ನೋಡಲು ಹಾವಿನಂತೆ… ಮೈ ತುಂಬಾ ಝೀಬ್ರಾ ಬಣ್ಣ.. ಈ ವಿಷಕಾರಿ ಮೀನು ಸಿಕ್ಕಿದ್ದೆಲ್ಲಿ?

ನೋಡಲು ಹಾವಿನಂತೆ… ಮೈ ತುಂಬಾ ಝೀಬ್ರಾ ಬಣ್ಣ.. ಈ ವಿಷಕಾರಿ ಮೀನು ಸಿಕ್ಕಿದ್ದೆಲ್ಲಿ?

ಮಂಗಳೂರು: ಸುರತ್ಕಲ್‌ ಸಮೀಪದ ಗುಡ್ಡೆಕೊಪ್ಲ ಸಮುದ್ರ ತೀರದಲ್ಲಿ ಬಲು ಅಪರೂಪದ ಮೀನೊಂದು ಪತ್ತೆಯಾಗಿದೆ. ಸಮುದ್ರದ ಆಳದಲ್ಲಿ ವಾಸಿಸುವ ಸಮುದ್ರದ ಆಳದಲ್ಲಿ ವಾಸಿಸುವ ಲಿಯೊಪೋರ್ಡ್‌ ಹನಿಕೋಂಬ್‌ ಈಲ್‌ ಅಪರೂಪದ ಮೀನು ಪತ್ತೆಯಾಗಿದೆ.

ಲಿಯೊಪೋರ್ಡ್‌ ಹನಿಕೋಂಬ್‌ ಈಲ್‌  ಮೀನನ್ನು ಕನ್ನಡದಲ್ಲಿ ಅರೋಳಿ ಮೀನು, ತುಳು ಭಾಷೆಯಲ್ಲಿ ಮರಞ್ಞ ಮೀನು ಎಂದು ಕರೆಯಲಾಗುತ್ತದೆ. ಈ ಮೀನು ಸುರತ್ಕಲ್‌ ಸಮೀಪದ ಗುಡ್ಡೆಕೊಪ್ಲ ಸಮುದ್ರ ತೀರದಲ್ಲಿ ಪತ್ತೆಯಾಗಿ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ಬಿಸಿಲನಾಡಿನಲ್ಲಿ ಮುಂದುವರಿದ ವರುಣಾರ್ಭಟ – ತಗ್ಗು ಪ್ರದೇಶಗಳು ಜಲಾವೃತ, ಹಲವು ಗ್ರಾಮಗಳ ಸಂಪರ್ಕ ಕಡಿತ

ಅರೋಳಿ ಮೀನು ಮೇಲ್ನೋಟಕ್ಕೆ ಅಕ್ವೇರಿಯಂನಲ್ಲಿ ಸಾಕುವ ಮೀನಿನಂತೆ ಕಾಣುತ್ತದೆ. ಆದರೆ ಈ ಮೀನು ಹಾವಿನಂತೆ ಉದ್ದಕ್ಕೆ ಬೆಳೆಯುತ್ತದೆ. ಸ್ವಲ್ಪ ಮಟ್ಟಿಗೆ ವಿಷಪೂರಿತವಾಗಿರುವುದರಿಂದ ಸ್ಥಳೀಯರು ಇದನ್ನು ತಿನ್ನುವುದಿಲ್ಲ. ಹೆಚ್ಚಾಗಿ ಕಲ್ಲು ಪ್ರದೇಶದ ಎಡೆಯಲ್ಲಿ ಇದ್ದುಕೊಂಡು ಸಣ್ಣಮೀನುಗಳನ್ನು ಭಕ್ಷಿಸುತ್ತಾ ಬದುಕುತ್ತದೆ.

ಈ ಮೀನು ಮಲ್ಪೆ ಬಳಿ ಅಪರೂಪಕ್ಕೆ ಗಾಳಕ್ಕೆ ಬೀಳುತ್ತದೆ. ಕಲ್ಲುಗಳಿರುವಲ್ಲಿ ಮಾತ್ರ ಇರುತ್ತದೆ. ಹಲ್ಲುಗಳು ಹರಿತವಾಗಿರುತ್ತವೆ. ಗುಡ್ಡಕೊಪ್ಲ ಬಳಿಯ ಸಮುದ್ರ ತೀರದಲ್ಲಿ ಪತ್ತೆಯಾದ ಮೀನು ಸುಮಾರು ಮೂರರಿಂದ ನಾಲ್ಕು ಅಡಿ ಉದ್ದವಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

suddiyaana