ರಾಮೇಶ್ವರಂ ಕೆಫೆ ಬ್ಲಾಸ್ಟ್​ ಕೇಸ್ – ಆರೋಪಿ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ NIA

ರಾಮೇಶ್ವರಂ ಕೆಫೆ ಬ್ಲಾಸ್ಟ್​ ಕೇಸ್ – ಆರೋಪಿ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ NIA

ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಗೊಂಡು ಆರು ದಿನಗಳೇ ಕಳೆದಿದೆ. ಆರೋಪಿಯ ಪತ್ತೆಗಾಗಿ ಹಗಲು ರಾತ್ರಿಯೆನ್ನದೇ ಎನ್‌ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆದರೂ ಸ್ಫೋಟಕ ಬ್ಯಾಗ್ ಇಟ್ಟು ಹೋದವನ ಪತ್ತೆಯಾಗಿಲ್ಲ. ಆರೋಪಿಗಾಗಿ ತೀವ್ರ ಶೋಧ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಸುಳಿವು ಕೊಟ್ಟವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ.

ಇದನ್ನೂ ಓದಿ: ಪ್ರವಾಸಕ್ಕೆ ಹೋಗಿದ್ದ ಭಾರತೀಯರಿಗೆ ಕಾದಿತ್ತು ಶಾಕ್ – ಯುವಕರನ್ನು ಸೆರೆ ಹಿಡಿದು ಉಕ್ರೇನ್ ಯುದ್ಧಕ್ಕೆ ಕಳುಹಿಸಿದ ರಷ್ಯಾ.!

ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ  ರಾಷ್ಟ್ರೀಯ ತನಿಖಾ ಸಂಸ್ಥೆ ತನ್ನ ತನಿಖೆಯನ್ನು ಇನ್ನಷ್ಟು ಚುರುಕು ಮಾಡಿದೆ. ಕೆಲವು ಶಂಕಿತರ ಮಾಹಿತಿ ಮೇರೆಗೆ ಬೆಂಗಳೂರು ಮಾತ್ರವಲ್ಲ, ಹೊರ ರಾಜ್ಯಗಳಲ್ಲಿ ಸಹ ಕಾರ್ಯಾಚರಣೆ ನಡೆಸಿದೆ.  ಬುಧವಾರ ಬಾಂಬರ್‌ನ ಫೋಟೋವನ್ನು ಹಂಚಿಕೊಂಡಿರುವ ಎನ್‌ಐಎ, ಬಾಂಬರ್‌ನ ಬಂಧನಕ್ಕೆ ಕಾರಣವಾಗಬಲ್ಲ ಮಾಹಿತಿ ನೀಡಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ತಿಳಿಸಿದೆ. ಅದಲ್ಲದೆ, ಮಾಹಿತಿ ನೀಡಿದವರ ವ್ಯಕ್ತಿಯನ್ನು ಗೌಪ್ಯವಾಗಿ ಇಡುವುದಾಗಿ ತಿಳಿಸಿದೆ. ಶಂಕಿತ ಉಗ್ರನ ಮಾಹಿತಿಯನ್ನು 08029510900, 8904241100  ತಿಳಿಸುವಂತೆ ಎನ್‌ಐಎ ತಿಳಿಸಿದ್ದು, ಮಾಹಿತಿ ನೀಡಿದ ವ್ಯಕ್ತಿಯ ಗುರುತನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಥಳೀಯರ ಮಾಹಿತಿಯನ್ನೂ ಈ ವೇಳೆ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಕೆಫೆಯ ಮುಂಭಾಗದಲ್ಲಿಯೇ ಬಸ್‌ ನಿಲ್ದಾಣವಿದ್ದು, ಕೆಫೆಯವರೆಗೆ ಶಂಕಿತ ವ್ಯಕ್ತಿ ನಡೆದು ಬಂದ ದಾರಿಯನ್ನು ತನಿಖೆ ಮಾಡಿದೆ. ಘಟನೆ ನಡೆದ ಬಳಿಕ ಈತ ತಮಿಳುನಾಡು ಅಥವಾ ಕೆರಳ ರಾಜ್ಯಕ್ಕೆ ಹೋಗಿರಬಹುದು ಎನ್ನುವ ಶಂಕೆಯನ್ನೂ ಮಾಡಲಾಗಿದ್ದು, ಈ ರಾಜ್ಯಗಳಲ್ಲೂ ಕೂಡ ಎನ್‌ಐಎ ಕಾರ್ಯಾಚರಣೆಗೆ ಇಳಿದಿದೆ. ಪ್ರಕರಣದಲ್ಲಿ ಈವರೆಗೂ ಯಾರನ್ನೂ ವಶಕ್ಕೆ ಪಡೆದಿಲ್ಲ ಎನ್ನುವ ಮಾಹಿತಿಯನ್ನೂ ಅಧಿಕಾರಿಗಳು ತಿಳಿಸಿದ್ದಾರೆ.

Shwetha M