ನಿಮ್ಮ ಜೀವನದಲ್ಲಿ 2026ಕ್ಕೆ ಏನೆಲ್ಲಾ ಆಗುತ್ತೆ? – 12 ರಾಶಿ.. 2026ರ ಸಂಪೂರ್ಣ ಭವಿಷ್ಯ

2026ರ ವರ್ಷಕ್ಕೆ ನಾವು ಕಾಲಿಟ್ಟಿದ್ದೇವೆ.. 2025ರಲ್ಲಿ ಸಾಕಷ್ಟು ಕಷ್ಟವನ್ನ ನೋಡಿದವರು 2026ನ್ನ ಪ್ರೀತಿಯಿಂದ ಬರಮಾಡಿಕೊಂಡಿದ್ದೀರಾ.. ಸಾಕಷ್ಟು ಕನಸುಗಳನ್ನ ನನಸು ಮಾಡಿಕೊಳ್ಳುವುದ್ದಕ್ಕೆ ಕಾಯ್ತಾ ಇರ್ತೀರಾ.. ಸಾಕಷ್ಟು ಜನಕ್ಕೆ 2026ರಲ್ಲಿ ಹೇಗಿದೆ ನಮ್ಮ ಭವಿಷ್ಯ ಅನ್ನೋ ಕುತೂಹಲ ಕೂಡ ಇರುತ್ತೆ. 2026ರಲ್ಲಿ 12 ರಾಶಿಯ ಭವಿಷ್ಯ ಹೇಗಿದೆ? ಯಾವ ರಾಶಿಗೆ ಲಾಭ? ಯಾರಿಗೆ ನಷ್ಟ? ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ರೀಲ್ಸ್ ಮಾಡಿ, ಕೋಟಿ ರೂಪಾಯಿ ಗೆಲ್ಲಿ! – ಕೊರಗಜ್ಜ ಚಿತ್ರತಂಡದ ಆಫರ್ಗೆ ದೈವ ನರ್ತಕರಿಂದ ಆಕ್ರೋಶ!
ಮೇಷ ರಾಶಿಯವರಿಗೆ ತಾಳ್ಮೆಯ ವರ್ಷ
ಮೇಷ ರಾಶಿಯವರಿಗೆ ತಾಳ್ಮೆಯ ವರ್ಷವಾಗಿರುತ್ತದೆ. ಶನಿಯ ಸಾಡೇ ಸಾತಿಯ ಪ್ರಭಾವವು ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಉದ್ಯೋಗಗಳಿಗೆ ತೀವ್ರ ಸ್ಪರ್ಧೆ ಇರುತ್ತದೆ, ಆದರೆ ಮಾರ್ಚ್ ನಂತರ ಪರಿಸ್ಥಿತಿಗಳು ಸುಧಾರಿಸುತ್ತವೆ. ಹಣ ಬರುತ್ತದೆ, ಆದರೆ ಅದನ್ನು ಅನಾರೋಗ್ಯ ಅಥವಾ ಹಳೆಯ ಸಾಲಗಳನ್ನು ಮರುಪಾವತಿಸಲು ಖರ್ಚು ಮಾಡಬಹುದು. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಕಾಯಿಲೆಗಳು ತೊಂದರೆ ಉಂಟುಮಾಡಬಹುದು.
ವೃಷಭ ರಾಶಿಯವರಿಗೆ ಗುರುಬಲ ಕಡಿಮೆ
ಈ ವರ್ಷ ಪೂರ್ತಿ ಶನಿ ಲಾಭಸ್ಥಾನದಲ್ಲಿ ಹಾಗೂ ಜೂನ್ವರೆಗೂ ಗುರು ಧನ ಸ್ಥಾನದಲ್ಲಿ ಇದ್ದು ನಿಮಗೆ ಅನೇಕ ಶುಭ ಫಲಗಳನ್ನು ಕೊಡುತ್ತಾರೆ. ಜೂನ್ ನಂತರ ಗುರುಬಲ ಕಡಿಮೆಯಾದರೂ ಶನಿ ವರ್ಷಪೂರ್ತಿ ಲಾಭಸ್ಥಾನದಲ್ಲಿ ಇದ್ದು ನಿಮ್ಮನ್ನು ಕಾಪಾಡುತ್ತಾನೆ. ನವೆಂಬರ್ನಲ್ಲಿ ಕೇತು ಮೂರನೇ ಮನೆಗೆ ಬರುತ್ತಾನೆ. ಅದು ಕೂಡ ನಿಮಗೆ ಧನಲಾಭ, ಕಾರ್ಯಸಿದ್ದಿಯನ್ನು ಕೊಡುತ್ತದೆ. ನಿಮ್ಮ ಶಕ್ತಿ ಪರಾಕ್ರಮ ಹೆಚ್ಚುತ್ತದೆ. ಜೀವನದಲ್ಲಿ ಬಹಳ ಯೋಚನೆಗೀಡು ಮಾಡಿದ್ದ ಅಡೆತಡೆಗಳಿಗೆ ಪರಿಹಾರ ದೊರೆಯುತ್ತದೆ. 2026 ರ ಮಧ್ಯದಲ್ಲಿ ಶನಿಯ ಧೈರ್ಯದಿಂದಾಗಿ, ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು.
ಮಿಥುನ ರಾಶಿಗೆ ಈ ವರ್ಷ ಜೂನ್ ನಂತರ ಗುರು ಬಲ
ಮಿಥುನ ರಾಶಿ ಈ ವರ್ಷ ನಿಮಗೆ ಜೂನ್ ನಂತರ ಗುರು ಬಲ ದೊರೆತು ಮನಸ್ಸಿಗೆ ಕೊಂಚ ಹಗುರವಾಗುತ್ತೆ. ನಿಂತಲ್ಲೇ ನಿಂತಿದ್ದ ಜೀವನ ಈಗ ಸ್ವಲ್ಪ ಮುಂದೆ ಹೋಗುತ್ತದೆ. ನಿಂತು ಹೋಗಿದ್ದ ಕೆಲಸಗಳು ಈಗ ವೇಗ ಪಡೆದುಕೊಳ್ಳುತ್ತದೆ. ಜೂನ್ ನಂತರ ಗುರು ಬಲ ಸಿಗುತ್ತದೆ ಆದರೆ ಬೇರಾವುದೇ ಬಲಾಢ್ಯ ಗ್ರಹಗಳ ಬಲ ಇಲ್ಲ. ಆದರೆ ಕಳೆದ ವರ್ಷಕ್ಕಿಂತ ಈ ವರ್ಷ ನಿಮಗೆ ಸ್ವಲ್ಪ ರಿಲೀಫ್ ಸಿಗುತ್ತೆ. ಕೆವಲರಿಗೆ ಈ ವರ್ಷ ಮದುವೆ ಮಾತುಕತೆಗಳು ನಡೆಯಬಹುದು. ವೃತ್ತಿ ಸಂಬಂಧ ಕಿರಿಕರಿಗಳು ಜೂನ್ ನಂತರ ಪರಿಹಾರವಾಗುತ್ತದೆ. ವರ್ಷದ ಕೊನೆಯಲ್ಲಿ ಸ್ವಲ್ಪ ಕೌಟುಂಬಿಕ ಕಲಹ ಎದುರಾಗಬಹುದು.
ಕಟಕ ರಾಶಿಯವರಿಗೆ ಅಕ್ಟೋಬರ್ ತನಕ ಗುರು ಬಲ ಇಲ್ಲ
ಇನ್ನೂ ಕಟಕ ರಾಶಿ ಭವಿಷ್ಯ ನೋಡೋದಾದ್ರೆ, ನಿಮಗೆ ಈ ವರ್ಷ ಅಕ್ಟೋಬರ್ ತನಕ ಗುರು ಬಲ ಇಲ್ಲ. ಅಕ್ಟೋಬರ್ ನಂತರ ಈ ವರ್ಷಪೂರ್ತಿ ಗುರು ಸಿಂಹರಾಶಿಯಲ್ಲಿ ಇರುತ್ತಾನೆ. ಹಾಗಾಗಿ ಆ ಸಮಯದಲ್ಲಿ ಕೊಂಚ ಚೇತರಿಕೆ ಇದೆ. ಹಾಗಾಗಿ ಅಕ್ಟೋಬರ್ವರೆಗೂ ನಿಮಗೆ ಸವಾಲುಗಳ ಮಹಾಪೂರವೇ ಇದೆ. ಹಣಕಾಸಿಗೆ ಕಷ್ಟ, ಮಾನಸಿಕ ಚಿಂತೆ, ಕೆಲಸದ ಒತ್ತಡ ಇಂಥವೆಲ್ಲ ಅನುಭವಿಸಬೇಕಾಗುತ್ತದೆ. ಬೇರೆ ಗ್ರಹಗಳ ಬಲವೂ ಇರುವುದಿಲ್ಲ. ಕೇತು ಡಿಸೆಂಬರ್ ನಲ್ಲಿ ನಿಮ್ಮ ರಾಶಿಗೇ ಬರುತ್ತಾನೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಸಿಂಹ ರಾಶಿಯವರಿಗೆ ಧನ ಲಾಭ
ಸಿಂಹ ರಾಶಿಗೆ ಜೂನ್ವರೆಗೂ ಗುರು ಲಾಭ ಸ್ಥಾನದಲ್ಲಿ ಇದ್ದು ನಿಮಗೆ ಧನ ಲಾಭ ಕಾರ್ಯಸಿದ್ಧಿ ಅನುಕೂಲ ಮಾಡಿಕೊಡುತ್ತಾನೆ. ಜೂನ್ ನಂತರ ಗುರು ಮಿಥುನದಿಂದ ಕರ್ಕರಾಶಿಗೆ ಪ್ರವೇಶ ಮಾಡುತ್ತಾನೆ. ಇದರಿಂದ ಹಣಕಾಸಿನ ಸಂಕಷ್ಟ, ಕಾರ್ಯ ವೈಫಲ್ಯ, ಮಾನಸಿಕ ತೊಳಲಾಟ ಮೇಲಧಿಕಾರಿಗಳ ದರ್ಪ ಮೊದಲಾದವನ್ನು ಅನುಭವಿಸುತ್ತೀರಿ. ಜಾಗ ಬದಲಾವಣೆ ಸಾಧ್ಯತೆ ಇದೆ. ಕೆಲಸದಲ್ಲಿ ವರ್ಗಾವಣೆ ಆಗಬಹುದು. ಡಿಸೆಂಬರ್ ನಂತರ ಕೇತು ನಿಮ್ಮ ರಾಶಿಯನ್ನು ಬಿಟ್ಟು ಕಟಕರಾಶಿಗೆ ಪ್ರವೇಶ ಮಾಡುತ್ತಾನೆ. ಹಾಗೆಯೇ ರಾಹು ಆರನೇ ಮನೆಗೆ ಬರುತ್ತಾನೆ. ಆರನೇ ಮನೆಯ ರಾಹು ನಿಮಗೆ ಹಣಕಾಸಿನ ಲಾಭವನ್ನು ತಂದು ಕೊಡುತ್ತಾನೆ. ಹೂಡಿಕೆಗಳಲ್ಲಿ ಲಾಭ ಇದೆ. ನಿಯ ಪ್ರಭಾವ ಇರುವುದರಿಂದ ಜಾಗ್ರತೆಯಿಂದ ಇರಿ.
ಕನ್ಯಾರಾಶಿಯಲ್ಲಿ ಗುರು ಜೂನ್ ನಂತರ ಲಾಭ
ಕನ್ಯಾರಾಶಿಯಲ್ಲಿ ಗುರು ಜೂನ್ ನಂತರ ಲಾಭಸ್ಥಾನಕ್ಕೆ ಪ್ರವೇಶಿಸಿ, ನಿಮಗೆ ಧನಲಾಭ, ಅಧಿಕಾರ ಲಾಭ ಮಾಡಿಸುತ್ತಾನೆ. ಕೇತು ಸಹ ಡಿಸೆಂಬರ್ನಲ್ಲಿ ಲಾಭಸ್ಥಾನಕ್ಕೆ ಪ್ರವೇಶಿಸಿ ನಿಮ್ಮ ಹಣಕಾಸಿನ ಅನುಕೂಲತೆಯನ್ನು ಇನ್ನಷ್ಟು ಗಟ್ಟಿ ಮಾಡುತ್ತಾನೆ. ಅವಿವಾಹಿತರಿಗೆ ಜೂನ್ ನಂತರ ವಿವಾಹ ಪ್ರಾಪ್ತಿ ಇದೆ. ದೊಡ್ಡ ಹುದ್ದೆ ಅಧಿಕಾರ ಸಿಗುತ್ತದೆ. ರಾಜಕೀಯ ನಾಯಕರಿಗೂ ಜೂನ್ ನಂತರ ಶುಭಕಾಲ. ಅಕ್ಟೋಬರ್ ನಂತರ ಗುರು 12ನೇ ಮನೆಗೆ ಪ್ರವೇಶ ಮಾಡುವುದರಿಂದ ಕೊಂಚ ಏರುಪೇರು ಅನುಭವಿಸುತ್ತೀರಿ. ದೊಡ್ಡ ತಿರ್ಮಾಣ ತೆಗೆದುಕೊಳ್ಳುತ್ತಾ ನೀವು ಎಡವವು ಸಾಧ್ಯತೆಯಿದೆ.
ತುಲಾ ರಾಶಿಗೆ ಜೂನ್ವರೆಗೂ ಗುರುಬಲ
ತುಲಾ ರಾಶಿಗೆ ಜೂನ್ವರೆಗೂ ಗುರುಬಲ ಇದ್ದು ಕೆಲಸಗಳು ನೀವು ಅಂದುಕೊಂಡಂತೆ ನಡೆಯುತ್ತೆ. ಜೂನ್ನಿಂದ ಅಕ್ಟೋಬರ್ವರೆಗೂ ಗುರು ಎಂಟನೇ ಮನೆಗೆ ಪ್ರವೇಶಿಸಿ, ಕೊಂಚ ಏರಪೇರುಗಳು ಆಗುತ್ತವೆ. ಹಣಕಾಸು ಸ್ಥಿತಿ ಇಕ್ಕಟ್ಟಾಗಬಹುದು. ಅಕ್ಟೋಬರ್ ನಂತರ ಗುರು ಸಿಂಹ ರಾಶಿಗೆ ಪ್ರವೇಶವಾದಾಗ ಪರಿಸ್ಥಿತಿ ಕೊಂಚ ಸುಧಾರಿಸುತ್ತದೆ. ಲಾಭ ಸ್ಥಾನದ ಗುರು ನಿಮ್ಮ ಕೈ ಹಿಡಿಯುತ್ತಾನೆ. ಶನಿ ಈ ವರ್ಷಪೂರ್ತಿ ಆರನೇ ಮನೆಯಲ್ಲಿ ಇದ್ದು ನಿಮಗೆ ಸಕಲ ಅನುಕೂಲಗಳಿಗೆ ಸಹಕಾರ ಕೊಡುತ್ತಾನೆ. ದುರ್ಗಾದೇವಿಯನ್ನು ಆರಾಧಿಸಿ.
ವೃಶ್ಚಿಕ ರಾಶಿಯವರಿಗೆ ಹಣಕಾಸಿಗೆ ಬಿಕ್ಕಟ್ಟು
ವೃಶ್ಚಿಕ ರಾಶಿಯವರು ಈ ವರ್ಷ ಪೂರ್ತಿ ಪಂಚಮ ಶನಿಯ ಪ್ರಭಾವ ಇರುತ್ತದೆ. ಹಣಕಾಸಿಗೆ ಬಿಕ್ಕಟ್ಟು, ವೃತ್ತಿಯಲ್ಲಿ ಒತ್ತಡ, ಅನಾರೋಗ್ಯ ಕುಟುಂಬದಲ್ಲಿ ಕಿರಿಕಿರಿ ಮೊದಲಾದವು ಸಾಮಾನ್ಯ. ಜೂನ್ ನಂತರ ಅಕ್ಟೋಬರ್ವರೆಗೂ ಗುರು ಒಂಬತ್ತನೇ ಮನೆಗೆ ಪ್ರವೇಶವಾದಾಗ ಸಮಸ್ಯೆಗಳು ಹಗುರವಾಗುತ್ತದೆ. ಜೂನ್ ನಿಂದ ಅಕ್ಟೋಬರ್ ಒಳಗೆ ಏನಾದರೂ ಮುಖ್ಯ ತೀರ್ಮಾನಗಳಿದ್ದರೆ ಅದನ್ನು ಮಾಡಿಕೊಳ್ಳಿ. ಅಕ್ಟೋಬರ್ ನಂತರ ಗುರು ಹತ್ತನೇ ಮನೆಗೆ ಪ್ರವೇಶವಾದಾಗ ವೃತ್ತಿಯಲ್ಲಿ ಏರುಪೇರು ಆಗಬಹದು. ಡಿಸೆಂಬರ್ ನಂತರ ರಾಹು ಮಕರರಾಶಿಗೆ ಪ್ರವೇಶವಾದಾಗ ನಿಮಗೆ ಹಣಕಾಸಿನ ಬಲ ಬರುತ್ತದೆ. ಹೂಡಿಕೆಗಳಲ್ಲಿ ಲಾಭ ಇದೆ.
ಧನಸ್ಸು ರಾಶಿಯವರಿಗೆ ಈ ವರ್ಷ ಜೂನ್ವರೆಗೂ ಗುರುಬಲ
ಇನ್ನೂ ಧನಸ್ಸು ರಾಶಿಯವರಿಗೆ ಈ ವರ್ಷ ಜೂನ್ವರೆಗೂ ಗುರುಬಲ ಇದೆ. ಯಾವ ಕೆಲಸ ಮಾಡಬೇಕೆಂದರೂ ಸಹಾಯ ಸಹಕಾರ ಸಿಗುತ್ತದೆ. ಜೂನ್ ಒಳಗೆ ಕೆಲವರಿಗೆ ಮದುನೆ ನಿಶ್ಚಿಯ ಆಗುತ್ತೆ. ದೆ. ಹೊಸ ಕೆಲಸ ಸಿಗುತ್ತದೆ. ಗುರು ಜೂನ್ ನಂತರ ಎಂಟನೇ ಮನೆಗೆ ಪ್ರವೇಶ ಮಾಡಿದಾಗ ಕೊಂಚ ಹಿನ್ನೆಡೆ ಆಗಬಹುದು. ಆರೋಗ್ಯ ಏರುಪೇರು ಆಗಬಹುದು ಜಾಗ್ರತೆ ವಹಿಸಿ.
ಮಕರ ರಾಶಿಯವರಿಗೆ ಜೂನ್ ನಂತರ ಶುಭಫಲ
ಇನ್ನೂ ಮಕರ ರಾಶಿಗೆ ವರ್ಷಪೂರ್ತಿ ಶನಿ ನಿಮ್ಮ ರಾಶಿಯಿಂದ ಮೂರನೇ ಮನೆಯಲ್ಲಿ ಇರುತ್ತಾನೆ. ಗುರು ಜೂನ್ ವರೆಗೂ ಆರನೇ ಮನೆಯಲ್ಲಿ ಇದ್ದು ಜೂನ್ ನಂತರ ಏಳನೇ ಮನೆಗೆ ಪ್ರವೇಶವಾದಾಗ ನಿಮಗೆ ಧನಲಾಭ ಖ್ಯಾತಿ ಕೀರ್ತಿ ಪ್ರಸಿದ್ಧಿಗಳು ಸಿಗುತ್ತವೆ. ಅರ್ಹರಿಗೆ ಜೂನ್ ನಂತರ ಮದುವೆಯಾಗುತ್ತದೆ. ಡಿಸೆಂಬರ್ ಕಳೆದ ನಂತರ ರಾಹು ನಿಮ್ಮ ರಾಶಿಗೆ ಬರುತ್ತಾನೆ. ಕೇತು ಏಳನೇ ಮನೆಗೆ ಪ್ರವೇಶಿಸುತ್ತಾನೆ. ರಾಹುವಿನ ಮಕರರಾಶಿ ಪ್ರವೇಶ ನಿಮಗೆ ತೊಂದರೆ ಇಲ್ಲ್ಲ. ಗುರು ಏಳನೇ ಮನೆಯಲ್ಲಿ ಇರುವ ಐದು ತಿಂಗಳು ನಿಮಗೆ ಅದೃಷ್ಟವನ್ನು ತಂದುಕೊಡುತ್ತದೆ. ವೃತ್ತಿಯಲ್ಲಿ ಏಳ್ಗೆ, ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ.
ಕುಂಭ ರಾಶಿಯಲ್ಲಿ ಜೂನ್ವರೆಗೂ ಸಕಲ ಅನುಗ್ರಹ
ಇನ್ನೂ ಕುಂಭ ರಾಶಿಯಲ್ಲಿ ಜೂನ್ವರೆಗೂ ಗುರು ಐದನೇ ಮನೆಯಲ್ಲಿದ್ದು ಸಕಲ ಅನುಗ್ರಹವನ್ನೂ ಕೊಡುತ್ತಾನೆ. ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಪದವಿ ಅಧಿಕಾರ ಲಭಿಸುತ್ತದೆ. ಬಹುದೊಡ್ಡ ಯೋಜನೆ ನಿಮ್ಮ ಕೈ ಸೇರುತ್ತದೆ. ಹೂಡಿಕೆಗಳಲ್ಲಿ ಲಾಭ ಇದೆ. ಈ ವರ್ಷ ಪೂರ್ತಿ ನೀವು ಸಾಡೆಸಾತಿ ಶನಿಯ ಪ್ರಭಾವವನ್ನು ಅನುಭವಿಸುತ್ತೀರಿ. ಆದರೆ ಈ ಪ್ರಭಾವ ಅಲ್ಪ ಪ್ರಮಾಣದ್ದಾಗಿರುತ್ತದೆ. ಸಾಡೆಸಾತಿಯ ಕೊನೆಯ ಹಂತಕ್ಕೆ ಬಂದಿದ್ದೀರಿ. ಇನ್ನು ಕಷ್ಟಗಳು ಕಡಿಮೆಯಾಗುತ್ತದೆ. ಹಣದ ಹರಿವು ಉತ್ತಮವಾಗುತ್ತದೆ.
ಮೀನ ರಾಶಿಗೆ ಜೂನ್ ನಂತರ ಶುಭ
ವರ್ಷ ಪೂರ್ತಿ ಶನಿ ಮೀನ ರಾಶಿಯಲ್ಲೇ ಇರುತ್ತಾನೆ. ಖರ್ಚುಗಳು ಬಹಳ ಇರುತ್ತವೆ. ಆದರೆ ಜೂನ್ ನಂತರ ಗುರು ಕರ್ಕರಾಶಿಗೆ ಪ್ರವೇಶವಾದಾಗ ನಿಮಗೆ ಅನುಕೂಲಗಳು ಒದಗಿ ಬರುತ್ತದೆ. ಹೊಸ ಕೆಲಸ ಸಿಗುವುದು, ಮದುವೆ ಆಗುತ್ತೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಶುಭವಿದೆ. ಉನ್ನತ ವ್ಯಾಸಂಗಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಅನುಕೂಲವಾಗುತ್ತದೆ. ಈ ವರ್ಷ ನಿಮಗೆ ಜೂನ್ ನಂತರ ಒಳ್ಳೆಯ ಸಂಗತಿಗಳು ಇವೆ. ಪದವಿ ಅಧಿಕಾರ ಪ್ರಾಪ್ತಿ ಇದೆ. ಹೊಸ ಯೋಜನೆಗಳು ನಿಮ್ಮನ್ನು ಹುಡುಕಿ ಬರುತ್ತವೆ.

ನೋಡಿರಿ

