ಅತ್ತರೆ ಸಮಾಧಾನ ಮಾಡಲ್ಲ, ಜೊತೆಯಲ್ಲಿ ಇರಲ್ಲ – ಸೂರಜ್ ಜೊತೆ ಟೂ ಬಿಟ್ಟ ರಾಶಿಕಾ

ಅತ್ತರೆ ಸಮಾಧಾನ ಮಾಡಲ್ಲ, ಜೊತೆಯಲ್ಲಿ ಇರಲ್ಲ – ಸೂರಜ್ ಜೊತೆ ಟೂ ಬಿಟ್ಟ ರಾಶಿಕಾ

ಬಿಗ್‌ಬಾಸ್ ಮನೆಯಲ್ಲಿ ಸೂರಜ್ ಕಂಡರೆ ಸಾಕು ರಾಶಿಕಾ ನಾಚಿ ನೀರಾಗುತ್ತಿರುವುದನ್ನು ನೀವೆಲ್ಲಾ ನೋಡಿದ್ದೀರಾ. ಇದೀಗ ರಾಶಿಕಾ ಕಂಡರೆ ಸಾಕು ಸೂರಜ್ ಸಿಟ್ಟಾಗುತ್ತಿದ್ದಾರೆ. ಅದಕ್ಕೆ ಕಾರಣ ರಾಶಿಕಾ ಮಾಡಿರುವ ಕಂಪ್ಲೇಂಟ್. ಅತ್ತರೆ ಸಮಾಧಾನ ಮಾಡಲ್ಲ, ನನ್ನ ಜೊತೆಯಲ್ಲೇ ಇರಲ್ಲ, ಬೇರೆ ಹುಡುಗಿಯರ ಜೊತೆಯೇ ಜಾಸ್ತಿ ಮಾತಾಡುತ್ತೀಯಾ ಅನ್ನೋ ರಾಶಿಕಾ ರಾಶಿ ರಾಶಿ ಆರೋಪಕ್ಕೆ ಪಾಪ.. ಸೂರಜ್ ಪ್ರೀತಿ ಮಾಡಬಾರದು ಅಂತಾ ಮುಖದಲ್ಲೇ ಸಿಟ್ಟು ತೋರಿಸಿ ಬುಸುಗುಡುತ್ತಿದ್ದಾರೆ.

ಇದನ್ನೂ ಓದಿ:ದೊಡ್ಡವ್ವ ದೊಡ್ಡವ್ವ ದೋಸೆ ಕೊಡು..! – ಬಿಗ್‌ಬಾಸ್ ಗಿಲ್ಲಿ ಸಾಂಗ್ ಟ್ರೆಂಡ್

ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಮತ್ತು ಸೂರಜ್ ಸಿಂಗ್ ಅವರ ಪ್ರೀತಿಯಲ್ಲಿ ಬಿರುಕು ಬಿಟ್ಟಿದೆ ಅನ್ನೋದು ಮೇಲ್ನೋಟಕ್ಕೆ ಕಂಡು ಬಂದಿದೆ. ಸೂರಜ್ ಸಿಂಗ್ ಅವರ ಕೈ ಹಿಡಿದುಕೊಂಡು ರಾಶಿಕಾ ತಾನಿರುವ ಜಾಗವನ್ನೇ ಮರೆತಿದ್ದೂ ಇದೆ. ಸೂರಜ್ ಅವರನ್ನು ಕೆರಳಿಸಿ ಡ್ಯಾನ್ಸ್ ಮಾಡುವ ನೆಪದಲ್ಲಿ ತಬ್ಬಿ ಮುದ್ದಾಡಿದ್ದೂ ಆಗಿದೆ. ಇದನ್ನೆಲ್ಲಾ ನೋಡಿ ವೀಕ್ಷಕರು ಕೂಡಾ ನೀ ಬಂದಿದ್ದು ಯಾಕಮ್ಮಾ ಅಂತಾ ಕಾಮೆಂಟ್ಸ್ ಹಾಕಿದ್ದೂ ಆಗಿದೆ. ಇದೀಗ ಅತಿಯಾದರೆ ಆಪತ್ತು ಅನ್ನೋ ಹಾಗೆ ರಾಶಿಕಾ ಮತ್ತು ಸೂರಜ್ ಸಿಂಗ್ ಪ್ರೀತಿಯಲ್ಲಿ ಬಿರುಕು ಮೂಡಿದಂತಿದೆ.

ರಾಶಿಕಾ ಅವರು ಸೂರಜ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇವರ ಜಗಳ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದೆ. ಸೂರಜ್ ಸಿಂಗ್ ಮತ್ತು ರಾಶಿಕಾ ಮನೆ ತುಂಬ ಕೈ ಕೈ ಹಿಡಿದುಕೊಂಡು ಓಡಾಡಿದ್ದಾರೆ. ‘ಪ್ರೀತಿ ಹೇಳಿ ಕೇಳಿ ಹುಟ್ಟಲ್ಲ’ ಎಂದೆಲ್ಲ ಡೈಲಾಗ್ ಹೇಳಿದ್ದಾರೆ. ಇದೀಗ ರಾಶಿಕಾ ಅವರು ನಾಮಿನೇಟ್ ಆಗಿದ್ದಾರೆ. ಅವರು ಕ್ಯಾಪ್ಟನ್ ರಘು ಬಳಿ ವಾದ ಮಾಡುತ್ತಾ ಕಣ್ಣೀರು ಹಾಕಿದ್ದಾರೆ. ಈ ವೇಳೆ ಅವರ ಬೆಂಬಲಕ್ಕೆ ಸೂರಜ್ ಬಂದಿಲ್ಲ. ‘ನಾನು ಅಳುತ್ತಿದ್ದಾಗ ನೀನು ಸಮಾಧಾನ ಮಾಡಿಲ್ಲ. ಸ್ಪಂದನಾ ಹಾಗೂ ಬೇರೆಯವರ ಜೊತೆ ಮಾತನಾಡುತ್ತಿದ್ದೆ. ನಾನು ಅಲ್ಲಿಯೇ ಇದ್ದೆ. ಏನಾಯ್ತು ಎಂದು ನನ್ನ ಬಳಿ ಕೇಳಿಲ್ಲ. ಆ ಜಾಗದಲ್ಲಿ ನೀನು ಇದ್ದಿದ್ದರೆ ನಾನು ಎಷ್ಟು ಬಾರಿ ಬರ್ತಿದ್ದೆ’ ಎಂದು ರಾಶಿಕಾ ಪ್ರಶ್ನೆ ಮಾಡಿದ್ದಾರೆ. ‘ನೀನು ಬೇರೆಯವರ ಜೊತೆ ಮಾತನಾಡೋದು ತಪ್ಪು ಎನ್ನುತ್ತಿಲ್ಲ. ನಿನಗೆ ಮುಂದಿನ ವಾರ ಬೇರೆಯವರು ಇಷ್ಟ ಆಗಬಹುದು. ಇವಳು ಸೆಟ್ ಆಗಲ್ಲ ಎನಿಸಬಹುದು’ ಎಂದು ರಾಶಿಕಾ ಹೇಳಲು ಹೋದರು. ರಾಶಿಕಾ ಮಾತಿನಿಂದ ಸೂರಜ್ ಸಿಂಗ್ ಅಸಮಾಧಾನಗೊಂಡರು. ಇದು ರಾಶಿಕಾಗೆ ಮತ್ತಷ್ಟು ಸಿಟ್ಟು ತರಿಸಿದೆ.

Sulekha