ತಾನೂ ಆಡಲ್ಲ.. ತಂಡವನ್ನೂ ಗೆಲ್ಲಿಸಲ್ಲ – ಕ್ಯಾಪ್ಟನ್ಸಿ ಖದರ್ ಕಳ್ಕೊಂಡ ಶ್ರೇಯಸ್
ODI ಸರಣಿಯನ್ನೂ ಸೋಲಿಸ್ತಾರಾ?

ತಾನೂ ಆಡಲ್ಲ.. ತಂಡವನ್ನೂ ಗೆಲ್ಲಿಸಲ್ಲ – ಕ್ಯಾಪ್ಟನ್ಸಿ ಖದರ್ ಕಳ್ಕೊಂಡ ಶ್ರೇಯಸ್ODI ಸರಣಿಯನ್ನೂ ಸೋಲಿಸ್ತಾರಾ?

ಶ್ರೇಯಸ್ ಅಯ್ಯರ್​​ಗೂ ಕ್ಯಾಪ್ಟನ್ಸಿಗೂ ಯಾಕೋ ಆಗಿ ಬರಲ್ಲ ಅನ್ಸುತ್ತೆ. ಟಿ-20ಐ ತಂಡಕ್ಕೆ ಕ್ಯಾಪ್ಟನ್ ಆಗಿ ಕಾಲಿಟ್ಟಾಗಲೇ ಸಾಲು ಸಾಲು ಪಂದ್ಯಗಳಲ್ಲಿ ಸೋತು ಸರಣಿಗಳಲ್ಲಿ ಕ್ಲೀನ್ ಸ್ವೀಪ್ ಆಗಿದ್ರು. ಈಗ ಏಕದಿನ ಮಾದರಿಗೆ ಹಂಗಾಮಿ ನಾಯಕನಾಗಿ ಕಾಲಿಟ್ಟ ಫಸ್ಟ್ ಮ್ಯಾಚಲ್ಲೇ ಹೀನಾಯವಾಗಿ ತಂಡ ಸೋಲು ಕಂಡಿದೆ. ತಾನೂ ಆಡಲ್ಲ ತಂಡವನ್ನೂ ಗೆಲ್ಲಿಸಲ್ಲ ಅನ್ನುವಂತಾಗಿದೆ ಶ್ರೇಯಸ್ ಸ್ಥಿತಿ. ಅಭಿಮಾನಿಗಳು, ಕ್ರಿಕೆಟ್ ಎಕ್ಸ್​ಪರ್ಟ್​​ಗಳ ಸಪೋರ್ಟ್​​ನಿಂದಲೇ ಭಾರತ ತಂಡಕ್ಕೆ ನಾಯಕನಾಗಿ ಬಂದ ಶ್ರೇಯಸ್ ಈಗ ಎಲ್ಲರ ವಿರೋಧಕ್ಕೆ ಕಾರಣ ಆಗ್ತಿರೋದು.

ಇದನ್ನೂ ಓದಿ : ಕೈಕೊಟ್ಟ ಶ್ರೇಯಸ್ (0) ಕ್ಯಾಪ್ಟನ್ಸಿ – RO-KO ಸೊನ್ನೆ.. ಹೆನ್ರಿ ಏಟು

ನ್ಯೂಜಿಲೆಂಡ್ ವಿರುದ್ಧ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಭಾರತ ಗೆದ್ದು ಬೀಗಿತ್ತು. ಇದೇ ಜೋಶ್​ನಲ್ಲೇ ನಾಲ್ಕನೇ ಪಂದ್ಯವನ್ನೂ ಗೆದ್ದು ಸರಣಿ ಕೈವಶ ಮಾಡಿಕೊಳ್ತಾರೆ ಅನ್ನೋದು ಎಲ್ಲರ ಲೆಕ್ಕಾಚಾರ ಆಗಿತ್ತು. ಆದ್ರೆ ನಾಲ್ಕನೇ ಮ್ಯಾಚಲ್ಲಿ ಭಾರತ ಬರೀ ಸೋಲಲಿಲ್ಲ. ಅತ್ಯಂತ ಕೆಟ್ಟದಾಗಿ ಸೋತು ಬೇಡದೇ ಇರೋ ಸಾಲು ಸಾಲು ಕಳಪೆ ದಾಖಲೆಗಳನ್ನೂ ಬರೆಯಿತು. ಶುಭ್​ಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಕಾನ್ಫಿಡೆಂಟಾಗಿ ಕಾಣ್ತಿದ್ದ ತಂಡ ಶ್ರೇಯಸ್ ಅಡಿಯಲ್ಲಿ ಗಲ್ಲಿ ಕ್ರಿಕೆಟ್​ಗಿಂತಲೂ ಕಡೆಯಾಗಿ ಪರ್ಫಾಮ್ ಮಾಡಿದ್ರು. 224 ರನ್​ಗಳ ಬಿಗ್ ಮಾರ್ಜಿನ್​ನಿಂದ ಸೋತ ಮೇಲಂತೂ ಶ್ರೇಯಸ್ ಅಯ್ಯರ್ ವಿರುದ್ಧ ಆಕ್ರೋಶ ಸ್ಫೋಟಗೊಂಡಿದೆ.

ಬ್ಯಾಟಿಂಗ್ ಚೆನ್ನಾಗಿಲ್ಲ.. ಕ್ಯಾಪ್ಟನ್ಸಿಯೂ ಅಷ್ಟಕ್ಕಷ್ಟೇ!

ಭಾರತ ತಂಡದ ಪರ ಟಿ-20ಐ ಮತ್ತು ಏಕದಿನ ನಾಯಕನಾಗಿ ಶ್ರೇಯಸ್ ಅಯ್ಯರ್ ಅವರ ಪ್ರದರ್ಶನ ಅಷ್ಟಕ್ಕಷ್ಟೇ ಇದೆ. 2026ರಲ್ಲಿ ನಾಯಕತ್ವ ವಹಿಸಿಕೊಂಡ ನಂತರ ಕೆಲವು ಅದ್ಭುತ ಗೆಲುವುಗಳನ್ನು ತಂದುಕೊಟ್ಟಿದ್ದರೂ ಕೂಡ ಭಾರತ ಕ್ರಿಕೆಟ್ ಇತಿಹಾಸದ ಅತ್ಯಂತ ಹೀನಾಯ ಸೋಲುಗಳನ್ನೂ ಕಂಡಿದ್ದಾರೆ. ಟಿ20ಐನಲ್ಲಿ ಭಾರತದ ಪರ 26 ಪಂದ್ಯಗಳಲ್ಲಿ ತಂಡವನ್ನ ಲೀಡ್ ಮಾಡಿದ್ದು ಇದ್ರಲ್ಲಿ 14ರಲ್ಲಿ ಗೆಲುವನ್ನ ಕಂಡ್ರೆ 10ರಲ್ಲಿ ಸೋತಿದ್ದಾರೆ. 2 ಪಂದ್ಯಗಳು ಫಲಿತಾಂಶ ಕಂಡಿಲ್ಲ. ಈಗ ಕಿವೀಸ್ ವಿರುದ್ಧ ಶುಭ್​ಮನ್ ಗಿಲ್ ಆಬ್ಸೆನ್ಸ್​ನಲ್ಲಿ ಫಾರ್ ದಿ ಫಸ್ಟ್ ಟೈಂ ಏಕದಿನ ತಂಡದ ನಾಯಕತ್ವ ವಹಿಸಿಕೊಂಡ್ರೂ ಮೊದಲ ಪಂದ್ಯದಲ್ಲೇ ತಂಡ ಸೋತಿದೆ. ಅಯ್ಯರ್ ನಾಯಕತ್ವದಲ್ಲಿ ಭಾರತ ಟಿ-20ಐ ಇತಿಹಾಸದ ಅತ್ಯಂತ ದೊಡ್ಡ ಸೋಲು ಇಂಗ್ಲೆಂಡ್ ವಿರುದ್ಧ 125 ರನ್‌ಗಳಿಂದ ಮತ್ತು ಎರಡನೇ ಅತಿದೊಡ್ಡ ಸೋಲನ್ನು ನ್ಯೂಜಿಲೆಂಡ್ ವಿರುದ್ಧ 87 ರನ್‌ಗಳಿಂದ ಅನುಭವಿಸಿತು. ಈಗ ಏಕದಿನ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ 244 ರನ್‌ಗಳ ಸೋಲು ಭಾರತದ ಎರಡನೇ ಅತಿದೊಡ್ಡ ಸೋಲಾಗಿದೆ. ಸೂರ್ಯಕುಮಾರ್ ಯಾದವ್ ಅವರ ಸ್ಥಾನಕ್ಕೆ ಬಂದ ಅಯ್ಯರ್, ತಮ್ಮ ಆರಂಭಿಕ ಸರಣಿಗಳಲ್ಲೇ ಐರ್ಲೆಂಡ್ (0-2) ಮತ್ತು ಇಂಗ್ಲೆಂಡ್ (0-4) ವಿರುದ್ಧ ಸರಣಿ ಸೋತರು. ಈ ಮೂಲಕ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ದ್ವಿಪಕ್ಷೀಯ ಟಿ-20ಐ ಸರಣಿ ಸೋತ ಮೊದಲ ಭಾರತೀಯ ನಾಯಕ ಎನಿಸಿಕೊಂಡರು. ತಂಡದ ಪರ್ಫಾಮೆನ್ಸ್ ಚೆನ್ನಾಗಿಲ್ಲ ಅಂದ್ರೆ ಶ್ರೇಯಸ್ ಏನ್ ಮಾಡ್ತಾರೆ ಅನ್ನಿಸ್ಬೋದು. ಆದ್ರೆ ನಾಯಕನ ನಿರ್ಧಾರಗಳೂ ಕ್ರೂಶಿಯಲ್ ಆಗಿರುತ್ತೆ. ಪಂದ್ಯದ ನಿರ್ಣಾಯಕ ಹಂತಗಳಲ್ಲಿ ಬೌಲರ್‌ಗಳನ್ನು ಸರಿಯಾಗಿ ಬದಲಾಯಿಸದಿರುವುದು ಮತ್ತು ಫೀಲ್ಡಿಂಗ್ ನಿಯೋಜನೆಯಲ್ಲಿ ಎಡವುತ್ತಿರುವ ಬಗ್ಗೆ ಪದೇಪದೆ ಟೀಕೆಗಳು ಕೇಳಿ ಬರ್ತಿವೆ. ಅದೂ ಅಲ್ದೇ ಬ್ಯಾಟರ್​​ ಆಗಿಯೂ ಅವ್ರ ಕಡೆಯಿಂದ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಬರ್ತಿಲ್ಲ. ಟಾಪ್ ಆರ್ಡರ್ ವಿಕೆಟ್ಸ್ ಬೇಗ ಬಿದ್ದಾಗ್ಲೂ ಜವಾಬ್ದಾರಿಯುತವಾಗಿ ಇನ್ನಿಂಗ್ಸ್ ಕಟ್ಟದೆ ಬೇಗ ಔಟ್ ಆಗ್ತಿರೋದೇ ಟೀಕೆಗಳಿಗೆ ಕಾರಣ ಆಗಿದೆ.

Shantha Kumari

Leave a Reply

Your email address will not be published. Required fields are marked *