ಲಕ್ಷ್ಮೀ ಹೆಬ್ಬಾಳ್ಕರ್ ಗಿಂತ ನಾನೇ ಹೆಚ್ಚು ಹಣ ಕೊಡ್ತೇನೆ – ರಮೇಶ್ ಜಾರಕಿಹೊಳಿ ಬಹಿರಂಗ ಆಮಿಷ..!

ಲಕ್ಷ್ಮೀ ಹೆಬ್ಬಾಳ್ಕರ್ ಗಿಂತ ನಾನೇ ಹೆಚ್ಚು ಹಣ ಕೊಡ್ತೇನೆ – ರಮೇಶ್ ಜಾರಕಿಹೊಳಿ ಬಹಿರಂಗ ಆಮಿಷ..!
ಲಕ್ಷ್ಮೀ ಹೆಬ್ಬಾಳ್ಕರ್ಗಿಂತ ನಾನೇ ಹೆಚ್ಚು ಹಣ ಕೊಡ್ತೇನೆ – ರಮೇಶ್ ಜಾರಕಿಹೊಳಿ ಬಹಿರಂಗ ಆಮಿಷ..!

ಬೆಳಗಾವಿ : ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಸಮರ ಮತ್ತೊಂದು ಹಂತ ತಲುಪಿದೆ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಲ್ಲೇ ಮತದಾರರ ಮನಗೆಲ್ಲಲು ಅಡ್ಡಮಾರ್ಗ ಹಿಡಿದಿದ್ದಾರೆ. ಆಮಿಷಗಳನ್ನ ಒಡ್ಡುತ್ತಾ ಈಗಿನಿಂದಲೇ ರಣತಂತ್ರ ಹೆಣೆಯುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಜಕೀಯ ಬೆಳವಣಿಗೆಗಳು ಕುತೂಹಲ ಮೂಡಿಸುತ್ತಿವೆ. ಅದ್ರಲ್ಲೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಕಾದಾಟ ಎಲ್ಲರಿಗೂ ಗೊತ್ತೇ ಇದೆ. ಆದ್ರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶತಾಯ ಗತಾಯ ಲಕ್ಷ್ಮೀ ಹೆಬ್ಬಾಳ್ಕರ್​ರನ್ನ ಸೋಲಿಸಲೇಬೇಕು ಅಂತಾ ರಮೇಶ್ ಜಾರಕಿಹೊಳಿ ಪಣ ತೊಟ್ಟಿದ್ದಾರೆ. ಅದಕ್ಕಾಗಿ ಕೋಟಿ ಕೋಟಿ ಖರ್ಚು ಮಾಡಲು ಸಿದ್ಧವಾಗಿರೋದಾಗಿ ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ : ಸಿದ್ಧಗಂಗಾ ಶ್ರೀಗಳ ನಾಲ್ಕನೇ ವರ್ಷದ ಪುಣ್ಯಸ್ಮರಣೆ – ಲಕ್ಷಾಂತರ ಭಕ್ತರಿಗೆ ಭರ್ಜರಿ ಭೋಜನ!

ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಮನೆಗೆ ಹೋಗುತ್ತಾರೆ ಅಂತಾ ಎಲ್ರೂ ಅಂದುಕೊಂಡಿದ್ದಾರೆ. ಆದ್ರೆ ಮನೆಗೆ ಹೋಗುವ ಮಗ ನಾನಲ್ಲ. ಜನ ಮತ್ತು ದೇವರ ಆಶೀರ್ವಾದ ನಮ್ಮ ಮೇಲೆ ಇದೆ. ಯಾರಿಂದ ಏನೂ ಮಾಡೋಕೆ ಸಾಧ್ಯ ಇಲ್ಲ ಅಂತಾ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗುಡುಗಿದ್ದಾರೆ. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸುಳೇಭಾವಿ ಗ್ರಾಮದಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರು ಆಯೋಜಿಸಿದ್ದ ಸಮಾವೇಶದಲ್ಲಿ ರಮೇಶ್ ಜಾರಕಿಹೊಳಿ ಭಾಗಿಯಾಗಿದ್ದಾಗ ವಾಗ್ದಾಳಿ ನಡೆಸಿದ್ದಾರೆ. ಮೊನ್ನೆ ಕೊಟ್ಟ ಡಬ್ಬಿಗೆ ಮಾರ್ಕೆಟ್‌ನಲ್ಲಿ 70 ರಿಂದ 80 ರೂಪಾಯಿ ಇದೆ. ಇವತ್ತು ಕೊಡುತ್ತಿರುವ ಮಿಕ್ಸಿ ಬೆಲೆ 600 ರಿಂದ 800 ರೂಪಾಯಿ ಇದೆ. ಎಲ್ಲಾ ಸೇರಿದ್ರೂ ಸಾವಿರ ರೂಪಾಯಿ ಆಗುತ್ತೆ. ಬಹುಶಃ ಇನ್ನೂ ಒಂದು ರೌಂಡ್ ಕೊಟ್ಟರೆ ಮೂರು ಸಾವಿರ ರೂಪಾಯಿ ಆಗಬಹುದು. ಆದರೆ ನಾವು ಆರು ಸಾವಿರ ಕೊಟ್ಟರೆ ನಮಗೆ ವೋಟ್ ಹಾಕಿ ಎಂದಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ನಾವೇ ಆರಿಸಿ ತಂದ ಶಾಸಕರ ದುರಾಡಳಿತದಿಂದ ನಮ್ಮ ತಲೆ ನಾವೇ ಬಡಿದುಕೊಳ್ಳುವಂತಾಗಿದೆ. ಸಮಾಜಕ್ಕೆ ಕೆಟ್ಟ ಹುಳದಂತಿರುವ ಶಾಸಕಿಯನ್ನು ಈ ಬಾರಿ ಯಾವುದೇ ಪರಿಸ್ಥಿತಿಯಲ್ಲಿ ಬದಲಾಯಿಸಬೇಕು. ಅವರು ಖರ್ಚು ಮಾಡುವುದಕ್ಕಿಂತ ನಾವು 10 ಕೋಟಿ ರೂಪಾಯಿ ಹೆಚ್ಚಿಗೆ ಖರ್ಚು ಮಾಡೋಣ. ಅಷ್ಟೂ ಮೀರಿ ಜನ ವೋಟ್ ಹಾಕಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಮಾನವೇ ಅಂತಿಮ ಎಂದಿದ್ದಾರೆ.

ಇದೇ ವೇಳೆ ಮಂತ್ರಿ ಸ್ಥಾನದ ಬಗ್ಗೆಯೂ ಮಾತನಾಡಿದ ರಮೇಶ್ ಜಾರಕಿಹೊಳಿ ಮಂತ್ರಿ ಸ್ಥಾನ ಕೊಡುತ್ತಾರೋ, ಬಿಡುತ್ತಾರೋ ಅದು ವರಿಷ್ಠರಿಗೆ ಬಿಟ್ಟ ವಿಚಾರ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ 18 ಕ್ಷೇತ್ರಗಳಲ್ಲಿ ತಿರುಗಾಡಿ 14 ಕ್ಷೇತ್ರಗಳನ್ನು ಗೆಲ್ಲಿಸಲು ಶ್ರಮಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

suddiyaana