ಕರ್ನಾಟಕದ ಶಿಲ್ಪಿ ಅರುಣ್​ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹ ಫೈನಲ್! – ಜ. 22 ರಂದು ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ

ಕರ್ನಾಟಕದ ಶಿಲ್ಪಿ ಅರುಣ್​ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹ ಫೈನಲ್! – ಜ. 22 ರಂದು ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ

ಎಲ್ಲೆಲ್ಲೂ ರಾಮನ ಜಪ ಶುರುವಾಗಿದೆ. ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು, ಜನವರಿ 22 ರಂದು ಲೋಕಾರ್ಪಣೆಗೊಳ್ಳಲಿದೆ. ಇದೀಗ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಳ್ಳುವ ರಾಮಮಲ್ಲಾ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ. ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಎನ್ನುವರು ಕೆತ್ತನೆ ಮಾಡಿರುವ ವಿಗ್ರಹವನ್ನೇ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: ಅತ್ಯಾಧುನಿಕ ಅಯೋಧ್ಯೆ ರೈಲು ನಿಲ್ದಾಣಕ್ಕೆ ನಮೋ ಚಾಲನೆ – ಏನಿದರ ವಿಶೇಷತೆ?

ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲು ಮೂರು ವಿಗ್ರಹಳನ್ನು ಕೆತ್ತನೆ ಮಾಡಲಾಗಿತ್ತು. ಕರ್ನಾಟಕ ಮೂಲದ ಇಬ್ಬರು ಶಿಲ್ಪಿಗಳು ಹಾಗೂ ರಾಜಸ್ಥಾನ ಮೂಲದ ಶಿಲ್ಪಿಯೊಬ್ಬರು ರಾಮಲಲ್ಲಾವನ್ನು ವಿಗ್ರಹವನ್ನು ಕೆತ್ತನೆ ಮಾಡಿದ್ದರು. ಇದೀಗ ಮೂರು ವಿಗ್ರಹಗಳ ಪೈಕಿ ಒಂದು ವಿಗ್ರಹವನ್ನು ಚುನಾವಣೆ ನಡೆಸಿ ಆಯ್ಕೆ ಮಾಡಲಾಗಿದೆ. ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಎನ್ನುವರು ಕೆತ್ತನೆ ಮಾಡಿರುವ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ.ಅರುಣ್‌ ಅವರು ಕೆತ್ತನೆ  ಮಾಡಿದ ಮೂರ್ತಿಯೇ ಫೈನಲ್​​​​​​ ಎಂದು ರಾಮಜನ್ಮ ಭೂಮಿ ಟ್ರಸ್ಟ್​​​​​​ ಹೇಳಿದೆ.

ಮತ ಹಾಕುವ ಮೂಲಕ ರಾಮಲಲ್ಲಾನ ಮೂರ್ತಿಯನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಜನವರಿ 22ರಂದು ಈ ಮೂರ್ತಿಯನ್ನು ಪ್ರಾಣ ಪ್ರತಿಷ್ಠೆ ಮಾಡಲಾಗುವುದು ಎಂದು ರಾಮಜನ್ಮ ಭೂಮಿ ಟ್ರಸ್ಟ್‌ ಹೇಳಿದೆ.

ಅರುಣ್ ಯೋಗಿರಾಜ್ ಎಂಬಿಎ ಪದವೀಧರರಾಗಿದ್ದಾರೆ.  ಕಾರ್ಪೋರೇಟ್ ನೌಕರಿಯನ್ನು ತೊರೆದು ಕುಟುಂಬ ನಡೆಸಿಕೊಂಡು ಬಂದ ಶಿಲ್ಪ ಕೆತ್ತನೆ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Shwetha M