ಸೆಲ್ಫಿ ತೆಗೆಯಲು ಬಂದ ಅಭಿಮಾನಿಯ ಮೊಬೈಲ್ ಕಿತ್ತೆಸೆದ ನಟ ರಣಬೀರ್ ಕಪೂರ್ – ವಿಡಿಯೋ ವೈರಲ್

ಸೆಲ್ಫಿ ತೆಗೆಯಲು ಬಂದ ಅಭಿಮಾನಿಯ ಮೊಬೈಲ್ ಕಿತ್ತೆಸೆದ ನಟ ರಣಬೀರ್ ಕಪೂರ್ – ವಿಡಿಯೋ ವೈರಲ್

ಸೆಲೆಬ್ರಿಟಿಗಳು ಹೋದಲ್ಲೆಲ್ಲಾ ಅಭಿಮಾನಿಗಳು ಸುತ್ತುವರೆದು ಫೋಟೋ, ಆಟೋಗ್ರಾಫ್ ಕೊಡಿ ಅಂತ ಮುಗಿಬೀಳುತ್ತಾರೆ. ಇಂತಹ ಸಂದರ್ಭಗಳಲ್ಲಿ ಕೆಲವು ಸೆಲೆಬ್ರಿಟಿಗಳು ಬೇಗ ತಾಳ್ಮೆ ಕಳೆದುಕೊಳ್ಳುತ್ತಾರೆ. ಇನ್ನೂ ಅನೇಕರು ಎಷ್ಟೇ ಕಿರಿಕಿರಿ ಅನುಭವಿಸಿದರೂ ಅದನ್ನು ಅಭಿಮಾನಿಗಳ ಮುಂದೆ ತೋರಿಸಿಕೊಳ್ಳುವುದಿಲ್ಲ. ಆದರೆ ಕೆಲವು ಸೆಲೆಬ್ರಿಟಿಗಳು ಕೋಪಗೊಂಡು ಅಭಿಮಾನಿಗಳ ಮೇಲೆ ಕೈ ಮಾಡುತ್ತಾರೆ. ಇಂತಹ ಸಾಕಷ್ಟು ದೃಶ್ಯಗಳು ವೈರಲ್ ಆಗುತ್ತಿರುತ್ತವೆ. ಇದೀಗ ಬಾಲಿವುಡ್ ನಟ ರಣಬೀರ್ ಕಪೂರ್ ಜೊತೆ ಸೆಲ್ಫಿ ತೆಗೆಯಲು ಪ್ರಯತ್ನಿಸಿದ್ದ ಅಭಿಮಾನಿಯ ಮೊಬೈಲ್ ಅನ್ನು ಕಿತ್ತೆಸೆದಿರುವ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:ಸ್ಯಾಂಡಲ್ ವುಡ್ ಗೆ ಖ್ಯಾತ ನಟನ ಎಂಟ್ರಿ – ಸೀಕ್ರೆಟ್ ರಿವೀಲ್ ಮಾಡಿದ ಹೊಂಬಾಳೆ ಫಿಲ್ಮ್ಸ್!

ವೈರಲ್ ಆದ ವಿಡಿಯೋದಲ್ಲಿ ನಟ ರಣಬೀರ್ ಕಪೂರ್ ನಗುತ್ತಾ ಯುವ ಅಭಿಮಾನಿಯ ಜೊತೆ ಸೆಲ್ಫಿ ತೆಗೆಯಲು ಪೋಸ್ ಕೊಟ್ಟಿದ್ದಾರೆ. ಈ ವೇಳೆ ಅಭಿಮಾನಿ ಹಲವು ಬಾರಿ ಸೆಲ್ಫಿ ತೆಗೆಯಲು ಪ್ರಯತ್ನಿಸುತ್ತಿದ್ದ, ಆದರೆ ಪ್ರತಿ ಬಾರಿಯೂ ಆತನ ಮೊಬೈಲ್ ಕೈಕೊಟ್ಟಿದೆ. ಹೀಗಾಗಿ ನಟ ರಣಬೀರ್ ಕಪೂರ್ ಸಿಟ್ಟಿನಿಂದ ಆತನ ಕೈಯಿಂದ  ಮೊಬೈಲ್ ಪಡೆದುಕೊಂಡು ಎಸೆದಿದ್ದಾರೆ. ಬಳಿಕ ಅಭಿಮಾನಿ ಸೆಲ್ಫಿಗಾಗಿ ಕಪೂರ್ ಬಳಿ ವಿನಂತಿಸಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತಿದ್ದು, ಆದರೂ ರಣಬೀರ್ ಕಪೂರ್ ಆತನ ವಿನಂತಿ ಕೇಳಿಸಿಕೊಳ್ಳದೆ ಹೊರಟಿದ್ದಾರೆ ಎನ್ನಲಾಗಿದೆ.

ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಇದನ್ನು ಕಂಡ  ಕೆಲ ನೆಟ್ಟಿಗರು ಇದೊಂದು ಮೊಬೈಲ್ ಬ್ರ್ಯಾಂಡ್ ನ ಪ್ರಚಾರದಂತೆ ಕಾಣಿಸುತ್ತಿದೆ ಎಂದಿದ್ದಾರೆ. ಇನ್ನೂ ಕೆಲವರು ಅಭಿಮಾನಿ ಒಳ್ಳೆಯ ಮೊಬೈಲ್ ತೆಗೆದುಕೊಳ್ಳಲಿ ಎಂಬುದಾಗಿ ಕಪೂರ್ ಬಯಸಿರಬಹುದು ಅಂತ ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ರಣಬೀರ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ #ಆಂಗ್ರಿ ರಣಬೀರ್ ಕಪೂರ್ ಟ್ರೆಂಡ್ (#AngryRanbirKapoor) ಶುರುಮಾಡಿದ್ದಾರೆ.

suddiyaana