಗ ರಶ್ಮಿಕಾ ನಟನೆಯ ಹೊಸ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸಿದ್ದಾರೆ. ರಶ್ಮಿಕಾ ಸ್ವತಃ ದೆವ್ವದ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ವಿಶೇಷತೆಯೆಂದರೆ, ದೆವ್ವವಾಗಿ ಕಾಡುವ ರಶ್ಮಿಕಾ, ಪಡ್ಡೆ ಹುಡುಗರಿಗೆ ನಿರಾಶೆ ಮಾಡುವುದಿಲ್ಲ. ಯಾಕೆಂದರೆ, ದೆವ್ವವಾಗಿ ಕಾಡಿದರೂ ಕೂಡಾ ಸಿಕ್ಕಾಪಟ್ಟೆ ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಸಿನಿಮಾದ ಹೆಸರು ಥಮ. ಇದರಲ್ಲಿ ರಶ್ಮಿಕಾ, ಭಯ ಹುಟ್ಟಿಸುವ ಪ್ರೇತವಲ್ಲ ಬದಲಿಗೆ ಪ್ರೀತಿ ಹುಟ್ಟಿಸುವ ಚೆಲುವಾದ ಪ್ರೇತ. ಈ ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾ ನಾಯಕ.
ಈ ಹಿಂದೆ ‘ಸ್ತ್ರೀ’ ಸೇರಿದಂತೆ ಇನ್ನೂ ಕೆಲವು ಹಾರರ್ ಸಿನಿಮಾಗಳನ್ನು ನಿರ್ಮಿಸಿದ್ದ ತಂಡವೇ ‘ಥಮ’ ಸಿನಿಮಾವನ್ನು ಸಹ ನಿರ್ಮಾಣ ಮಾಡಿದೆ. ಜನುಮ-ಜನುಮಾಂತರದ ಪ್ರೇಮಕತೆಯನ್ನು ಸಿನಿಮಾ ಒಳಗೊಂಡಿದೆ. ಪ್ರಿಯಕರನಿಗಾಗಿ ನೂರಾರು ವರ್ಷಗಳಿಂದ ಕಾಯುತ್ತಿರುವ ‘ಗ್ಲಾಮರಸ್’ ದೆವ್ವದ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ ಈಗ ಬಿಡುಗಡೆ ಆಗಿರುವ ಟೀಸರ್ನಲ್ಲಿ ರಶ್ಮಿಕಾ ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಆಯುಷ್ಮಾನ್ ಜೊತೆಗಿನ ಲಿಪ್ ಲಾಕ್ ದೃಶ್ಯವೂ ಸಹ ಟೀಸರ್ನಲ್ಲಿದೆ. ಟೀಸರ್ ನೋಡಿದವರಿಗೆ ಇದೊಂದು ರಕ್ತ-ಸಿಕ್ತ ಮತ್ತು ಭಯ ಹುಟ್ಟಿಸುವ ಪ್ರೇಮಕತೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಸಿನಿಮಾದ ವಿಲನ್ ಪಾತ್ರದಲ್ಲಿ ನವಾಜುದ್ಧೀನ್ ಸಿದ್ಧಿಖಿ ನಟಿಸಿದ್ದಾರೆ. ‘ಥಮ’ ಸಿನಿಮಾವನ್ನು ಆದಿತ್ಯ ಸರ್ಪೋರ್ದಾರ್ ನಿರ್ದೇಶನ ಮಾಡಿದ್ದಾರೆ. ಹಾರರ್ ಸಿನಿಮಾಗಳಿಂದಲೇ ಹೆಸರು ಮಾಡಿರುವ ಮ್ಯಾಡ್ಡಾಕ್ ಫಿಲಮ್ಸ್ನವರು ಈ ಸಿನಿಮಾದ ನಿರ್ಮಾಣ ಮಾಡಿದ್ದಾರೆ.
ಥಮ ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ದೀಪಾವಳಿಗೆ ದೆವ್ವವಾಗಿ ಬರಲಿರುವ ರಶ್ಮಿಕಾ ಮಂದಣ್ಣನ ಹೊಸ ಅವತಾರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಹಾಟ್ ದೆವ್ವ ರಶ್ಮಿಕಾ ಮಂದಣ್ಣ ಪ್ರೇಕ್ಷಕರನ್ನ ಯಾವ ರೀತಿ ಕಾಡಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.

ನೋಡಿರಿ

