ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಕೇಸ್ – ಪ್ರಕರಣ ಬೇಧಿಸಲು ಎನ್ಐಎ ಎಂಟ್ರಿ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿ ನಾಲ್ಕು ದಿನಗಳಳಾಗುತ್ತಾ ಬಂದಿದೆ. ಈ ಪ್ರಕರಣವನ್ನು ಭೇದಿಸಲು ಈಗಾಗಲೇ 8 ತಂಡಗಳನ್ನು ರಚಿಸಲಾಗಿದೆ. ಆದರೂ ಕೂಡ ಯಾವುದೇ ಪ್ರಗತಿ ಕಂಡು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆ ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾಯಿಸಲಾಗಿದೆ.
ಇದನ್ನೂ ಓದಿ: ಈ ವರ್ಷ ಬೇಸಿಗೆ ಬಿಸಿಲಿನ ಝಳ ಹೆಚ್ಚಾಗುವ ಸಾಧ್ಯತೆ – ಭಾರತೀಯ ಹವಾಮಾನ ಇಲಾಖೆ
ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಶಂಕಿತ ವ್ಯಕ್ತಿಯನ್ನು ಪತ್ತೆ ಹಚ್ಚುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜೊತೆಗೆ ಆತ ಸ್ಫೋಟಕ್ಕಾಗಿ ಮಾಡಿದ್ದ ಪ್ಲಾನ್ ಪೊಲೀಸರಿಗೆ ನಿಜಕ್ಕೂ ಚಾಲೆಂಜಿಂಗ್ ಆಗಿದೆ. ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ. ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಿ ಎಫ್ಐಆರ್ ದಾಖಲಿಸಿದ ಎನ್ಐಎ ಸೋಮವಾರದಿಂದ ಸ್ಫೋಟದ ಸಂಪೂರ್ಣ ತನಿಖೆ ಆರಂಭಿಸಲಿದೆ.
ದೇಶದ ಒಳಗಡೆ ಯಾವುದೇ ಉಗ್ರ ಚಟುವಟಿಕೆ, ಬಾಂಬ್ ಸ್ಫೋಟದ ತನಿಖೆಯನ್ನು ಎನ್ಐಎ ವಹಿಸಿಕೊಳ್ಳುತ್ತದೆ. ಈ ಹಿಂದೆ ಬೇರೆ ರಾಜ್ಯದಲ್ಲಿ ಹಲವು ಪ್ರಕರಣಗಳಿಗೆ ಹೊಸ ಪ್ರಕರಣಗಳು ಸಾಮ್ಯತೆ ಮತ್ತು ಆರೋಪಿಗಳು ಭಾಗಿಯಾಗಿರುವುದರಿಂದ ಎನ್ಐಎ ಈ ಪ್ರಕರಣಗಳನ್ನು ಬೇಧಿಸುತ್ತದೆ. ಈ ಕಾರಣಕ್ಕೆ ರಾಜ್ಯಗಳು ಉಗ್ರ ಕೃತ್ಯದಂತಹ ಪ್ರಕರಣಗಳು ದಾಖಲಾದಾಗ ಅದನ್ನು ಕೇಂದ್ರ ಸರ್ಕಾರದ ಅಡಿಯಲ್ಲಿರುವ ಎನ್ಐಎಗೆ ವರ್ಗಾಯಿಸುತ್ತದೆ. ಎಲ್ಲಾ ರಾಜ್ಯಗಳ ಗೃಹ ಇಲಾಖೆ ಎನ್ಐಎ ತನಿಖೆಗೆ ಸಹಕಾರ ನೀಡುತ್ತದೆ.