ಸರಿಗಮಪ ಶೋಗೆ ರಂಗನ್ ಗೌಡ್ರು.. ವೀಕ್ಷಕರಿಂದಲೇ ರೀಲ್ಸ್ ಹೀರೋ ಸೆಲೆಕ್ಟ್ – ಅಣ್ಣಾವ್ರನ್ನೇ ನೆನಪಿಸ್ತಾರೆ ಬೀಟ್ ಫಾರೆಸ್ಟರ್
![ಸರಿಗಮಪ ಶೋಗೆ ರಂಗನ್ ಗೌಡ್ರು.. ವೀಕ್ಷಕರಿಂದಲೇ ರೀಲ್ಸ್ ಹೀರೋ ಸೆಲೆಕ್ಟ್ – ಅಣ್ಣಾವ್ರನ್ನೇ ನೆನಪಿಸ್ತಾರೆ ಬೀಟ್ ಫಾರೆಸ್ಟರ್](https://suddiyaana.com/wp-content/uploads/2024/12/6-1.jpg)
ಕನ್ನಡ ಚಿತ್ರರಂಗಕ್ಕೆ ಒಬ್ರೇ ಅಣ್ಣಾವ್ರು. ಅದು ನಮ್ಮ ಡಾ.ರಾಜ್ ಕುಮಾರ್. ಅಣ್ಣಾವ್ರ ವಾಯ್ಸ್ನಾಗ್ಲಿ ಅಥವಾ ಸಾಂಗ್ಗಳನ್ನಾಗಿ ಕಾಪಿ ಮಾಡೋಕೆ ಯಾರಿಗೂ ಸಾಧ್ಯ ಇಲ್ಲ. ಕಣ್ ಮುಚ್ಚಿಕೊಂಡೂ ಕೂಡ ಇದು ರಾಜ್ ಕುಮಾರ್ ವಾಯ್ಸ್ ಅಂತಾ ಹೇಳಿಬಿಡ್ಬಹುದು. ಬಟ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ರಂಗನ್ಗೌಡ ಅನ್ನೋ ಯುವಕನ ಕಂಠಸಿರಿ ಅಣ್ಣಾವ್ರನ್ನೇ ನೆನಪಿಸಿತ್ತು. ಸೋಶಿಯಲ್ ಮೀಡಿಯಾ ಬಳಕೆದಾರರೂ ಕೂಡ ನಿಮ್ಮ ವಾಯ್ಸ್ ಥೇಟ್ ಅಣ್ಣಾವ್ರ ಥರ ಇದೆ ಅಂತಾ ಪ್ರೋತ್ಸಾಹ ನೀಡಿದ್ರು. ಅದೇ ರಂಗನ್ಗೌಡಗೆ ಈಗ ಒಂದೊಳ್ಳೆ ವೇದಿಕೆ ಸಿಕ್ಕಿದೆ. ಇಷ್ಟು ದಿನ ಸೋಶಿಯಲ್ ಮೀಡಿಯಾಗಳಲ್ಲಿ ಅವ್ರ ಸಾಂಗ್ ಕೇಳಿ ಎಂಜಾಯ್ ಮಾಡಿದ್ದವ್ರು ಇನ್ಮುಂದೆ ಟಿವಿಗಳಲ್ಲೂ ನೋಡ್ಬೋದು. ಈ ಚಾನ್ಸ್ ಸಿಕ್ಕಿದ್ದೂ ಕೂಡ ನಿಮ್ಮಿಂದಲೇ. ಅದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:HITಮ್ಯಾನ್ ಬ್ಯಾಟ್ ಸೈಲೆಂಟ್.. 11 ಇನ್ನಿಂಗ್ಸ್.. ಗಳಿಸಿದ್ದು 134 ರನ್! – ರೋಹಿತ್ ಕ್ಯಾಪ್ಟನ್ಸಿ ಬುಮ್ರಾ ಪಾಲು?
ಇಂದು ಮುಂದು ಎಂದೆಂದಿಗೂ ಅಣ್ಣಾವ್ರಿಗೆ ಅಣ್ಣಾವ್ರೇ ಸರಿಸಾಟಿ. ಅವ್ರ ಸುಮಧುರ ಕಂಠಸಿರಿಯಲ್ಲಿ ಹಾಡುಗಳನ್ನ ಕೇಳೋದೇ ಒಂದು ಸೌಭಾಗ್ಯ. ಇಂಥಾ ಗಾನಗಂಧರ್ವನ ಧ್ವನಿಯನ್ನೇ ಹೋಲಿಕೆ ಮಾಡುವಂತೆ ಹಾಡ್ತಿದ್ದ ರಂಗನ್ ಗೌಡ ಈಗ ಝೀಕನ್ನಡದ ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋಗೆ ಕಾಲಿಟ್ಟಿದ್ದಾರೆ. ತಮ್ಮೊಳಗಿನ ಪ್ರತಿಭೆಯ ಮೂಲಕ ಕನ್ನಡಿಗರಿಗೆ ಮನರಂಜನೆ ನೀಡಲು ಅಡಿ ಇಟ್ಟಿದ್ದಾರೆ. ರಂಗನ್ ಗೌಡಗೇ ಅತೀಹೆಚ್ಚು ಪಾಪ್ಯುಲಾರಿಟಿ ತಂದುಕೊಟ್ಟಿದ್ದು ಇದೇ ಹಾಡು.
ರಂಗನ್ಗೌಡರ ಯುನಿಫಾರ್ಮ್ ನೋಡಿ ಅವ್ರು ಪೊಲೀಸ್ ಅಂತಾ ಅನ್ಕೊಳ್ಬೋದು. ಬಟ್ ರಂಗನ್ ಗೌಡ ಬೀಟ್ ಫಾರೆಸ್ಟರ್. ಸದ್ಯ ಬಂಡೀಪುರದಲ್ಲಿ ಡ್ಯೂಟಿ ಮಾಡ್ತಿದ್ದಾರೆ. 2017ರಲ್ಲಿ ಡ್ಯೂಟಿಗೆ ಜಾಯಿನ್ ಆಗಿದ್ದು, ಬಂಡೀಪುರದಲ್ಲೇ ಬಿಟ್ ಫಾರೆಸ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಡಿಪಾರ್ಟ್ಮೆಂಟ್ನಲ್ಲಿ ಸ್ಟೇಷನ್ ಲಿಮಿಟ್ಸ್ ಇರೋ ಹಾಗೇ ಫಾರೆಸ್ಟ್ ಡಿಪಾರ್ಟ್ಮೆಂಟ್ನಲ್ಲಿ ರೇಂಜ್ ಅಂತಾ ಲಿಮಿಟ್ಸ್ ಇರುತ್ತೆ. ಸದ್ಯ ರಂಗನ್ಗೌಡ್ರು ಮೂಲವಾಳೆ ರೇಂಜ್ನಲ್ಲಿ ಕರ್ತವ್ಯ ನಿರ್ವಹಿಸುತ್ತಾ ಅರಣ್ಯ ಸಂರಕ್ಷಣೆ ಮಾಡ್ತಿದ್ದಾರೆ. ಜೊತೆ ಜೊತೆಗೆ ಅಣ್ಣಾವ್ರ ಹಾಡುಗಳಿಗೆ ಧ್ವನಿಯಾಗ್ತಿದ್ದಾರೆ.
ಮೂಲತಃ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಪೆರೇಹಳ್ಳಿ ಗ್ರಾಮದಲ್ಲಿ ಹುಟ್ಟಿ ಬೆಳೆದ ರಂಗನ್ಗೌಡ ಅವ್ರು ತುಮಕೂರು ಯುನಿವರ್ಸಿಟಿಯಲ್ಲಿ ಹೈಯರ್ ಎಜುಕೇಷನ್ ಮುಗ್ಸಿದ್ದಾರೆ. ಪೊಲೀಸ್ ಆಫೀಸರ್ ಆಗ್ಬೇಕು ಅಂತಾ ಸಾಕಷ್ಟು ಟ್ರೈ ಮಾಡಿದ್ರು. ಕಾಂಪಿಟೇಟಿವ್ ಎಕ್ಸಾಮ್ಸ್ ಕೂಡ ಬರೆದಿದ್ರು. ಬಟ್ ಬ್ಯಾಡ್ ಲಕ್ ಸೆಲೆಕ್ಟ್ ಆಗಿಲ್ಲ. ಕೊನೆಗೆ ಫಾರೆಸ್ಟ್ ಡಿಪಾರ್ಟ್ಮೆಂಟ್ ಗೆ ಟ್ರೈ ಮಾಡಿದ್ರು. ಸೆಲೆಕ್ಟ್ ಕೂಡ ಆಯ್ತು. ಫಾರೆಸ್ಟ್ ಗಾರ್ಡ್ ಅನ್ನೋ ಡೆಸಿಗ್ನೇಷನ್ನ ಬೀಟ್ ಫಾರೆಸ್ಟರ್ ಅಂತಾ ನೇಮ್ ಚೇಂಜ್ ಮಾಡಲಾಗಿದೆ. ಬಿಟ್ ಫಾರೆಸ್ಟರ್ ಆಗಿರೋ ಗೌಡ್ರು ಹವ್ಯಾಸಿ ಹಾಡುಗಾರನಾಗಿ ಜನಮನ ಗೆಲ್ತಿದ್ದಾರೆ.
ಅಷ್ಟಕ್ಕೂ ರಂಗನ್ಗೌಡ ಏನು ಸಂಗೀತ ಕಲಿತವರಲ್ಲ. ಒಂಥರಾ ಹವ್ಯಾಸಿ ಹಾಡುಗಾರರು. ತುಂಬಾ ಜನ ಸೋಶಿಯಲ್ ಮೀಡಿಯಾದಲ್ಲಿ ಹಾಡೋದನ್ನ ನೋಡಿ ನಾನೂ ಯಾಕೆ ಟ್ರೈ ಮಾಡಬಾರದು ಅಂತಾ ಹಾಡೋಕೆ ಶುರು ಮಾಡಿದ್ರು. ಅದನ್ನ ಅಪ್ಲೋಡ್ ಕೂಡ ಮಾಡಿದ್ರು. ಅವ್ರ ವಾಯ್ಸ್ ಅದೆಷ್ಟು ಯುನಿಕ್ ಆಗಿತ್ತಂದ್ರೆ ಮೊದಲ ಹಾಡೇ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಎಷ್ಟೋ ಜನ ಇದು ರಂಗನ್ಗೌಡ ಹಾಡಿರೋ ಹಾಡು ಅಂತಾ ನಂಬೋಕೇ ರೆಡಿ ಇರ್ಲಿಲ್ಲ. ಯಾಕಂದ್ರೆ ಅವ್ರು ಹಾಡಿದ್ದು ಡಾ ರಾಜ್ ಕುಮಾರ್ ಅವ್ರು ಹಾಡಿದ್ದ ಸಾಂಗ್. ಹೀಗಾಗಿ ಲಿಪ್ ಸಿಂಕ್ ಮಾಡಿದ್ದೀಯಾ ಅಂತಾ ಕಮೆಂಟ್ಸ್ ಹಾಕಿದ್ರಂತೆ.
ಯಾವಾಗ ತಮ್ಮ ಸಾಂಗ್ಸ್ಗಳ ಬಗ್ಗೆ ನೆಗೆಟಿವ್ ಕಮೆಂಟ್ಸ್ ಜಾಸ್ತಿಯಾಯ್ತೋ ರಂಗನ್ಗೌಡ್ರಿಗೆ ಭಯ ಕಾಡಿತ್ತಂತೆ. ಯಾಕಂದ್ರೆ ಒಂದಷ್ಟು ಜನ ನಿನ್ನದಲ್ಲ ವಾಯ್ಸ್ ಅಂತಾ ಹೇಳೋಕೆ ಶುರು ಮಾಡಿದ್ರು. ಇದ್ರಿಂದ ಪ್ಯಾನಿಕ್ ಆದ ಗೌಡ್ರು ಇನ್ಮೇಲೆ ಹಾಡಲ್ಲ ಅಂದಿದ್ರಂತೆ. ಬಟ್ ಆಗ ಗೌಡ್ರಿಗೆ ಸಪೋರ್ಟ್ ಮಾಡಿದ್ದೇ ಅವ್ರ ಫ್ರೆಂಡ್ಸ್. ನಿನ್ನ ವಾಯ್ಸ್ ಬಗ್ಗೆ ಡೌಟ್ ಬರ್ತಿದೆ ಅಂದ್ರೆ ನಿನ್ನ ವಾಯ್ಸ್ ಚೆನ್ನಾಗಿದೆ ಅಂತಾ ಅರ್ಥ. ಸೋ ಇನ್ಮುಂದೆ ಹೆಚ್ಚೆಚ್ಚು ಸಾಂಗ್ಸ್ ಹಾಡು, ಅಪ್ಲೋಡ್ ಮಾಡು ಅಂತಾ ಎನ್ಕರೇಜ್ ಮಾಡಿದ್ರು.
ಇನ್ನು ರಂಗನ್ಗೌಡ್ರು ಸಾಂಗ್ಸ್ ಹಾಡೋಕೆ ಎಲ್ಲೂ ಕೂಡ ತರಬೇತಿ ಪಡ್ದಿಲ್ಲ. ಕನ್ನಡದಲ್ಲಿ ಒಳ್ಳೊಳ್ಳೆ ಸಾಂಗ್ಸ್ ಮತ್ತು ಅರ್ಥಗರ್ಭಿತವಾದ ಹಾಡುಗಳನ್ನೇ ಪಿಕ್ ಮಾಡಿಕೊಂಡು ತಮ್ಮದೇ ದಾಟಿಯಲ್ಲಿ ಹಾಡ್ತಾರೆ. ಹೀಗಾಗೇ ಜನ್ರಿಗೆ ಹೆಚ್ಚೆಚ್ಚು ಇಷ್ಟ ಆಗ್ತಿದ್ದಾರೆ.
ರೀಲ್ಸ್ ನಿಂದ ಫೇಮಸ್ ಆಗಿರೋ ರಂಗನ್ಗೌಡ್ರಿಗೆ ಸೋಶಿಯಲ್ ಮೀಡಿಯಾ ಬಳಕೆದಾರರು ಕೂಡ ಯಾವುದಾದ್ರೂ ರಿಯಾಲಿಟಿ ಶೋಗಳಲ್ಲಿ ಟ್ರೈ ಮಾಡುವಂತೆ ಸಲಹೆ ನೀಡಿದ್ರು. ಅದ್ರಂತೆ ಗೌಡ್ರು ಸರಿಗಮಪ ರಿಯಾಲಿಟಿ ಶೋಗೆ ಆಡಿಷನ್ ಕೊಟ್ಟಿದ್ದಾರೆ. ವಿಷ್ಯ ಏನಂದ್ರೆ ಈ ಸಲ ಸರಿಗಮಪಗೆ ಸ್ಪರ್ಧಿಗಳನ್ನ ಸೆಲೆಕ್ಟ್ ಮಾಡೋಕೆ ವೀಕ್ಷಕರಿಗೆ ಆಪರ್ಚುನಿಟಿ ಕೊಟ್ಟಿದೆ ಝೀಕನ್ನಡ. ಅದೇಪ್ಪ ಅಂದ್ರೆ ಇನ್ಸ್ಸ್ಟಾಗ್ರಾಮ್ನಲ್ಲಿ ಝೀ ಕನ್ನಡ ಸರಿಗಮಪ ಅಂತಾ ಅಕೌಂಟ್ ಓಪನ್ ಮಾಡಿ ಆಡಿಷನ್ ಕೊಟ್ಟಿರುವಂಥ ಸ್ಪರ್ಧಿಗಳ ಹಾಡನ್ನ ಅಲ್ಲಿ ಅಪ್ಲೋಡ್ ಮಾಡಲಾಗಿದೆ. ಯಾರ ಸಾಂಗ್ಗಳಿಗೆ ಹೆಚ್ಚು ಲೈಕ್, ವ್ಯೂಸ್ ಬರುತ್ತೋ ಅವ್ರನ್ನ ಸೆಲೆಕ್ಟ್ ಮಾಡಲಾಗುತ್ತೆ. ಮಿರಾಕಲ್ ಏನಪ್ಪ ಅಂದ್ರೆ ಅಷ್ಟೂ ಜನ್ರ ಪೈಕಿ ರಂಗನ್ಗೌಡರ ಸಾಂಗ್ ಮಿಲಿಯನ್ಗಟ್ಟಲೆ ವ್ಯೂಸ್ ಪಡೆದಿದೆ. ಹೈಯೆಸ್ಟ್ ವೀಕ್ಷಣೆ ಮತ್ತು ಲೈಕ್ಸ್ ಬಂದಿರೋದು ಅವ್ರದ್ದೇ ಹಾಡಿಗೆ. ಹೀಗಾಗಿ ಸರಿಗಮಪಗೆ ರಂಗನ್ ಗೌಡ್ರು ಸೆಲೆಕ್ಟ್ ಆಗಿದ್ದಾರೆ.
ಇನ್ನು ಸರಿಗಮಪಗೆ ಆಡಿಷನ್ ಕೊಟ್ಟ ನಡುವೆಯೇ ರಂಗನ್ಗೌಡ್ರು ಹೊಸ ಜೀವನಕ್ಕೂ ಕಾಲಿಟ್ಟಿದ್ದಾರೆ. ಡಿಸೆಂಬರ್ 3ರಂದು ಮದುವೆಯಾಗಿದ್ದಾರೆ. ಒಟ್ನಲ್ಲಿ ಒಟ್ಟೊಟ್ಟಿಗೆ ಡಬಲ್ ಧಮಾಕದ ಖುಷಿಯಲ್ಲಿರೋ ಗೌಡ್ರು ಒಂದ್ಕಡೆ ಮದುವೆ ಅನ್ನೋ ಇನ್ನಿಂಗ್ಸ್ ಆರಂಭಿಸಿದ್ರೆ ಮತ್ತೊಂದ್ಕಡೆ ಸಿಂಗಿಂಗ್ ಕಾಂಪಿಟೇಷನ್ಗೂ ಧುಮುಕಿದ್ದಾರೆ. ನಗುಮೊಗದಿಂದಲೇ ಹಾಡುತ್ತಾ ಜನರ ಮನಸ್ಸನ್ನ ಗೆದ್ದಿರೋ ರಂಗನ್ಗೌಡ್ರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಅಂತಾ ವಿಶ್ ಮಾಡ್ತಿದ್ದಾರೆ.