ಅಬ್ಬಬ್ಬಾ.. ರಣಬೀರ್ ಕಪೂರ್ ಧರಿಸಿರುವ ವಾಚ್ ಬೆಲೆ ಇಷ್ಟೊಂದಾ?

ಅಬ್ಬಬ್ಬಾ.. ರಣಬೀರ್ ಕಪೂರ್ ಧರಿಸಿರುವ ವಾಚ್ ಬೆಲೆ ಇಷ್ಟೊಂದಾ?

ಟಾಲಿವುಡ್, ಬಾಲಿವುಡ್ ತಾರೆಯರು ತೊಡುವ ಡ್ರೆಸ್ಸಿಂಗ್ ಸ್ಟೈಲ್ ನಿಂದ ಹಿಡಿದು ವಾಚ್, ಶೂ, ಕನ್ನಡಕ ಹೀಗೆ ಎಲ್ಲದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಅವರು ಕೂತ್ರೂ, ನಿಂತ್ರೂ ಸದಾ ಸುದ್ದಿಯಾಗುತ್ತಲೇ ಇರುತ್ತೆ. ಇನ್ನು ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಎಂದ ಕೂಡಲೇ ಹಲವು ಸುದ್ದಿಗಳು, ಸಿನಿಮಾಗಳು ಕಣ್ಮುಂದೆ ಬರುತ್ತೆ. ಇತ್ತೀಚೆಗಷ್ಟೇ ರಣಬೀರ್‌ ಕಪೂರ್‌ಅವರು ಹೊಸ ಕಾರೊಂದನ್ನು ಖರೀಸಿ ಭಾರಿ ಸುದ್ದಿಯಾಗಿದ್ದರು. ಇದೀಗ ನಟ ರಣಬೀರ್‌ ಕಪೂರ್‌ ವಾಚ್‌ ವಿಚಾರಕ್ಕೆ ಭಾರಿ ಸುದ್ದಿಯಾಗಿದ್ದಾರೆ. ಅವರು ಧರಿಸಿರುವ ವಾಚ್‌ ಬೆಲೆಯ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದೆ.

ನಟ ರಣಬೀರ್ ಕಪೂರ್ ಅವರು ತಮ್ಮ ಫ್ಯಾಷನ್‌ಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಹೀಗಾಗಿ ರಣಬೀರ್ ಕಪೂರ್ ಅಭಿಮಾನಿಗಳು ಅವರ ಆಯ್ಕೆ ಇಷ್ಟವಾಗುತ್ತೆ. ಬಟ್ಟೆಗಳು, ಹೇರ್‌ ಸ್ಟೈಲ್‌ ಪ್ರತಿಯೊಂದು ವಿಚಾರವೂ ಚರ್ಚೆಯಾಗುತ್ತೆ. ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಣಬೀರ್ ತಮ್ಮ ಸ್ಟೈಲಿಶ್ ಲುಕ್ ಮೂಲಕ ಅಭಿಮಾನಿಗಳನ್ನು ಆಕರ್ಷಿಸಿದ್ದರು. ಆ ಕಾರ್ಯಕ್ರಮದಲ್ಲಿ ರಣಬೀರ್ ಕಪೂರ್ ಧರಿಸಿರುವ ವಾಚ್ ಒಂದು ಭಾರಿ ಸುದ್ದಿಯಲ್ಲಿದೆ. ಅದರ ಬೆಲೆಯ ಬಗ್ಗೆ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

ಇದನ್ನೂ ಓದಿ: 60 ವರ್ಷಗಳ ಹಿಂದಿನ ರೊಲೆಕ್ಸ್‌ ವಾಚ್‌ ಬರೋಬ್ಬರಿ 41 ಲಕ್ಷ ರೂಪಾಯಿಗೆ ಮಾರಾಟ! ಏನಿದರ ವಿಶೇಷತೆ?

ಆ ಕಾರ್ಯಕ್ರಮದಲ್ಲಿ ರಣಬೀರ್‌ ಕಪೂರ್‌ ಅವರು ಧರಿಸಿದ್ದ ‘ಪಾಟೆಕ್ ಫಿಲಿಪ್’ ವಾಚ್ ವಿಶೇಷ ಆಕರ್ಷಣೆಯಾಗಿತ್ತು. ಈ ವಾಚ್‌ ಅನ್ನು ನೋಡಿದ ಅಭಿಮಾನಿಗಳು ಅದರ ಬೆಲೆ ಎಷ್ಟು ಅಂತಾ ತಲೆಕೆಡಿಸಿಕೊಂಡಿದ್ದರು. ಇದೀಗ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಣಬೀರ್‌ ಕಪೂರ್‌  ಪಾಟೆಕ್ ಫಿಲಿಪ್ ಬ್ರಾಂಡ್‌ನ ಅಕ್ವಾನಾಟ್ ಸೆಲ್ಫ್-ವೈಂಡಿಂಗ್ ವಾಚ್ ಧರಿಸಿದ್ದರು. ಇದರ  ಬೆಲೆ ಬರೋಬ್ಬರಿ 72.6 ಲಕ್ಷ. ರೂ. ರಣಬೀರ್ ಪಾಟೆಕ್ ಫಿಲಿಪ್ 5168G-Aquanaut ವಾಚ್ ಅನ್ನು ಹೊಂದಿದ್ದಾರೆ.

ಈ ವಾಚ್​ ಅತ್ಯಂತ ಆಕರ್ಷಕ ಮತ್ತು ಚಿನ್ನದ ಅಂಕಿಗಳನ್ನು ಹೊಂದಿದೆ. ಇದು ನೀಲಿ ಬಣ್ಣವನ್ನು ಹೊಂದಿದ್ದು, ಉಷ್ಣವಲಯದ ಸಂಯೋಜಿತ ಪಟ್ಟಿಯನ್ನು ಹೊಂದಿದೆ. ಸದ್ಯ ಈ ವಾಚ್ ಗೆ ಸಂಬಂಧಿಸಿದ ಫೋಟೋಗಳು ವೈರಲ್ ಆಗುತ್ತಿವೆ.

Shwetha M