ನಟಿ ರಮ್ಯಾ Vs ದರ್ಶನ್ ಫ್ಯಾನ್ಸ್ – ಕೇಸ್ ಕೊಟ್ರೂ ನಿಲ್ಲದ ಅಶ್ಲೀಲ ಮೆಸೆಜ್!

ದರ್ಶನ್ ಫ್ಯಾನ್ಸ್ ಹಾಗೂ ರಮ್ಯಾ ನಡುವಿನ ವಾರ್ ದಿನೇ ದಿನೇ ಹೆಚ್ಚಾಗ್ತಾನೆ ಇದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತಿದ್ದಕ್ಕೆ ನಟಿ ರಮ್ಯಾಗೆ ಜೊತೆಗೆ ಡಿ-ಬಾಸ್ ಅಭಿಮಾನಿಗಳು ನಿರಂತರವಾಗಿ ರಮ್ಯಾಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ ನಟಿ ಕೂಡ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆಗಿದ್ದಾರೆ. ಅಶ್ಲೀಲ ಮೆಸೆಜ್ ಹಾಕಿದವರ ವಿರುದ್ಧ ರಮ್ಯಾ ದೂರು ಕೂಡ ಕೊಟ್ಡಿದ್ದಾರೆ. ಆದ್ರೂ ಕೂಡ ದರ್ಶನ್ ಫ್ಯಾನ್ ಮೆಸೆಜ್ ಕಳುಹಿಸುತ್ತಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದಾಸನಿಗೆ ಮತ್ತೆ ಢವಢವ! – ಕಾಮಾಕ್ಯ ದೇವಿ ಮೊರೆ ಹೋದ ದರ್ಶನ್
ಮೋಹಕತಾರೆ ರಮ್ಯಾ ನಟ ದರ್ಶನ್ ವಿರುದ್ಧ ಮಾತನಾಡಿದ್ದಕ್ಕೆ ದರ್ಶನ್ ಫ್ಯಾನ್ಸ್ ಕೆಂಡ ಕಾರ್ತಿದ್ದಾರೆ. ಈಗಾಗಲೇ ಇನ್‌ಸ್ಟಾಗ್ರಾಂ ಮೂಲಕ ಅಶ್ಲೀಲ ಮೆಸೇಜ್ ಬಂದ ಹಿನ್ನೆಲೆ ನಟಿ ರಮ್ಯಾಗೆ ಈಗಾಗಲೇ 43 ಅಕೌಂಟ್‌ಗಳ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ಇಷ್ಟೆಲ್ಲಾ ಆದರೂ ಡಿ-ಬಾಸ್ ಫ್ಯಾನ್ಸ್‌ನಿಂದ ಅಶ್ಲೀಲ ಮೆಸೇಜ್‌ಗಳು ಮುಂದುವರಿದಿವೆ.
ದೂರು ದಾಖಲಾದ 43 ಅಕೌಂಟ್‌ಗಳ ಪೈಕಿ ಒಂದು ಅಕೌಂಟ್ `ದಿ-ಡೆವಿಲ್-ಲವ್-181′ ನಿಂದ ಪದೇ ಪದೇ ಅಶ್ಲೀಲ ಸ್ಟೇಟಸ್ ಹಾಗೂ ಮೆಸೇಜ್‌ಗಳು ಬರುತ್ತಲೇ ಇವೆ. ಇನ್ನೊಂದು ಕಡೆ ಡಿ-ಬಾಸ್ ಅಭಿಮಾನಿಗಳು ಸ್ವಲ್ಪ ದಿನ ಸುಮ್ನಿರೋಣ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಇನ್ನೂ ಎಫ್‌ಐಆರ್ ದಾಖಲಾಗಿ ಎರಡು ದಿನ ಕಳೆದರೂ ಪೊಲೀಸರು ಯಾವುದೇ ಕ್ರಮ ಜರುಗಿಸಿಲ್ಲ.
ಇನ್ನು ಸ್ಯಾಂಡಲ್‌ವುಡ್‌ನ ಕೆಲ ನಟ, ನಟಿಯರು ಕೂಡ ರಮ್ಯಾಗೆ ಬೆಂಬಲ ಸೂಚಿಸಿದ್ದಾರೆ. ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಒಳ್ಳೆಹುಡುಗ ಪ್ರಥಮ್, ಯುವರಾಜ್ ಕುಮಾರ್ ಈ ಬಗ್ಗೆ ಮಾತನಾಡಿದ್ದು, ಹೆಣ್ಣು ಮಕ್ಕಳ ಬಗ್ಗೆ ಕೆಟ್ಟ ಕಮೆಂಟ್ ಮಾಡುವವರ ವಿರುದ್ಧ ಕ್ರಮಕೈಗೊಳ್ಳಬೇಕು ಅಂತ ಹೇಳಿದ್ದಾರೆ.

ನೋಡಿರಿ

