ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಕೇಸ್‌ – ಹೋಟೆಲ್​​ಗಳಲ್ಲಿ ಜಾರಿಯಾಗಲಿವೆ ಕಠಿಣ ಭದ್ರತಾ ನಿಯಮಗಳು

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಕೇಸ್‌ – ಹೋಟೆಲ್​​ಗಳಲ್ಲಿ ಜಾರಿಯಾಗಲಿವೆ ಕಠಿಣ ಭದ್ರತಾ ನಿಯಮಗಳು

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಟೋಟಗೊಂಡಿತ್ತು. ಇದೀಗ ಈ ಪ್ರಕರಣದ ತನಿಖೆ ಚುರುಕುಗೊಂಡಿದೆ.  ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದೀಗ ಈ ಪ್ರಕರಣದ ಬೆನ್ನಲ್ಲೇ ಹೋಟೆಲ್‌ ಅಸೋಸಿಯೇಷನ್‌ ಹೈ ಅಲರ್ಟ್‌ ಆಗಿದೆ. ಇದೇ ಮೊದಲ ಬಾರಿಗೆ ಹೋಟೆಲ್​ಗಳಲ್ಲಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಇದನ್ನೂ ಓದಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಡೆವೊನ್ ಕಾನ್ವೆ ಇಂಜುರಿ – ಕಾನ್ವೆ ಜಾಗದಲ್ಲಿ ರಚಿನ್ ರವೀಂದ್ರ ಕಣಕ್ಕೆ

ಹೌದು, ರಾಮೇಶ್ವರಂ ಕೆಫೆ ಸ್ಫೋಟದ ಬೆನ್ನಲೇ ನಗರದ ಹೋಟೆಲ್​​ಗಳಲ್ಲಿ ಭದ್ರತೆ ವಿಚಾರವಾಗಿ ಕಟ್ಟೆಚ್ಚರ ವಹಿಸಲು ಹೋಟೆಲ್ ಮಾಲೀಕರು ಮುಂದಾಗಿದ್ದಾರೆ. ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ನೇತೃತ್ವದಲ್ಲಿ ಅಸೋಸಿಯೇಷನ್ ಸಭೆ ಸೇರಿದ್ದು, ಇದೇ ಮೊದಲ ಬಾರಿಗೆ ಹೋಟೆಲ್​ಗಳಲ್ಲಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಜಾರಿಗೊಳಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಹೋಟೆಲ್ ತಜ್ಞರು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಜಾರಿಗೊಳಿಸುವ ಸಂಬಂಧ ಹೋಟೆಲ್ ಗಳಿಂದ ಮಾಹಿತಿ ಸಂಗ್ರಹ ಮಾಡಿದ್ದಾರೆ. ಒಂದು ವೇಳೆ ಇದು ಜಾರಿಯಾಗಿದ್ದೇ ಆದರೆ ಇನ್ಮುಂದೆ ಹೋಟೆಲ್​​ಗಳಲ್ಲಿಯೂ ಕಠಿಣ ಭದ್ರತಾ ನಿಯಮಗಳು ಅನ್ವಯವಾಗಲಿವೆ. ಬೇರೆ ರಾಜ್ಯಗಳಲ್ಲಿರುವ ಭದ್ರತಾ ಕ್ರಮಗಳನ್ನು ಅನುಸರಿಸಲು ಕೂಡ ಚಿಂತನೆ ಮಾಡಲಾಗಿದೆ.

ಹೋಟೆಲ್​​ಗಳಲ್ಲಿ ಯಾವೆಲ್ಲ ನಿಮಯ ಜಾರಿಗೆ ಬರಲಿದೆ?

  • ಹೋಟೆಲ್​​ಗಳಲ್ಲಿ ಸೈರನ್ ಅಳವಡಿಸುವುದು.
  • ಮೈಕ್ ವಾಕ್ ಟಾಕಿ ಅಳವಡಿಸುವುದು.
  • ಪೈರಿಸ್ಟಿಂಗ್ ಮಿಷನ್ ಅಳವಡಿಸಿಸುವುದು.
  • ಪೋಲಿಸ್ ನಂಬರ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿಯ ನಂಬರ್ ನೋಟಿಸ್ ಬೋರ್ಡ್​ಮೇಲೆ ಹಾಕುವುದು.
  • ಮೆಟಲ್ ಸ್ಕ್ರೀನಿಂಗ್ ಅಳವಡಿಸುವುದು.
  • ಅನುಮಾನ್ಪದ ಗ್ರಾಹಕರನ್ನು ವಾಚಿಂಗ್ ಮಾಡಲು ಸ್ಪೇಷಲ್ ಸಿಬ್ಬಂದಿಗಳನ್ನ ನೇಮಿಸುವುದು.
  • ಹೈ ಟೆಕ್ನಿಕ್ ಸಿಸಿಟಿವಿ ಕ್ಯಾಮರಗಳ ಅಳವಡಿಕೆ ಹೆಚ್ಚಿಸುವುದು.
  • ಹೋಟೆಲ್​ಗಳಲ್ಲಿಯೂ ಪೊಲೀಸ್ ಮಾರ್ಗಸೂಚಿ ಅನುಸರಿಸುವುದು.
  • ಬ್ಯಾಗ್​​ಗಳನ್ನ ಹೊರಗಿಟ್ಟು ಗ್ರಾಹಕರು ಒಳಗೆ ಬರುವಂತೆ ನಿಯಮ ರೂಪಿಸಿವುದು.

ಇಷ್ಟೇ ಅಲ್ಲದೆ, ಭದ್ರತೆ ಹಾಗೂ ಗ್ರಾಹಕರ ಸುರಕ್ಷತಾ ದೃಷ್ಟಿಯಿಂದ ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳಲು ಹೋಟೆಲ್ ಅಸೋಸಿಯೇಷನ್ ಮುಂದಾಗಿದೆ. ಸಣ್ಣಪುಟ್ಟ ಹೋಟೆಲ್​​ಗಳಿಗೆ ಹೊರೆಯಾಗದಂತೆ ನಿಯಮವಳಿಗಳನ್ನು ಜಾರಿಗೊಳಿಸಲಾಗುವುದು. ಆದರೆ, ಕಡ್ಡಾಯವಾಗಿ ಪ್ರತಿಯೊಂದು ಹೋಟೆಲ್‌ಗಳು ಸಿಸಿಟಿವಿ ಕ್ಯಾಮರಾ ಅಳವಡಿಕೆ‌ ಮಾಡಲೇಬೇಕು ಎಂದು ಅಸೋಸಿಯೇಷನ್ ಹೇಳಿದೆ.

Shwetha M