‘ರಾಹಾ’ ಮುದ್ದು ಮಗಳ ಹೆಸರನ್ನು ಬಹಿರಂಗ ಪಡಿಸಿದ ಬಾಲಿವುಡ್ ಸ್ಟಾರ್ ಜೋಡಿ
ರಣಬೀರ್, ಆಲಿಯಾ ದಂಪತಿಯ ಮುದ್ದು ಮಗಳಿಗೆ ನಾಮಕರಣದ ಸಂಭ್ರಮ

‘ರಾಹಾ’ ಮುದ್ದು ಮಗಳ ಹೆಸರನ್ನು ಬಹಿರಂಗ ಪಡಿಸಿದ ಬಾಲಿವುಡ್ ಸ್ಟಾರ್ ಜೋಡಿರಣಬೀರ್, ಆಲಿಯಾ ದಂಪತಿಯ ಮುದ್ದು ಮಗಳಿಗೆ ನಾಮಕರಣದ ಸಂಭ್ರಮ

ಬಾಲಿವುಡ್ ಸ್ಟಾರ್ ಕಪಲ್ ಅಂತಾನೇ ಫೇಮಸ್ ಆಗಿರುವ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ತಮ್ಮ ಮುದ್ದು ಮಗಳಿಗೆ ನಾಮಕರಣ ಮಾಡಿದ್ದಾರೆ. ಮುದ್ದು ಕಂದಮ್ಮನಿಗೆ  ‘ರಾಹಾ’ ಎಂಬ ಹೆಸರಿಟ್ಟಿದ್ದಾರೆ. ತಮ್ಮ ಮಗಳಿಗೆ ಇಟ್ಟ ಚಂದದ ಹೆಸರಿನ ಅರ್ಥವನ್ನೂ ಕೂಡಾ ರಣಬೀರ್ ಹಾಗೂ ಆಲಿಯಾ ವಿವರಿಸುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ :  ವೈಷ್ಣವಿ ಗೌಡ ಎಂಗೇಜ್ ಮೆಂಟ್ ಕಾನ್ಸಲ್: ಇದನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ವೈಷ್ಣವಿ ಹೇಳಿದ್ಯಾಕೆ ?

ಬಾಲಿವುಡ್ ಸ್ಟಾರ್ ಜೋಡಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಗೆ ನವೆಂಬರ್ 6 ರಂದು ಮುದ್ದಾದ ಹೆಣ್ಣು ಮಗು ಜನಿಸಿತ್ತು.  ಸೆಲೆಬ್ರಿಟಿ ದಂಪತಿ ತಮ್ಮ ಮಗಳಿಗೆ ನಾಮಕರಣ ಮಾಡಿದ್ದು, ರಾಹಾ ಎಂದು ಹೆಸರಿಟ್ಟಿದ್ದಾರೆ. ಮಗಳ ಹೆಸರನ್ನು ಅಲಿಯಾ ಭಟ್ ಇನ್‌ಸ್ಟಾಗ್ರಾಂ ಮೂಲಕ ಬಹಿರಂಗ ಪಡಿಸಿದ್ದಾರೆ. ರಾಹಾ ಪದದ ಅರ್ಥವನ್ನು ಅಲಿಯಾ ಭಟ್ ವಿವರಿಸಿದ್ದಾರೆ. ರಾಹಾ ಹಲವು ಅರ್ಥಗಳನ್ನು ಹೊಂದಿದೆ. ರಾಹಾ ಎಂದರೆ ದೈವಿಕ ಮಾರ್ಗ ಎಂದರ್ಥ. ಸ್ವಾಹಿಲಿ ಭಾಷೆಯಲ್ಲಿ ಸಂತೋಷ. ಇನ್ನು ಸಂಸ್ಕೃತದಲ್ಲಿ ಕುಲ ಎಂದೂ ಅರ್ಥವಿದೆ. ಬಂಗಾಳಿ ಭಾಷೆಯಲ್ಲಿ ವಿಶ್ರಾಂತಿ, ಸೌಕರ್ಯ, ಪರಿಹಾರ ಎಂದರ್ಥ, ಅರೆಬಿಕ್ ಭಾಷೆಯಲ್ಲಿ ರಾಹಾ ಎಂದರೆ ಶಾಂತಿ, ಸಂತೋಷ ಹಾಗೂ ಸ್ವಾತಂತ್ರ್ಯ ಎಂಬ ಅರ್ಥವಿದೆ. ನಾವು ರಾಹಾಳನ್ನು ಕೈಯಲ್ಲಿ ಹಿಡಿದ ದಿನದಿಂದ ನಾವು ಸಂತೋಷ, ಶಾಂತಿ ಅನುಭವಿಸುತ್ತಿದ್ದೇವೆ. ನಮ್ಮ ಕುಟುಂಬವನ್ನು ಜೀವಂತವಾಗಿಸಿದ, ಸಂತೋಷವಾಗಿರಿಸಿದ ರಾಹಾಳಿಗೆ ಧನ್ಯವಾದ. ನಮ್ಮ ಜೀವನ ಈಗಷ್ಟೇ ಆರಂಭವಾದಂತಿದೆ ಎಂದು ಅಲಿಯಾ ಭಟ್ ಹೇಳಿದ್ದಾರೆ.

suddiyaana