ಪುರುಷ ಯಾವಾಗ ಅ*ತ್ಯಾಚಾರ ಮಾಡ್ತಾನೋ ಗೊತ್ತಿಲ್ಲ.. ಎಲ್ಲ ಪುರುಷರನ್ನ ಜೈಲಿಗೆ ಹಾಕಿ ಎಂದ ನಟಿ ರಮ್ಯಾ!

ಸ್ಯಾಂಡಲ್‌ವುಡ್ ನಟಿ ರಮ್ಯಾ ಪುರುಷರ ವಿರುದ್ಧ ಪೋಸ್ಟ್ ಹಾಕಿ ವಿವಾದಕ್ಕೆ ಗುರಿಯಾಗಿದ್ದಾರೆ. ಪುರುಷರನ್ನ ಜೈಲಿಗೆ ಹಾಕಿ ಎಂದು ರಮ್ಯಾ ಹೇಳಿದ್ದು ಭಾರಿ ಚರ್ಚೆಗೆ ಗುರಿಯಾಗಿದೆ.
ಇದನ್ನೂ ಓದಿ: ಬಳ್ಳಾರಿ ಬ್ಯಾನರ್ ಗಲಾಟೆ ಕೇಸ್! – ಬಂಧನ ಭೀತಿಯಿಂದ ಬಳ್ಳಾರಿ ತೊರೆದ ಕಾರ್ಯಕರ್ತರು!
ಬೀದಿನಾಯಿಗಳ ಹಾವಳಿ ಕುರಿತು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಈ ವೇಳೆ ಬೀದಿನಾಯಿಗಳ ಮನಸ್ಥಿತಿ ಯಾವಾಗ ಹೇಗಿರುತ್ತೋ ಹೇಳಲು ಸಾಧ್ಯವಿಲ್ಲ. ಬೀದಿನಾಯಿಗಳ ಮನಸ್ಸು ಯಾರಿಗೂ ಅರ್ಥವಾಗಲ್ಲ. ಯಾವಾಗ ಕಚ್ಚುವುದು, ಯಾವಾಗ ಕಚ್ಚುವುದಿಲ್ಲ ಎಂದು ಹೇಳಲಾಗಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ಅಭಿಪ್ರಾಯಕ್ಕೆ ನಟಿ ಹಾಗೂ ರಾಜಕಾರಣಿ ರಮ್ಯಾ ಈ ರೀತಿಯಾಗಿ ಕಿಡಿಕಾರಿದ್ದಾರೆ.
ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ, ಪುರುಷನ ಮನಸ್ಸು ಅರ್ಥಮಾಡಿಕೊಳ್ಳಲು ಆಗಲ್ಲ. ಪುರುಷನು ಯಾವಾಗ ಅತ್ಯಾಚಾರ ಮಾಡ್ತಾನೋ? ಅಥವಾ ಯಾವಾಗ ಕೊಲೆ ಮಾಡ್ತಾನೋ ಗೊತ್ತಿಲ್ಲ. ಹಾಗಾಗಿ, ಎಲ್ಲಾ ಪುರುಷರನ್ನ ಜೈಲಿಗೆ ಹಾಕಲಾಗುತ್ತಾ ಅಂತ ರಮ್ಯಾ ಇನ್ಸಾಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಸುಪ್ರೀಂಕೋರ್ಟ್ ಅಭಿಪ್ರಾಯವನ್ನು ಟೀಕಿಸಿದ್ದಾರೆ. ಇದೀಗ ರಮ್ಯಾ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೋರ್ಟ್ ಅಭಿಪ್ರಾಯದ ಬಗ್ಗೆ ನಟಿ ಹೀಗೆ ಹೇಳಿದ್ದು ಸರಿಯಲ್ಲ ಎಂದು ಫ್ಯಾನ್ಸ್ ಹೇಳಿದ್ದಾರೆ.

ನೋಡಿರಿ

