ತುಂಡುಡುಗೆಯಲ್ಲಿ ಕೊಡಗಿನ ಬೆಡಗಿ ಹಾಟ್ ಹಾಟ್..! – ರಶ್ಮಿಕಾ ಶಾರ್ಟ್ ಡ್ರೆಸ್‌ಗೆ ಫ್ಯಾನ್ಸ್ ಶಾಕ್..!

ತುಂಡುಡುಗೆಯಲ್ಲಿ ಕೊಡಗಿನ ಬೆಡಗಿ ಹಾಟ್ ಹಾಟ್..! – ರಶ್ಮಿಕಾ ಶಾರ್ಟ್ ಡ್ರೆಸ್‌ಗೆ ಫ್ಯಾನ್ಸ್ ಶಾಕ್..!

ಕನ್ನಡತಿ ರಶ್ಮಿಕಾ  ಮಂದಣ್ಣ ಏನ್ ಮಾಡಿದ್ರೂ ಸುದ್ದಿ. ಅದರಲ್ಲೂ ಬಾಲಿವುಡ್‌ನಲ್ಲಿ ತನ್ನದೇ ಹವಾ ಸೃಷ್ಟಿಸಿರುವ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ  ಗುಡ್‌ ಬೈ ಚಿತ್ರಕ್ಕಾಗಿ ಬೆಸ್ಟ್ ಡೆಬ್ಯೂ ಜೀ ಸಿನಿ ಅವಾರ್ಡ್ ಗೂ ಪಾತ್ರರಾಗಿದ್ದಾರೆ. ಆದರೆ, ಅವಾರ್ಡ್ ಫಂಕ್ಷನ್‌ನಲ್ಲಿ ರಶ್ಮಿಕಾ ಧರಿಸಿರೋ ಡ್ರೆಸ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದರ ಜೊತೆ ಜೊತೆಗೆ ರಶ್ಮಿಕಾ ಸಖತ್ ಟ್ರೋಲ್‌ಗೂ ಒಳಗಾಗಿದೆ.

ಲಾಂಗ್ ಟ್ರೆಲ್ ಇರೋ ಕಪ್ಪು ಬಣ್ಣದ ಮಿನಿ ಡ್ರೆಸ್‌ನಲ್ಲಿ ರಶ್ಮಿಕಾ ಮಿರಿ ಮಿರಿ ಮಿಂಚಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ಕೊಡಗಿನ ಬೆಡಗಿ ತನ್ನ ಹಾಟ್ ಅವತಾರದ ಶಾರ್ಟ್ ಡ್ರೆಸ್‌ನಿಂದಾಗಿ ಟೀಕೆಗೂ ಗುರಿಯಾಗಿದ್ದಾರೆ.

ಇದನ್ನೂ ಓದಿ:  ದುಬಾರಿ ವಿಲ್ಲಾ ಖರೀದಿಸಿ ವಿಡಿಯೋ ಹಂಚಿಕೊಂಡ ವಿರಾಟ್ ಕೊಹ್ಲಿ – ಅಬ್ಬಬ್ಬಾ ಅದರ ಬೆಲೆ ಕೇಳಿದ್ರೆ ಶಾಕ್ ಪಕ್ಕಾ!   

ಕೊಡಗಿನ ಬೆಡಗಿಯ ಕಪ್ಪುಡುಗೆಯ ಹಾಟ್ ಅವತಾರಕ್ಕೆ ಚಿತ್ರವಿಚಿತ್ರ ಕಾಮೆಂಟ್ಸ್ ಬರ್ತಿದೆ. ಬಾಲಿವುಡ್ ಬಿಚ್ಚಮ್ಮ ಉರ್ಫಿ ಜಾವೇದ್‌ ನ್ನ ರಶ್ಮಿಕಾ ಫಾಲೋ ಮಾಡ್ತಿದ್ದಾರಾ ಅಂತಾ ಅಭಿಮಾನಿಗಳು ಕೂಡಾ ಬೇಜಾರಲ್ಲೇ ಪ್ರತಿಕ್ರಿಯೆ ಮಾಡಿದ್ದಾರೆ. ಈಗಾಗ್ಲೇ ಫೇಮಸ್ ಆಗಿರುವವರಿಗೆ ಎಕ್ಸ್ಪೋಸ್ ಮಾಡುವ ಕರ್ಮ ಏನು? ಎಂದು ಒಬ್ಬರು ಕಾಮೆಂಟ್ ಮಾಡಿದ್ರೆ, ಮತ್ತೊಬ್ಬರು “ಉರ್ಫಿ 2.O” ಎಂದು ಬರೆದಿದ್ದಾರೆ. ಈ ಬಾರಿ ರಶ್ಮಿಕಾಗೆ ಬಹುತೇಕ ನೆಗೆಟಿವ್ ಕಾಮೆಂಟ್‌ಗಳೇ ಬಂದಿವೆ.

suddiyaana