ರವೀಂದ್ರನಾಥ್ ಠಾಗೋರ್ ಬರೆದ ಅಪರೂಪದ ಪತ್ರ ಹರಾಜು – 21 ಲಕ್ಷ ರೂ.ಗೆ ಖರೀದಿ!
ಭಾರತದ ರಾಷ್ಟ್ರಗೀತೆ ಜನ ಗಣ ಮನ ಹಾಡನ್ನು ಬರೆದವರು ರವೀಂದ್ರನಾಥ್ ಠಾಗೋರ್ ಎಂಬುದು ಎಲ್ಲರಿಗೂ ಗೊತ್ತು. ಠಾಗೋರ್ ಅವರು ಸಾಹಿತಿಗಳಷ್ಟೇ ಅಲ್ಲ, ಸ್ವಾತಂತ್ರ್ಯ ಹೋರಾಟಗಾರರೂ ಹೌದು. ಸ್ವಾತಂತ್ರ್ಯ ಸಿಗುವ ಬಹಳ ವರ್ಷಗಳ ಮುಂಚೆಯೇ ಅವರು ಸ್ವಾತಂತ್ರ್ಯದ ಪರಿಕಲ್ಪನೆಗಳಿರುವ ಹಾಡನ್ನು ರಚಿಸಿದ್ದರು. ಇದು ಅವರ ಮುಂದಾಲೋಚನೆಗೆ ಒಂದು ನಿದರ್ಶನ. ಇದೀಗ ರವೀಂದ್ರನಾಥ ಠಾಗೋರ್ ಅವರು ಬರೆದಿರುವ ಅಪರೂಪದ ಪತ್ರವೊಂದು ಹರಾಜಾಗಿದೆ. ಈ ಅಪರೂಪದ ಪತ್ರಪತ್ರವು ಆನ್‌ಲೈನ್ ಕಲಾ ಹರಾಜಿನಲ್ಲಿ 21 ಲಕ್ಷ ರೂ.ಗೆ ಮಾರಾಟವಾಗಿದೆ.
ಇದನ್ನೂ ಓದಿ: ಮಾವು ಮೇಳದಲ್ಲಿ ವಿಶ್ವದ ದುಬಾರಿ ಮಾವಿನ ಹಣ್ಣಿನ ಪ್ರದರ್ಶನ –ಕೆ.ಜಿಗೆ 2.70 ಲಕ್ಷ ರೂಪಾಯಿಗೆ ಮಾರಾಟ..!
1930 ಜನವರಿ 3 ರಂದು ರವೀಂದ್ರನಾಥ ಠಾಗೋರ್ ಅವರು ಸತ್ಯಭೂಷಣ ಸೇನ್‌ಗೆ ಪತ್ರ ಬರೆದಿದ್ದಾರೆ. ಟ್ಯಾಗೋರ್ ಅವರ ಸಣ್ಣ ಕಥೆಗಳ ಇಂಗ್ಲಿಷ್ ಅನುವಾದದ ಬಗ್ಗೆ ವ್ಯಕ್ತಪಡಿಸುವ ಪತ್ರದ ಮೂಲ ಬೆಲೆಯ ಏಳು ಪಟ್ಟು ಹೆಚ್ಚಿನ ಮೊತ್ತಕ್ಕೆ ಹರಾಜಾಗುವ ಮೂಲಕವಾಗಿ ಎಲ್ಲಾ ನಿರೀಕ್ಷೆಗಳನ್ನು ಮೀರಿದೆ. ಈ ಪತ್ರವು ಆರಂಭದಲ್ಲಿ 3 ಲಕ್ಷ ರೂ.ವರೆಗೆ ಸಿಗುವ ನಿರೀಕ್ಷೆಯಿತ್ತು ಆದರೆ ಹಲವಾರು ಬಿಡ್ಡರ್‌ಗಳ ನಡುವೆ ತೀವ್ರ ಪೈಪೋಟಿ ಇದ್ದ ಕಾರಣ ಈ ಪತ್ರ ಬರೋಬ್ಬರಿ 21 ಲಕ್ಷ ರೂ.ಗೆ ಮಾರಾಟವಾಗಿದೆ.
ಈ ಪತ್ರದಲ್ಲಿ ಠಾಗೋರ್ ಅವರು ತಮ್ಮ ಕಥೆಗಳನ್ನು ಇಂಗ್ಲಿಷ್ ಓದುಗರು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ. ಏಕೆಂದರೆ ಬರವಣಿಗೆಯ ಶೈಲಿಯು ಆ ಕಾಲದ ಇಂಗ್ಲಿಷ್ ಬರಹಗಾರರಿಗಿಂತ ಹೆಚ್ಚು ಭಿನ್ನವಾಗಿತ್ತು. ಹಾಗೂ ಟ್ಯಾಗೋರ್ ಅವರು ಬರೆದಿರುವ ಮೂಲ ಭಾಷೆಯಿಂದ ಬೇರೆ ಭಾಷೆಗೆ ಭಾಷಾಂತರ ಮಾಡಿದಾಗ ಅದು ಮೂಲ ಸೊಗಡನ್ನು ಕೆಳೆದುಕೊಳ್ಳುತ್ತಿತ್ತು ಎಂದು ಠಾಗೋರ್ ಹೇಳಿದ್ದಾರೆ.
ಆದರೆ ಠಾಗೋರ್ ಸಹೋದರಿ ನಿವೇದಿತಾ ಅವರ ಸಣ್ಣ ಕಥೆಗಳನ್ನು ಅನುವಾದಿಸಿದ್ದರು. ಅವುಗಳಲ್ಲಿ ಒಂದು ಠಾಗೋರ್ ಅವರ ‘ಕಾ-ಬುಲಿವಾಲಾ’ ನ 1912 ರ ಅನುವಾದವಾಗಿದೆ (ಅನುವಾದದಲ್ಲಿ ‘ಕಾಬುಲಿವಾ-ಲಾ’ ಎಂದು ಬರೆಯಲಾಗಿದೆ). ಈ ಬರವು ಚೆನ್ನಾಗಿದೆ ಎಂದು ಬೇಡಿಕೆ ಇರುವ ಕಾರಣದಿಂದಾಗಿ ಮೂಲ ಭಾಷೆಯಿಂದ ಇಂಗ್ಲಿಷ್ಗೆ ಮಾಡಲಾಗಿತ್ತು.
ರವೀಂದ್ರನಾಥ ಠಾಗೋರ್ ಅವರು 1912 ರಲ್ಲಿ ಲಂಡನ್ನಲ್ಲಿ ಪ್ರಕಟವಾದ ಗೀತಾಂಜಲಿ ಸಂಗ್ರಹಕ್ಕಾಗಿ 1913 ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದರು.