ಪತ್ತೆಯಾಯ್ತು “ಕಿತ್ತಳೆ ಬಣ್ಣದ ಬಾವಲಿ” – ಇದೆಷ್ಟು ಅಪಾಯಕಾರಿ ಗೊತ್ತಾ?

ಪತ್ತೆಯಾಯ್ತು “ಕಿತ್ತಳೆ ಬಣ್ಣದ ಬಾವಲಿ” – ಇದೆಷ್ಟು ಅಪಾಯಕಾರಿ ಗೊತ್ತಾ?

ಚತ್ತೀಸ್ ಗಢದ ಕಾಂಗರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದ ಬಳಿ ಇರುವ ಪರಲಿ ಬೋಡಾಲ್ ಗ್ರಾಮದಲ್ಲಿ ಅಪಾಯಕಾರಿ ಪ್ರಭೇದದ, ಅಪರೂಪದ “ಕಿತ್ತಳೆ ಬಣ್ಣದ ಬಾವಲಿ”ಯೊಂದು ಪತ್ತೆಯಾಗಿದೆ.

 ಬಣ್ಣದ ಬಾವಲಿ/ ಪೇಂಟೆಡ್ ಬ್ಯಾಟ್ ಎಂದೇ ಕರೆಸಿಕೊಳ್ಳುವ ಈ ಅಪರೂಪದ ಪ್ರಾಣಿ, ಕಿತ್ತಳೆ ಬಣ್ಣದಲ್ಲಿದೆ ಹಾಗೂ ಕಪ್ಪು ಬಣ್ಣದ ರೆಕ್ಕೆಗಳನ್ನು ಹೊಂದಿದೆ ಎಂದು ರಾಷ್ಟ್ರೀಯ ಉದ್ಯಾನವನದ ನಿರ್ದೇಶಕ ಗನ್ವೀರ್ ಧರಮ್ ಶೀಲ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಗ್ಯಾಸ್ ಸ್ಟವ್ ಬಳಕೆಯಿಂದ ಮಕ್ಕಳಲ್ಲಿ ಅಸ್ತಮಾ ಹೆಚ್ಚಳ! – ನಿಷೇಧದ ಬಗ್ಗೆ ನಡೀತಿದೆ ಜೋರು ಚರ್ಚೆ..!

ಈ ಅಪರೂಪದ ಬಾವಲಿಗೆ ಕೆರಿವೌಲಾ ಪಿಕ್ಟಾ ಎಂಬ ವೈಜ್ಞಾನಿಕ ಹೆಸರೂ ಇದೆ. ಇದು ಅತ್ಯಂತ ಅಪರೂಪದ ಹಾಗೂ ಅಳಿವಿನ ಅಂಚಿನಲ್ಲಿರುವ ಜೀವಿಯಾಗಿದೆ. ಅಲ್ಲದೇ ಇದು ಅಪಾಯಕಾರಿ ಪ್ರಭೇದವಾಗಿದೆ. ಈ ಬಾವಲಿಗಳು ಬಾಂಗ್ಲಾದೇಶ, ಮ್ಯಾನ್ಮಾರ್, ಕಾಂಬೋಡಿಯಾ, ಚೀನಾ, ಭಾರತ, ಇಂಡೋನೇಷ್ಯಾ, ಮಲೇಷ್ಯಾ, ನೇಪಾಳ, ಶ್ರೀಲಂಕಾ, ಥೈಲ್ಯಾಂಡ್, ವಿಯೆಟ್ನಾಮ್ ನಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂದು ಗನ್ವೀರ್ ಧರಮ್ ಶೀಲ್ ತಿಳಿಸಿದ್ದಾರೆ.

ಈ ಬಾವಲಿಗಳು ಹಾರುತ್ತಿರುವಾಗಲೇ ಕೀಟಗಳನ್ನು ಹಿಡಿದು ತಮ್ಮ ಆಹಾರವಾಗಿಸಿಕೊಳ್ಳುತ್ತವೆ ಹಾಗೂ ಜೋಳದ ಕೊಯ್ಲಿನ ವೇಳೆ ಕಂಡುಬರುತ್ತದೆ. ರಾಷ್ಟ್ರೀಯ ಉದ್ಯಾನವನದಲ್ಲಿ ಬಾವಲಿಗಳ ಪ್ರಭೇದಗಳ ಬಗ್ಗೆ ಮಾಹಿತಿ ಪಡೆಯಲು ರಾಷ್ಟ್ರೀಯ ಉದ್ಯಾನವನದಲ್ಲಿ ಸಮೀಕ್ಷೆ ನಡೆಸಲಾಗುತ್ತದೆ ಎಂದು ಗನ್ವೀರ್ ಧರಮ್ ಶೀಲ್ ಹೇಳಿದ್ದಾರೆ.

ಬಸ್ತಾರ್ ಜಿಲ್ಲೆಯಲ್ಲಿನ ಕಾಂಗರ್ ವ್ಯಾಲಿ ರಾಷ್ಟ್ರೀಯ ಉದ್ಯಾನವನದಲ್ಲಿ ಪತ್ತೆಯಾದ ಮೂರನೇ ಕಿತ್ತಳೆ ಬಣ್ಣದ ಬಾವಲಿ ಇದಾಗಿದೆ. ಇದಕ್ಕೂ ಮುನ್ನ 2020 ಹಾಗೂ 2022 ರಲ್ಲಿ ಪತ್ತೆಯಾಗಿತ್ತು. ಈ ರಾಷ್ಟ್ರೀಯ ಉದ್ಯಾನವನ ಲೈಮ್ ಸ್ಟೋನ್ ಗುಹೆಗಳಿಗೆ ಪ್ರಖ್ಯಾತಿ ಹೊಂದಿದ್ದು, ಬಾವಲಿಗಳಿಗೆ ಅತ್ಯುತ್ತಮ ಪ್ರದೇಶವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

suddiyaana