ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಉಗ್ರರು ಮಾಡಿದ ಖರ್ಚು ಮಾಡಿದ್ದೆಷ್ಟು ಗೊತ್ತಾ?
ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಈಗಾಗಲೇ ಎನ್ಐಎ ಅಧಿಕಾರಿಗಳು ಶಂಕಿತರನ್ನು ವಶಕ್ಕೆ ಪಡೆದು ವಿವಾರಣೆ ನಡೆಸುತ್ತಿದ್ದಾರೆ. ಇದೀಗ ಶಾಕಿಂಗ್ ವಿಚಾರವೊಂದು ಬಯಲಾಗಿದೆ. ಕೆಫೆಯಲ್ಲಿ ಸ್ಫೋಟಿಸಲು ಬಳಸಲಾದ ಬಾಂಬ್ ಅನ್ನು ತಯಾರಿಸಲು ಶಂಕಿತ ಉಗ್ರರು 4500 ರಿಂದ 5 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಪೋಲಿಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಹೃದಯಾಘಾತದಿಂದ ಕನ್ನಡ, ತಮಿಳು ನಟ ಡ್ಯಾನಿಯಲ್ ಬಾಲಾಜಿ ನಿಧನ
ಹೌದು, ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ವಿಚಾರಗಳು ಬಯಲಾಗುತ್ತಿದೆ. ಬಾಂಬ್ ತಯಾರಿಸಲು ಶಂಕಿತ ಉಗ್ರರು ಸುಮಾರು ಎರಡು ತಿಂಗಳು ಸಮಯ ತೆಗೆದುಕೊಂಡಿದ್ದರು. ಬಾಂಬ್ ತಯಾರಿಸಲು ಬೇಕಾದ ಕಚ್ಚಾವಸ್ತುಗಳನ್ನು ಕೆಲವನ್ನು ಆನ್ ಲೈನ್ ಮೂಲಕ ಮತ್ತು ಇನ್ನು ಕೆಲವುಗಳನ್ನು ಅಂಗಡಿಯಲ್ಲಿ ಖರೀದಿಸಿದ್ದರು ಎಂದು ಹೇಳಲಾಗುತ್ತಿದೆ.
ಡೆಟೋನೇಟರ್, ಟೈಮರ್, ಬ್ಯಾಟರಿ ಹಾಗೂ ರಂಜಕವನ್ನು ಆನ್ ಲೈನ್ ಮೂಲಕ ಖರೀದಿ ಮಾಡಿದ್ದಾರೆ. ಉಳಿದಂತೆ ನಟ್, ಬೋಲ್ಟ್, ಕೆಲ ವೈಯರ್ಗಳನ್ನು ಅಂಗಡಿಯಲ್ಲಿ ಖರೀದಿ ಮಾಡಿದ್ದಾರೆ. ಈ ಸಾಮಾಗ್ರಿಗಳನ್ನು ಬಂಧಿತ ಆರೋಪಿ ಮುಜಾಮಿಲ್ ಶರೀಫ್ ಖರೀದಿಸಿ, ಬಾಂಬ್ ತಯಾರಿಸುತ್ತಿದ್ದ ಶಂಕಿತ ಅಬ್ದುಲ್ ಮತೀನ್ ತಾಹ ಮತ್ತು ಮುಸಾವೀರ್ ನೀಡುತ್ತಿದ್ದನು ಎಂಬ ಶಂಕೆ ವ್ಯಕ್ತವಾಗಿದೆ.
ಇನ್ನು ಬಾಂಬರ್ ಬಾಂಬ್ ತಯಾರಿಸಲು ಡೆಟೊರೇನಟರ್ ಗೆ 1300 ರಿಂದ 1500 ರೂಪಾಯಿ, ಬ್ಯಾಟರಿಗೆ 400 ರಿಂದ 500 ರೂಪಾಯಿ, ಟೈಮರ್ ಗೆ 500 ರಿಂದ 700 ರೂಪಾಯಿ, ರಂಜಕಕ್ಕೆ 200 ರಿಂದ 300, ನಟ್, ಬೋಲ್ಟ್ ಗೆ 300 ರಿಂದ 500 ರೂಪಾಯಿ, ವೈಯರ್ಗಳಿಗೆ 200 ರಿಂದ 300 ರೂಪಾಯಿ ಹಾಗೂ ಸ್ಪೋಟಕ್ಕೆ ಬಳಸಿದ್ದ ಬ್ಯಾಗ್ ಗೆ 400 ರಿಂದ 500 ರೂಪಾಯಿಯನ್ನು ಶಂಕಿತ ಉಗ್ರ ಖರ್ಚು ಮಾಡಿದ್ದಾನೆ ಎಂದು ತಿಳಿದುಬಂದಿದೆ.
ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಬೆಂಗಳೂರು ಹೊರವಲಯದಲ್ಲಿ ಶಂಕಿತ ಉಗ್ರರು ಐಇಡಿಯನ್ನು ಸಿದ್ಧಪಡಿಸಿರುವ ಶಂಕೆ ವ್ಯಕ್ತವಾಗಿದೆ. ಮತೀನ್ ಹಾಗೂ ಮುಸಾವೀರ್ ಜೊತೆ ಮುಜಾಮಿಲ್ ಶರೀಫ್ ನಿರಂತರ ಸಂಪರ್ಕದಲ್ಲಿದ್ದನು. ಈತನ ಮೂಲಕವೇ ಅಗತ್ಯ ವಸ್ತುಗಳನ್ನು ತರಿಸಿಕೊಂಡಿದ್ದರು. ಸ್ಫೋಟದ ಸಂಚಿನ ಟಾರ್ಗೆಟ್ ಬಳಿಕ ಬೆಂಗಳೂರು ಸಮೀಪವೇ ಐಇಡಿ ಬಾಂಬ್ ತಯಾರಿ ಮಾಡಲಾಗಿದೆ ಎನ್ನುವ ವಿಚಾರ ಎನ್ಐಎಗೆ ಮಾಹಿತಿ ತಿಳಿದುಬಂದಿದೆ.