1 ಇಡ್ಲಿಗೆ 200 ರೂ. ವಡಾ ಸಾಂಬರ್​ಗೆ 240 ರೂ! – ರಾಮೇಶ್ವರಂ ಕೆಫೆಯ ಈ ಬಿಲ್​ ನೋಡಿದ್ರೆ ತಲೆ ತಿರುಗುವುದು ಗ್ಯಾರೆಂಟಿ!

1 ಇಡ್ಲಿಗೆ 200 ರೂ. ವಡಾ ಸಾಂಬರ್​ಗೆ 240 ರೂ! – ರಾಮೇಶ್ವರಂ ಕೆಫೆಯ ಈ ಬಿಲ್​ ನೋಡಿದ್ರೆ ತಲೆ ತಿರುಗುವುದು ಗ್ಯಾರೆಂಟಿ!

ಬೆಂಗಳೂರಿನ ಖ್ಯಾತ ರಾಮೇಶ್ವರಂ ಕೆಫೆ ಈಗ ಕೇವಲ ರುಚಿಕರ ಅಡುಗೆಗಳಿಂದ ಮಾತ್ರವಲ್ಲದೆ, ತನ್ನ ಬೃಹತ್ ವಿಸ್ತೀರ್ಣದ ಮೂಲಕ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ನಗರದ ಬೊಮ್ಮಸಂದ್ರದಲ್ಲಿ ಆರಂಭವಾಗಿರುವ ಇದರ ಹೊಸ ಶಾಖೆಯು ಕೇವಲ ಒಂದು ಹೋಟೆಲ್‌ವಾಗಿ ಉಳಿಯದೆ, ಒಂದು ಪ್ರೇಕ್ಷಣೀಯ ಸ್ಥಳದಂತೆ ವಿನ್ಯಾಸಗೊಂಡಿದೆ. ಇದೀಗ ರಾಮೇಶ್ವರಂ ಕೆಫೆ ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಲ್ಲಿದೆ. ಅಂದಹಾಗೆ ರಾಮೇಶ್ವರಂ ಕೆಫೆ ಭಾರತದ ವಿವಿಧ ಭಾಗಗಳಲ್ಲಿ ರೆಸ್ಟೋರೆಂಟ್​ ಹೋಗಿದ್ದು, ಇದೀಗ  ಮುಂಬೈನ ಕೆಫೆಯ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ಇಂದು ಡಾ.ರಾಜ್ 97ನೇ ಜನ್ಮದಿನ – ಕಂಠೀರವ ಸ್ಟುಡಿಯೋದಲ್ಲಿ ಅಣ್ಣಾವ್ರ ಸಮಾಧಿಗೆ ರಾಘಣ್ಣ ಕುಟುಂಬ ಪೂಜೆ

ಹೌದು ಮುಂಬೈನ ರಾಮೇಶ್ವರಂ ಕೆಫೆ ಸಾಮಾನ್ಯ ಜನರು ಹೋದರೆ ಮಾತ್ರ ಇದ್ದ ಹಣವೆಲ್ಲಾ ಖಾಲಿಯಾಗೋದು ಗ್ಯಾರೆಂಟಿ ಎಂದು ಇದಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಮಂದಿ ಬರೆದಿದ್ದಾರೆ. ಸಿಕ್ಕಾಪಟ್ಟೆ ದುಬಾರಿ, ಇಲ್ಲಿ ಮಧ್ಯಮ ವರ್ಗದವರು ಹೋದರೆ ಅಷ್ಟೇ ಕಥೆ ಎಂದು ಹೇಳಲಾಗುತ್ತಿದೆ. ವಿವಿಧ ಖಾದ್ಯಗಳಿಗೆ ಮನಬಂದಂತೆ ದರ ವಿಧಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.  ಇದೀಗ ಸತೀಶ್​ ಎನ್​.ರೆಡ್ಡಿ ಎನ್ನುವವರು, ಮುಂಬೈನ ರಾಮೇಶ್ವರಂ ಕೆಫೆಯ ಬಗ್ಗೆ, ಅಲ್ಲಿಯ ರೇಟ್​ ಬಗ್ಗೆ ಒಂದು ಕವನವನ್ನೇ ಬರೆದಿದ್ದು, ಅದರ ಜೊತೆ ಬಿಲ್​ ಕೂಡ ಅಟ್ಯಾಚ್​ ಮಾಡಿದ್ದಾರೆ.

ಭಾರೀ ಧನಕನಕವ ಉಳ್ಳವರು ದಿ ರಾಮೇಶ್ವರಂ ಕೆಫೆಗೆ ಹೋಗುವರಯ್ಯಾ; ಭಾರೀ ಧನಕನಕವ ಉಳ್ಳವರಲ್ಲದಿರಲ್ಗೆ ಅಗ್ಗದ ಬೆಲೆಯ ಹೋಟೆಲಷ್ಟೇ ಸಾಕಯ್ಯ; ಭಾರೀ ಬೆಲೆಯ ತೆರುವಷ್ಟು ಉಳ್ಳವರು ದಿ ರಾಮೇಶ್ವರಂ ಕೆಫೆಗೆ ಹೋಗಿ ಬಂದು ರಶೀದಿಯ ನೋಡಿದೋಡೆ ಗೋಳಾಡುವವರನ್ನೆಂದು ಅಗ್ಗದ ಬೆಲೆಯ ಹೋಟೆಲ್​ನಲ್ಲಿ ಉಣ್ಣುವವರೆದುರು ತುಲನೆ ಮಾಡಿದೊಡೆ ಮೆಚ್ಚನಾ ರಾಮೇಶ್ವರಂನ ರಾಮನಾಥನು ಪೇಳಾ ದಿ ರಾಮೇಶ್ವರಂ ಕೆಫೆಯ ಮಾಲೀಕ ರಾಘವೇಂದ್ರನೇ? ಎಂದು ಬರೆದಿದ್ದಾರೆ. ಅವರು ಅಟ್ಯಾಚ್​ ಮಾಡಿರುವ ಬಿಲ್ ನೋಡಿದರೆ, ಒಂದು ಇಡ್ಲಿಗೆ 200 ರೂ. ವಡಾ ಸಾಂಬರ್​ಗೆ 240 ರೂ. ಬೆಳ್ಳುಳ್ಳಿ ದೋಸೆಗೆ 250 ರೂ. ಘೀಪುಡಿ ಮಸಾಲಾ ದೋಸೆಗೆ 295, ಫಿಲ್ಟರ್​ ಕಾಫಿ ಶೇಕ್​ಗೆ 300 ರೂ. ಓನಿಯನ್ ಉತ್ತಪ್ಪಮ್​ 295, ಫಿಲ್ಟರ್​ ಕಾಫಿಗೆ 120, ಫಿಲ್ಟರ್​ ಕಾಫಿ ಸಾಫ್ಟಿಗೆ 220 ರೂಪಾಯಿ ಬಿಲ್ + ಜಿಎಸ್​ಟಿ 128 ರೂ. ಹಾಕಲಾಗಿದೆ!

Shwetha M