ಬಾಂಬರ್‌ಗಳ ಟಾರ್ಗೆಟ್‌ ಇದ್ದಿದ್ದು ರಾಮೇಶ್ವರಂ ಕೆಫೆ ಅಲ್ಲ! – ವಿಚಾರಣೆಯಲ್ಲಿ ಬಯಲಾಯ್ತು ಸ್ಫೋಟಕ ವಿಚಾರ!

ಬಾಂಬರ್‌ಗಳ ಟಾರ್ಗೆಟ್‌ ಇದ್ದಿದ್ದು ರಾಮೇಶ್ವರಂ ಕೆಫೆ ಅಲ್ಲ! – ವಿಚಾರಣೆಯಲ್ಲಿ ಬಯಲಾಯ್ತು ಸ್ಫೋಟಕ ವಿಚಾರ!

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಟೋಟಗೊಂಡು ಒಂದೂವರೆ ತಿಂಗಳು ಕಳೆಯುತ್ತಾ ಬಂದಿದೆ. ಈ ಪ್ರಕರಣದ ಮಾಸ್ಟರ್‌ ಮೈಂಡ್‌ ಹಾಗೂ ಬಾಂಬರ್‌ ಅನ್ನು ಈಗಾಗಲೇ ಎನ್‌ಐಎ ಅಧಿಕಾರಿಗಳು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯಲ್ಲಿ ಆರೋಪಿಗಳು ಸ್ಪೋಟಕ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಂಗಣ್ಣ ಕರಡಿಗೆ ಕಾಂಗ್ರೆಸ್‌ ಗಾಳ – ಸಂಸದರ ಮನೆಗೆ ದಿಢೀರ್‌ ಭೇಟಿ ನೀಡಿದ ಲಕ್ಷ್ಮಣ ಸವದಿ!

ಎನ್‌ಐಎ ಅಧಿಕಾರಿಗಳು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಗೊಳಿಸಿದ್ದಾರೆ. ಹತ್ತು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇದೀಗ ಅರೆಸ್ಟ್‌ ಆಗಿರುವ ಆರೋಪಿಗಳು ವಿಚಾರಣೆಯಲ್ಲಿ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ಆರೋಪಿಗಳ ಟಾರ್ಗೆಟ್‌ ಬೇರೆಯದ್ದೇ ಆಗಿತ್ತು. ಬಾಂಬರ್‌ಗಳು ರಾಜ್ಯದ ಆರ್ಥಿಕತೆಗೆ ಪೆಟ್ಟು ಕೊಡಲು ಟಾರ್ಗೆಟ್ ಮಾಡಿದ್ದರು. ಆದರೆ ಈ ಗುರಿ ಕಷ್ಟವಾಗಿದ್ದ ಕಾರಣ ಕೊನೆಗೆ ರಾಮೇಶ್ವರಂ ಕೆಫೆಯನ್ನು ಆಯ್ಕೆ ಮಾಡಿದ್ದರು ಎಂದು ಹೇಳಿದ್ದಾರೆ ಅಂತಾ ಮೂಲಗಳು ತಿಳಿಸಿವೆ.

ಕೋಲ್ಕತ್ತಾದಲ್ಲಿ ಸೆರೆಸಿಕ್ಕ ಅಬ್ದುಲ್ ಮತಿನ್ ತಾಹ ಹಾಗೂ ಮುಸಾವಿರ್ ಹುಸೇನ್‌ನ ವಿಚಾರಣೆ ವೇಳೆ ಒಂದೊಂದೆ ಸ್ಫೋಟಕ ವಿಚಾರಗಳು ಹೊರಬರುತ್ತಿವೆ. ಐಟಿ ಪಾರ್ಕ್‌ಗಳನ್ನು ಟಾರ್ಗೆಟ್‌ ಮಾಡಿದ್ದ ಆರೋಪಿಗಳು ದೊಡ್ಡ ಸಾಫ್ಟ್‌ವೇರ್‌ ಕಂಪನಿಯನ್ನು ಸ್ಫೋಟ ಮಾಡಲು ಆರಂಭದಲ್ಲಿ ಪ್ಲ್ಯಾನ್‌ ಮಾಡಿದ್ದರು. ಅದರಲ್ಲೂ ಮಹದೇವಪುರ ವಲಯದಲ್ಲಿ ಸಾಕಷ್ಟು ಐಟಿ ಕಂಪನಿಗಳಿದ್ದು ಯಾವುದಾದರೂ ಕಂಪನಿಯನ್ನು ಸ್ಫೋಟ ಮಾಡಿದರೆ ವಿದೇಶಿ ಬಂಡವಾಳ ಹೂಡಿಕೆದಾರರು ಭಾರತಕ್ಕೆ ಹೂಡಿಕೆ ಮಾಡಲು ಬರುವುದಿಲ್ಲ. ಇದರಿಂದಾಗಿ ದೇಶದ ಆರ್ಥಿಕತೆ ಕುಸಿಯುತ್ತದೆ ಎಂದು ಭಾವಿಸಿ ಐಟಿ ಕಂಪನಿ ಬಳಿ ಬಾಂಬ್‌ ಸ್ಫೋಟಿಸಲು ತಯಾರಿ ನಡೆಸಿದ್ದರು.

ಐಟಿ ಕಂಪನಿಗಳ ಬಳಿ ಸ್ಫೋಟಕ್ಕೆ ಸಂಚು ರೂಪಿಸಿದಾಗ ಅಲ್ಲಿ ಸಿಸಿಟಿವಿಗಳು ಇದೆ. ಭದ್ರತಾ ಸಿಬ್ಬಂದಿ ಇರುತ್ತಾರೆ. ಪಾರ್ಕ್‌ ಒಳಗಡೆ ಹೋಗಲು ಅಷ್ಟು ಸುಲಭವಾಗಿ ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತ ಅವರು ಈ ಪ್ಲ್ಯಾನ್‌ ಕೈ ಬಿಟ್ಟು ಟೆಕ್ಕಿಗಳು ಹೆಚ್ಚು ಸೇರುವ ಜಾಗವನ್ನು ಟಾರ್ಗೆಟ್‌ ಮಾಡಿದ್ದರು. ಅಂತಿಮವಾಗಿ ಇವರು ಬೆಂಗಳೂರಿನ ಕುಂದಲಹಳ್ಳಿಯ ಬ್ರೂಕ್‌ಫೀಲ್ಡ್‌  ಬಳಿ ಇರುವ ರಾಮೇಶ್ವರಂ ಕೆಫೆಯನ್ನು ಆಯ್ಕೆ ಮಾಡಿ ಬಾಂಬ್‌ ಸ್ಫೋಟ ಮಾಡಿದ್ದಾರೆ ಎಂಬ ವಿಚಾರ ಎನ್‌ಐಎ ಮೂಲಗಳಿಂದ ತಿಳಿದು ಬಂದಿದೆ.

Shwetha M