ಯಶಸ್ಸು ಕೊಟ್ಟವರನ್ನು ಮರೆತ ರಣವೀರ್ ಸಿಂಗ್ – ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಬಾಲಿವುಡ್ ಹೀರೋ ಸಿಟ್ಟು ಸರಿನಾ?

ಯಶಸ್ಸು ಕೊಟ್ಟವರನ್ನು ಮರೆತ ರಣವೀರ್ ಸಿಂಗ್ – ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಬಾಲಿವುಡ್ ಹೀರೋ ಸಿಟ್ಟು ಸರಿನಾ?

ಯಶಸ್ಸು ಕೊಟ್ಟವರು, ಬದುಕಿನ ಏಳಿಗೆಗೆ ದಾರಿಯಾದವರನ್ನು ಮರೆಯುವುದು ಖಂಡಿತಾ ಸರಿಯಲ್ಲ. ಇದನ್ನೇ ಈಗ ಮಾಡಿದ್ದಾರೆ ಬಾಲಿವುಡ್‌ನ ಫೇಮಸ್ ನಟ ರಣವೀರ್ ಸಿಂಗ್. ದೀಪಿಕಾ ಪಡುಕೋಣೆ ಅವರ ಪತಿ ರಣವೀರ್ ಸಿಂಗ್ ಬಾಲಿವುಡ್‌ನಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಲು ಕಾರಣರಾದವರು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ಇಂಥಾ ಮೇರು ನಿರ್ದೇಶಕರ ವಿರುದ್ಧವೇ ರಣವೀರ್ ಸಿಂಗ್ ಮನಸ್ತಾಪ ಹೊಂದಿದ್ದಾರೆ ಎಂಬ ವಿಚಾರ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಅಭಿನವ ಸರಸ್ವತಿಯ ಬದುಕಿನಲ್ಲಿ ನೋವುಗಳ ಸರಮಾಲೆ – ಅಮ್ಮನಿಗೆ ಕೊಟ್ಟ ಮಾತನ್ನು ಕೊನೆತನಕ ಉಳಿಸಿಕೊಂಡಿದ್ದರು ಸರೋಜಾದೇವಿ

ನಟ ರಣವೀರ್ ಸಿಂಗ್ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಬಾಲಿವುಡ್ ಕಂಡ ಒಳ್ಳೆಯ ಸ್ನೇಹಿತರು. ಈ ಜೋಡಿ ಸಾಕಷ್ಟು ಹಿಟ್ ಸಿನಿಮಾ ಕೊಟ್ಟಿರುವುದನ್ನ ಅಭಿಮಾನಿಗಳು ಮರೆತಿಲ್ಲ. ರಣವೀರ್ ಸಿಂಗ್ ಅವರ ವೃತ್ತಿ ಜೀವನವು ಇಷ್ಟು ಉನ್ನತ ಮಟ್ಟಕ್ಕೆ ಹೋಗಲು ಹಿಂದಿನ ಸೂತ್ರದಾರ ಕೂಡಾ ಬನ್ಸಾಲಿಯವರು. ರಣ್‌ವೀರ್ ಸಿಂಗ್ ಬಾಲಿವುಡ್‌ನಲ್ಲಿ ಸಕ್ಸಸ್ ಹೀರೋ ಆಗಲು ಬನ್ಸಾಲಿಯವರ ಕೊಡುಗೆ ಅಪಾರ. ರಣವೀರ್ ನಟನೆಯ ‘ರಾಮ್ ಲೀಲಾ’, ‘ಪದ್ಮಾವತ್’ ಹಾಗೂ ‘ಬಾಜಿರಾವ್ ಮಸ್ತಾನಿ’ ಚಿತ್ರಕ್ಕೆ ಬನ್ಸಾಲಿ ನಿರ್ದೇಶನ ಇದೆ. ಈ ಚಿತ್ರಗಳು ಸೂಪರ್ ಹಿಟ್ ಆಗಿದ್ದವು.

ಇದೀಗ ಒಂದು ಸಿನಿಮಾದಲ್ಲಿ ಸೆಕೆಂಡ್ ಹೀರೋ ಆಗಿ ಚಾನ್ಸ್ ಕೊಟ್ಟಿದ್ದಕ್ಕೆ ರಣವೀರ್ ಸಿಂಗ್, ಬನ್ಸಾಲಿ ವಿರುದ್ಧ ಮುನಿಸುಕೊಂಡಿದ್ದಾರೆ. ಈಗ ಇಬ್ಬರ ಮಧ್ಯೆ ಯಾವುದೂ ಸರಿ ಇಲ್ಲ ಎಂದು ಹೇಳಲಾಗುತ್ತಿದೆ. ‘ಲವ್ ಆ್ಯಂಡ್ ವಾರ್’ ಸಿನಿಮಾದಲ್ಲಿ ಆಲಿಯಾ ಭಟ್ ಹಾಗೂ ವಿಕ್ಕಿ ಕೌಶಲ್ , ರಣವೀರ್ ಸಿಂಗ್ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ‘ಲವ್ ಆ್ಯಂಡ್’ ವಾರ್ ಚಿತ್ರದಲ್ಲಿ ರಣವೀರ್​ಗೆ ಆಫರ್ ನೀಡಲಾಗಿತ್ತು. ರಣವೀರ್ ಅವರು ಇಲ್ಲಿ ಹೀರೋ ಅಲ್ಲ, ಬದಲಿಗೆ ಎರಡನೇ ಹೀರೋ. ಈ ವಿಚಾರ ರಣವೀರ್​ಗೆ ಕೋಪ ತರಿಸಿದೆ. ಈ ಕಾರಣಕ್ಕೆ ಬನ್ಸಾಲಿನ ಅವರು ಬರ್ತ್​ಡೇಗೂ ಕರೆದಿಲ್ಲ ಎನ್ನಲಾಗಿದೆ. ಜುಲೈ 6ರಂದು ರಣವೀರ್ ಸಿಂಗ್ ಅವರು 40ನೇ ವರ್ಷದ ಬರ್ತ್​ಡೇ ಆಚರಿಸಿಕೊಂಡರು. ಈ ವೇಳೆ ಆಪ್ತರು ಹಾಗೂ ಕುಟುಂಬದವರು ಭಾಗಿ ಆಗಿದ್ದರು. ಆದರೆ, ರಣವೀರ್ ಸಿಂಗ್ ಅವರು ಭನ್ಸಾಲಿ ಅವರಿಗೆ ಆಮಂತ್ರಣ ನೀಡಿಯೇ ಇಲ್ಲ ಎನ್ನಲಾಗಿದೆ. ಹೀಗಾಗಿ, ಬನ್ಸಾಲಿ ಅವರು ರಣವೀರ್ ಆಪ್ತರ ಸ್ಥಾನದಿಂದ ದೂರ ಆಗಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಅವರು ‘ಲವ್ ಆ್ಯಂಡ್ ವಾರ್’ ಚಿತ್ರಕ್ಕೆ ಹೀರೋ ಸ್ಥಾನವನ್ನು ತಮಗೇ ನೀಡಬೇಕು ಎಂದು ರಣವೀರ್ ಭಾವಿಸಿದ್ದರು. ಆದರೆ, ಬನ್ಸಾಲಿ ಅವರು ಎರಡನೇ ಹೀರೋ ಆಗಿ ಸ್ಥಾನ ಕೊಟ್ಟಿದ್ದು ಬೇಸರ ಆಗಿದೆ ಎಂದು ರಣವೀರ್ ಸ್ನೇಹಿತರೊಬ್ಬರು ತಿಳಿಸಿದ್ದಾರೆ.

Sulekha