ದೈವ Vs ದೆವ್ವ.. ವ್ಯತ್ಯಾಸ ಇಲ್ವಾ? ರಣವೀರ್ ಅಪಹಾಸ್ಯಕೆ ರಿಷಬ್ ಸೈಲೆಂಟ್!
ಶೆಟ್ರು ವಿರುದ್ಧ ಸಿಡಿದೆದ್ದ ದೈವಾರಾಧಕರು!

ದೈವ Vs ದೆವ್ವ.. ವ್ಯತ್ಯಾಸ ಇಲ್ವಾ?   ರಣವೀರ್ ಅಪಹಾಸ್ಯಕೆ ರಿಷಬ್ ಸೈಲೆಂಟ್!ಶೆಟ್ರು ವಿರುದ್ಧ ಸಿಡಿದೆದ್ದ ದೈವಾರಾಧಕರು!

ಕಾಂತಾರದಲ್ಲಿ ದೈವಗಳ ದರ್ಶನ ನೋಡಿ ಸಾಕಷ್ಟು ಪ್ರೇಕ್ಷಕರು ಮನ ಸೋತಿದ್ದಾರೆ. ದೈವಗಳ ಶಕ್ತಿ ಏನು ಅನ್ನೋದು ಇಡೀ ಪ್ರಪಂಚಕ್ಕೆ ಗೊತ್ತಾಗಿದೆ.. ಹಾಗಂತ ಕಾಂತಾರ ಬರೋ ಮುಂಚೆ ದೈವಗಳ ಶಕ್ತಿ ಕಮ್ಮಿ ಇತ್ತು ಅಂತ ಅಲ್ಲ. ಕರಾವಳಿಯಲ್ಲಿ ದೈವಗಳು ತನ್ನದೇ ಆದ ಶಕ್ತಿಯನ್ನ ಹೊಂದಿವೆ.. ಸಾವಿರಾರು ವರ್ಷಗಳಿಂದ ದೈವದ ಸೇವೆಮಾಡಿಕೊಂಡು ಇಲ್ಲಿನ ಜನ ಇದ್ದಾರೆ. ಕಾಂತಾರದ ಮೂಲಕ ಕರ್ನಾಟಕದ ಕರಾವಳಿ ದೈವದ ಶಕ್ತಿ ಏನು ಅನ್ನೋದು ಇಡೀ ವಿಶ್ವಕ್ಕೆ ಗೊತ್ತಾಗಿದೆ ಅಷ್ಟೇ. ಆದ್ರೆ ಗೊತ್ತಿದ್ದು ಗೊತ್ತಿದ್ದು ದೈವಕ್ಕೆ ಅವಮಾನ ಮಾಡ್ತಾ ಇರೋರಿಗೆ ಏನ್ ಹೇಳಬೇಕು ಅಂತಾನೇ ಗೊತ್ತಾಗುತ್ತಿಲ್ಲ. ಚಾಪ್ಪರ್ 1 ಬಂದಾಗ ಸಾಕಷ್ಟು ಜನ ಥಿಯೇಟರ್‌ನಲ್ಲಿ ದೈವ ನರ್ತನ ಮಾಡಿದ್ರು. ರಿಷಬ್ ಹಾಗೆಲ್ಲಾ ಮಾಡಬಾರದು ಅಂತ ಹೇಳಿದ್ರು. ಆದ್ರೆ ಈಗ ರಿಷಭ್ ಮುಂದೆಯ ಕರಾವಳಿ ದೈವಕ್ಕೆ ರಣವೀರ್ ಸಿಂಗ್ ಅವಮಾನ ಮಾಡಿದ್ರು ಶೆಟ್ರು ಯಾಕೆ ಸುಮ್ಮನೆ ಇದ್ರು ಅನ್ನೋ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಮನೆಯಲ್ಲಿ ನಾಳೆ ಬ್ರೇಕ್ ಫಾಸ್ಟ್ – ಇಡ್ಲಿ ಜೊತೆ ನಾಟಿಕೋಳಿ ಸವಿಯಲಿದ್ದಾರೆ ಸಿದ್ದರಾಮಯ್ಯ

ಕಾಂತಾರ ಮೂಲಕ ಕರಾವಳಿ ದೈವದ ಶಕ್ತಿ ಏನು ಅನ್ನೋದ್ದನ್ನ ಇಡೀ ವಿಶ್ವಕ್ಕೆ ತೋರಿಸಿದ್ದಾರೆ ರಿಷಭ್ ಶೆಟ್ರು. ದೈವಾರಾಧನೆ.. ಕರಾವಳಿಯ ಜನಪದ ಸಂಸ್ಕೃತಿ.. ವಿಶಿಷ್ಟ ಸಂಪ್ರದಾಯ.. ದೈವರಾಧನೆಯನ್ನ ನೋಡಿ ಜನ ಹೆಮ್ಮ ಪಟ್ಟಿದ್ದಾರೆ. ಈ ಸಿನಿಮಾ ರಿಲೀಸ್ ಆದ ಟೈಂನಲ್ಲಿ ಸಾಕಷ್ಚು ಜನ ಈ ಸಿನಿಮಾ ನೋಡಿ ದೈವ ನರ್ತನ ಮಾಡಿದ್ರು. ದೈವದ ತರ ಕುಣಿದಿದ್ರು. ಇದು ಕರಾವಳಿ ಜನರ ಆಕ್ರೋಶಕ್ಕೂ ಕಾರಣವಾಗಿತ್ತು. ರಿಷಭ್ ಶೆಟ್ಟಿ ವಿರುದ್ಧ ದೈವದ ಮೊರೆ ಕೂಡ ಒಂದಷ್ಟು ಜನ ಹೋಗಿದ್ರು. ರಿಷಬ್ ಕೂಡ ಆ ತರಮಾಡಬೇಡಿ ಅಂತ ಹೇಳಿದ್ರು. ಆ ಮೇಲೆ ಜನ ಕೂಡ ಸುಮ್ಮನಾಗಿದ್ರು. ಆದ್ರೆ ದೀಪಿಕಾ ಪಡುಕೋಣೆ ಪತಿ  ಬಾಲಿವುಡ್ ನಟ ರಣವೀರ್ ಸಿಂಗ್  ಕಾಂತಾರದಲ್ಲಿ ಬರುವ ದೈವದ ಬಗ್ಗೆ ಅಪಹಾಸ್ಯ ಮಾಡಿದ್ದಾರೆ.

ಕರಾವಳಿಗರ ನರನಾಡಿ ಆಗಿರೋ ದೈವಾರಾಧನೆಯನ್ನೇ ಬಾಲಿವುಡ್ ನಟ ರಣವೀರ್ ಸಿಂಗ್ ಅಣಕಿಸಿದ್ದಾರೆ. ಗೋವಾದಲ್ಲಿ ನಡೆದ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದ ವೇದಿಕೆ ಮೇಲೆ ಕಾಂತಾರದಲ್ಲಿ ಬರುವ ಚಾವುಂಡಿ ದೈವವನ್ನ ರಣವೀರ್ ಅಸಹ್ಯವಾಗಿ ನಟಿಸಿ ವ್ಯಂಗ್ಯ ಮಾಡಿದ್ದಾರೆ. ಕಾಂತಾರ ಚಾಪ್ಟರ್-1 ಚಿತ್ರವನ್ನ ಕೊಂಡಾಡಿದ ರಣವೀರ್ ಸಿಂಗ್, ರಿಷಬ್ ಶೆಟ್ರು ಕೊನೆಯಲ್ಲಿ ಅಭಿನಯಿಸಿದ ರೀತಿಯಲ್ಲೇ ಕಣ್ಣು ಮೇಲೆ ಮಾಡಿ ನಾಲಿಗೆ ಹೊರಗೆ ತೆಗೆದು ನಟಿಸಿದ್ದಾರೆ.. ಇನ್ನು ಕಾಂತಾರ ದೈವಕ್ಕೆ ದೆವ್ವ ಅಂತ ಕರೆದಿರೋ ರಣವೀರ್ ಸಿಂಗ್ ದೈವಾರಾಧನೆಯ ನಂಬಿಕೆಗಳಿಗೆ ಯಾವುದೇ ಗೌರವವಿಲ್ಲದೇ ಟೀಕೆ ಮಾಡಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗ್ತಿದೆ.

ಇದು ಕರುನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ರಣವೀರ್ ಸಿಂಗ್ ಮೇಲೆ ಮಾತ್ರವಲ್ಲ ರಿಷಭ್ ಮೇಲೆ ಕೂಡ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ.  ರಣವೀರ್ ಸ್ಟೇಜ್ ಮೇಲೆ ಹತ್ತುವ ಮುಂಚೆಯೇ ರಿಷಭ್ ಬಳಿ ಬಂದು ಕಾಂತಾರದ ದೈವದ ತರ ಮಾಡಿದ್ದಾರೆ. ಆಗ ರಿಷಭ್ ಬೇಡ ಆ ತರ ಮಾಡಬಾರದು ಅಂತ ಕೈ ಸನ್ನೆ ಮಾಡಿದ್ದಾರೆ. ಇದ್ದಕ್ಕೆ ಕ್ಯಾರೇ ಅನ್ನದ ರಣವೀರ್ ಮತ್ತೆ ಸ್ಟೇಜ್ ಮೇಲೆ ಹೋಗಿ ನಾಲಿಗೆ ಹೊರ ಹಾಕಿ ಕಣ್ಣು ಮೇಲೆ ಮಾಡಿ ಕಾಂತಾರ ದೈವದ ತರ ಮಾಡಿದ್ದಾರೆ. ಅಪಹಾಸ್ಯ ಮಾಡಿದ್ದಾರೆ, ಚಾವುಂಡಿ ದೈವಕ್ಕೆ ಹೆಣ್ಣು ದೆವ್ವ ಅಂತ ಕರೆದಿದ್ದಾರೆ.  ಆಗ ರಿಷಭ್ ಅದ್ದನ್ನ ನೋಡಿ ನಗಾಡುತ್ತಾ ಕುಳಿತ್ತಿದ್ದಾರೆ. ಇದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಯಾಕೆ ರಿಷಭ್ ಶೆಟ್ಟಿ ಹೋಗಿ ಅದ್ದನ್ನ ತಡೆಯಲಿಲ್ಲ. ಮೈಕ್ ತೆಗೆದುಕೊಂಡು ಆ ತರ ಮಾಡಬಾರದು ಅಂತ ಬುದ್ಧಿ ಹೇಳಬಹುದಿತ್ತು. ಕಳಗೆ ಹಾಗೇ ಮಾಡಬೇಡಿ ಅಂತ ರಿಷಬ್ ಹೇಳಿದ್ದಾರೆ ನಿಜ. ಆದ್ರೆ ಸ್ಟೇಜ್ ಮೇಲೆ ಕೂಡ ಅದ್ದನ್ನ ಅವರು ರಿಪಿಟ್ ಮಾಡಿದಾಗ ಯಾಕೆ ಸುಮ್ಮನೆ ನಗಾಡುತ್ತಾ ಕುತ್ರಿ, ಹೋಗಿ ಬುದ್ಧಿ ಹೇಳಬೇಕಿತ್ತು ಅಂತ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ. ದುಡ್ಡು ಆದ್ರೂ ಮೇಲೆ ಅದ್ರ ಬಗ್ಗೆ ಮಾತನಾಡಲ್ಲ ಅಂತ ಶೆಟ್ರು ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಹಾಗೇ ರಣವೀರ್ ಸಿಂಗ್ ವಿರುದ್ಧ ಕೂಡ ಜನ ಆಕ್ರೋಶ ಹೊರ ಹಾಕುತ್ತಿದ್ದು, ದೈವವೇ ನಿನಗೆ ಪಾಠ ಕಲಿಸುತ್ತೆ.  ದೈವವೇ ಇದ್ದಕ್ಕೆ ಉತ್ತರಿಸುತ್ತೆ ಅಂತ ಆಕ್ರೋಶ ಹೊರ ಹಾಕುತ್ತಿದ್ದಾರೆ. ದೈವಾರಾಧಕರು ತೀವ್ರ ಬೇಸರ ಹೊರಹಾಕಿದ್ದಾರೆ.

ಅಮೇಜಾನ್ ಫ್ರೈಮ್ ವಿಡಿಯೋ ರಣವೀರ್ ಸಿಂಗ್ ಅವರ ನಡೆಗೆ ಕೌಂಟರ್ ಎನ್ನುವಂತೆ, ತನ್ನ ಅಧಿಕೃತ ಅಕೌಂಟ್‌ನಿಂದ ಪೋಸ್ಟ್ ಒಂದನ್ನು ಮಾಡಿ, ಅದರಲ್ಲಿ ರಿಷಬ್ ಶೆಟ್ಟಿ ನಟನೆಯ ಅದೇ ವಿಡಿಯೋವನ್ನು ಹಾಕಿದೆ. ಜೊತೆಗೆ, ಡಿಯರ್ ರಣವೀರ್, ನಿಮಗೆ ದೈವ ( ಹಾಗೂ ದೆವ್ವ ಈ ಎರಡರ ಮಧ್ಯೆ ವ್ಯತ್ಯಾಸ ಗೊತ್ತಿಲ್ಲ. ಚಾವುಂಡಿ ಎನ್ನುವುದು ದೈವವೇ   ಹೊರತೂ ದೆವ್ವ ಅಲ್ಲ ಎಂದು ವಿಡಿಯೋ ಪೋಸ್ಟ್‌ಗೆ ಕ್ಯಾಪ್ಶನ್ ಹಾಕಿದ್ದಾರೆ.

Kishor KV