ಕ್ಯಾಪ್ಟನ್ಸಿಯಲ್ಲಿ ಸೋತ ರಾಶಿಕಾ? – ಬ್ಯಾಕ್ ಟು ಬ್ಯಾಕ್ ಎಡವಟ್ಟು.. BBK ಕ್ಯಾಪ್ಟನ್ ಟ್ರೋಲ್

ಬಿಗ್‌ಬಾಸ್ ಮನೆಯ ಆಟ ಕ್ಷಣ ಕ್ಷಣಕ್ಕೂ ರೋಚಕತೆ ಮೂಡಿಸುತ್ತಿದೆ. ಈ ವಾರ ರಾಶಿಕಾ ಕ್ಯಾಪ್ಟನ್ ಆಗಿದ್ದಾರೆ. ದೊಡ್ಮನೆಯಲ್ಲಿ ಸರಿಯಾಗಿ ಉಸ್ತುವಾರಿ ನಡೆಸಬೇಕಿದ್ದ ಈಗ ಫೇವರಿಸಂ ಗೇಮ್ ಕೂಡ ಶುರುಮಾಡಿದ್ರಾ ಅನ್ನೋ ಚರ್ಚೆ ಶುರುವಾಗಿದೆ. ಬಿಗ್ ಬಾಸ್ ನಿಯಮವನ್ನ ಕೂಡ ಲೆಕ್ಕಕ್ಕೆ ತೆಗೆದುಕೊಳ್ಳದೇ, ತನ್ನದೇ ನಿರ್ಧಾರ ಸರಿಯಿದೆ ಅನ್ನೋ ರೀತಿ ಆಡುತ್ತಿದ್ದಾರೆ.
ಇದನ್ನೂ ಓದಿ: ವಿಷವಾಗುತ್ತಿದೆ ಉಸಿರಾಡೋ ಗಾಳಿ! – ರಾಷ್ಟ್ರ ರಾಜಧಾನಿಯಲ್ಲಿ ಶಾಲೆಗಳು ಬಂದ್!
ಬಿಗ್‌ಬಾಸ್ ಮನೆಯ ಕ್ಯಾಪ್ಟನ್‌ಗೆ ಟಾಸ್ಕ್‌ನ ಉಸ್ತುವಾರಿ ಜವಾಬ್ದಾರಿ ನೀಡಲಾಗುತ್ತದೆ. ಈ ವಾರ ರಾಶಿಕಾ ಕ್ಯಾಪ್ಟನ್ ಆಗಿದ್ದಾರೆ. ಆದ್ರೆ ರಾಶಿಕಾ ಕ್ಯಾಪ್ಟನ್ ಆಗಿದ್ದು ಅನೇಕರಿಗೆ ಇಷ್ಟ ಆಗಿಲ್ಲ. ಇವೆಲ್ಲದ್ರ ಮಧ್ಯೆ ರಾಶಿಕಾ ನಿರ್ಧಾರ ತೆಗೆದುಕೊಳ್ಳುವಲ್ಲಿ ಪದೇ ಪದೆ ಎಡವುತ್ತಿರುವದಲ್ಲದೇ, ಫೇವರಿಸಂ ಗೇಮ್ ಕೂಡ ಶುರುಮಾಡಿದ್ದಾರೆ. ನಿನ್ನೆಯ ಟಾಸ್ಕ್‌ನಲ್ಲೂ ರಾಶಿಕಾ ಅಶ್ವಿನಿ ಪರ ವಾದ ಮಾಡಿದ್ರು. ಟಾಸ್ಕ್ ವೇಳೆ ಅಶ್ವಿನಿ ಚೈತ್ರಾ ಕೈಯನ್ನ ಲಾಕ್ ಮಾಡಿದ್ರು. ಚೈತ್ರಾ ನೋವು ನೋವು ಎಂದು ಕಿರುಚಾಡಿದ್ರು. ಈ ವೇಳೆ ರಾಶಿಕಾ ಸುಮ್ಮನೆ ಇದ್ರು. ಆದ್ರೆ ಚೈತ್ರಾ ಅಶ್ವಿನಿ ಬಟ್ಟೆ ಎಳೆದಿದ್ದಕ್ಕೆ ರಾಶಿಕಾ ಒಂದು ಪಾಯಿಂಟ್ಸ್ ಕಟ್ ಮಾಡಿದ್ದಾರೆ. ಇದು ಫೈಯರ್ ಬ್ರ್ಯಾಂಡ್‌ಗೆ ಬೇಸರ ತಂದಿದೆ.
ಮತ್ತೊಂದ್ಕಡೆ ರಾಶಿಕಾ ಶೆಟ್ಟಿ ಸೂರಜ್ನ ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಮಾಡುವ ಪ್ರಕ್ರಿಯೆಗೆ ಹೆಸರು ತೆಗೆದುಕೊಂಡರು. ಈ ವೇಳೆ ಅವರು ಕೊಟ್ಟ ಕಾರಣವೇ ಈಗ ಚರ್ಚೆಗೆ ಗ್ರಾಸವಾಗಿದೆ. ರಾಶಿಕಾ ಅವರು ಸೂರಜ್ನ ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಮಾಡೋದಾಗಿ ಹೇಳಿದ್ದಾರೆ. ಕಳೆದ ವಾರ ಅವರು ಕ್ಯಾಪ್ಟನ್ ಆಗಬೇಕಿತ್ತು. ಆದರೆ, ಚೈತ್ರಾ ಅವರು ಮಾಡಿದ ತಪ್ಪಿನಿಂದ ಅವರಿಗೆ ಆ ಅವಕಾಶ ತಪ್ಪಿತು. ಹೀಗಾಗಿ, ಈ ಬಾರಿ ಅವರನ್ನು ನಾನು ಆಯ್ಕೆ ಮಾಡುತ್ತಿದ್ದೇನೆ ಎಂದು ಹೇಳಿದರು. ಇದನ್ನು ನೋಡಿ ಅನೇಕರಿಗೆ ನಗು ಬಂದಿದೆ. ಯಾಕಂದ್ರ ಕಳೆದ ವಾರ ಸೂರಜ್ ಅವರು ಇದೇ ವಿಷಯವನ್ನು ಇಟ್ಟುಕೊಂಡು ರಾಶಿಕಾ ಬಳಿ ವಾದ ಮಾಡಿದ್ದರು. ಆಗ ರಾಶಿಕಾ ಅವರು ಇದನ್ನು ಒಪ್ಪಿಲ್ಲ. ನಾನು ಆಡಿ ಕ್ಯಾಪ್ಟನ್ ಆಗಿರೋದು. ಎಲ್ಲಿಯೂ ತಪ್ಪು ನಡೆದಿಲ್ಲ ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದರು. ಆದರೆ, ಕೆಲವೇ ದಿನಗಳಲ್ಲಿ ಆ ನಿರ್ಧಾರ ಬದಲಾಗಿದೆ ಎಂಬುದು ಅನೇಕರಿಗೆ ಅಚ್ಚರಿ ತಂದಿದೆ. ಅನೇಕರು ರಾಶಿಕಾನ ಜೋಕರ್ ಎಂದಿದ್ದಾರೆ.

ನೋಡಿರಿ

