‘ಸಿಡಿ ಸೂತ್ರದಾರನೇ ಡಿಕೆಶಿ.. ಲಕ್ಷ್ಮೀ ಹೆಬ್ಬಾಳ್ಕರ್ ವಿಷಕನ್ಯೆ’ – ರಮೇಶ್ ಜಾರಕಿಹೊಳಿ ನೇರಾನೇರ ಬಾಂಬ್..!

‘ಸಿಡಿ ಸೂತ್ರದಾರನೇ ಡಿಕೆಶಿ.. ಲಕ್ಷ್ಮೀ ಹೆಬ್ಬಾಳ್ಕರ್ ವಿಷಕನ್ಯೆ’ – ರಮೇಶ್ ಜಾರಕಿಹೊಳಿ ನೇರಾನೇರ ಬಾಂಬ್..!

ರಾಜ್ಯ ರಾಜಕೀಯದಲ್ಲಿ ಇವತ್ತು ಸ್ಫೋಟಕ ಬೆಳವಣಿಗೆಯಾಗಿದೆ. ದೇಶಾದ್ಯಂತ ಸಂಚಲನ ಮೂಡಿಸಿದ್ದ ಸಿಡಿ ಕೇಸ್​ಗೆ ಟ್ವಿಸ್ಟ್ ಸಿಕ್ಕಿದ್ದು ರಾಜಕೀಯ ಜಿದ್ದಾಜಿದ್ದಿಗೆ ಮುನ್ನುಡಿ ಬರೆದಿದೆ. ಮಾಧ್ಯಮಗಳ ಮುಂದೆ ಬಂದ ಗೋಕಾಕ್ ಶಾಸಕ ಸಿಡಿ ಹಿಂದಿನ ‘ರಾಜಕೀಯ’ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ : ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆ ಸಮಾರೋಪ – ರಾಹುಲ್ ಪಾದಯಾತ್ರೆಗೆ ಸಿಕ್ಕಿತಾ ಸಕ್ಸಸ್!?

ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇವತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಸ್ಫೋಟಕ ಆರೋಪ ಮಾಡಿದ್ದಾರೆ. ಇದು ಡಿ.ಕೆ ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಡುವಿನ ಯುದ್ಧ. ಕಳೆದ ಒಂದೂವರೆ ವರ್ಷದಿಂದ ನಾನು ಸಮಾಧಾನದಿಂದ ಕುಳಿತಿದ್ದೆ. ಆದ್ರೆ ನನ್ನ ವಿರೋಧ ಮಾಡೋರು ರಮೇಶ್ ಜಾರಕಿಹೊಳಿ ಸುಮ್ಮನೆ ಕೂತಿದ್ದಾರೆ. ಹೆದರಿಕೊಂಡು ಮನೆಯಲ್ಲಿ ಸೇರಿಕೊಂಡಿದ್ದಾರೆ ಅಂತಾ ತಿಳಿದುಕೊಂಡಿದ್ರು. ನಾನು ಸಮಯಕ್ಕಾಗಿ ಕಾಯ್ತಿದ್ದೆ. ನನ್ನ ಹೇಗೆ ಷಡ್ಯಂತ್ರ ಮಾಡಿ ಹೊಡೆದ್ರಲ್ಲ ಹಂಗೆ ನಾನು ಚುನಾವಣೆ ಟೈಂ ನೋಡಿ ಹೊಡೀಬೇಕು ಅಂತಾ ಕಾಯ್ತಿದ್ದೆ. ಮಿಸ್ಟರ್ ಡಿ.ಕೆ ಶಿವಕುಮಾರ್ ರಾಜಕೀಯ ಮಾಡಲು ನಾಲಾಯಕ್. ಅವನನ್ನ ರಾಜಕಾರಣಿ ಅನ್ನೋಕೆ ಯೋಗ್ಯತೆ ಇಲ್ಲ. ಎಷ್ಟೇ ದ್ವೇಷ ಇದ್ರೂ ವೈಯಕ್ತಿಕ ದ್ವೇಷ ಮಾಡಬಾರದು. ರಾಜಕೀಯದಲ್ಲಿ ಷಡ್ಯಂತ್ರ ಮಾಡಿ, ವೈಯಕ್ತಿಕ ಜೀವನ ಹಾಳು ಮಾಡುವ ಮನುಷ್ಯ ರಾಜಕಾರಣ ಮಾಡಲು ನಾಲಾಯಕ್ ಎಂದು ವಾಗ್ದಾಳಿ ನಡೆಸಿದ್ರು.

ಡಿ.ಕೆ ಶಿವಕುಮಾರ್​ ಮಹಿಳೆಯ ಮುಖಾಂತರ ನನ್ನ ತೇಜೋವಧೆ ಮಾಡಿದ್ದಾರೆ. ಸಿಡಿ ರಿಲೀಸ್ ಆದ ದಿನವೇ ನಾನು ಹೇಳಿದ್ದೆ ತಪ್ಪು ಮಾಡಿದ್ರೂ ಕೂಡ ಕೆಲವೊಂದನ್ನ ನಾವು ಒಪ್ಪಿಕೊಳ್ಳಬೇಕಾಗಿದೆ. ಯಾಕಂದ್ರೆ ಕಾನೂನಿನಡಿ ಸಿಲುಕಿಕೊಂಡಿದ್ದೆ. ಸಿಡಿ ಷಡ್ಯಂತ್ರದಲ್ಲಿ ರಾಜ್ಯದ ನೂರಾರು ನಾಯಕರು, ಅಧಿಕಾರಿಗಳು, ಬೆಂಗಳೂರು ಉನ್ನತ ಅಧಿಕಾರಿಗಳು ಸಿಲುಕಿದ್ದಾರೆ. ನನ್ನ ಬಳಿ 120 ಸಾಕ್ಷ್ಯಗಳಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಿಡಿ ತಯಾರಿಸಿ ಬ್ಯ್ಲಾಕ್ ಮೇಲ್ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ದಯವಿಟ್ಟು ಇದನ್ನು ಸಿಬಿಐ ತನಿಖೆ ಕೊಡಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಒತ್ತಾಯಿಸಿದ್ದಾರೆ.  ಸಿಡಿ ಯುವತಿ, ನರೇಶ್ ಮತ್ತು ಶ್ರವಣ್​ ಸೇರಿ ಸಿಡಿ ಮಾಡಿದ್ದು, ಯುವತಿಯನ್ನ ಬಂಧಿಸಿದ್ರೆ ಎಲ್ಲಾ ವಿಚಾರ ಹೊರಗೆ ಬರುತ್ತೆ ಅಂದ್ರು.

ಇದೇ ವೇಳೆ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧವೂ ರಮೇಶ್ ಜಾರಕಿಹೊಳಿ ಹರಿಹಾಯ್ದಿದ್ದಾರೆ. 1985ರಲ್ಲಿ ನಾನು, ಡಿ.ಕೆ ಶಿವಕುಮಾರ್ ಇಬ್ಬರೂ ಒಟ್ಟಿಗೆ ಚುನಾವಣೆಗೆ ಬಂದೆವು. ನಾನು ಉದ್ಯಮ ನಡೆಸಿ ಈ ಹಂತಕ್ಕೆ ಬಂದಿದ್ದೇನೆ. ಡಿ.ಕೆ.ಶಿವಕುಮಾರ್​ ಲೂಟಿ ಮಾಡಿ ಕೋಟ್ಯಂತರ ಹಣ ಮಾಡಿದ್ದಾನೆ. ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ನಿಂದ ನನ್ನ ಡಿ.ಕೆ ಶಿವಕುಮಾರ್​ ಸಂಬಂಧ ಹಾಳಾಯ್ತು. ಲಕ್ಷ್ಮೀ ಹೆಬ್ಬಾಳ್ಕರ್ ವಿಷಕನ್ಯೆ ಇದ್ದಹಾಗೆ ಎಂದು ಕಿಡಿ ಕಾರಿದ್ದಾರೆ.

suddiyaana