ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಮ್‌ಚರಣ್‌- ಸಿಹಿಸುದ್ದಿ ಹಂಚಿಕೊಂಡ ಮೆಗಾಸ್ಟಾರ್ ಚಿರಂಜೀವಿ

ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಮ್‌ಚರಣ್‌- ಸಿಹಿಸುದ್ದಿ ಹಂಚಿಕೊಂಡ ಮೆಗಾಸ್ಟಾರ್ ಚಿರಂಜೀವಿ

ಮದುವೆಯಾಗಿ ಹತ್ತು ವರ್ಷಗಳ ನಂತರ ರಾಮ್‌ಚರಣ್  ಮತ್ತು ಉಪಾಸನಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅವರು, ಪುತ್ರ ರಾಮ್‌ಚರಣ್ ತೇಜಾ ಮತ್ತು ಅವರ ಪತ್ನಿ ಉಪಾಸನಾ ಕೊನಿಡೇಲಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಘೋಷಿಸಿದ್ದಾರೆ. ಡಿಸೆಂಬರ್ 12ರಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮೆಗಾಸ್ಟಾರ್ ಚಿರಂಜೀವಿ ಈ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.  ಈ ಬಗ್ಗೆ ಮಗಧೀರ ನಟ ರಾಮ್‌ಚರಣ್  ಕೂಡಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ :  ಸ್ವಾತಿ ಮುತ್ತಿನ ಮಳೆ ಹನಿಯೇ ಶೀರ್ಷಿಕೆ ವಿವಾದ – ರಮ್ಯ ವಿರುದ್ಧ ರಾಜೇಂದ್ರ ಸಿಂಗ್ ಬಾಬು ರಾಂಗ್

ಸೋಮವಾರ ಟ್ವಿಟರ್‌ನಲ್ಲಿ ನಟ ಚಿರಂಜೀವಿ ಅವರು,  “ಶ್ರೀ ಹನುಮಾನ್ ಜಿ ಅವರ ಆಶೀರ್ವಾದದೊಂದಿಗೆ ಉಪಾಸನಾ ಮತ್ತು ರಾಮ್ ಚರಣ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಪ್ರೀತಿ ಮತ್ತು ಕೃತಜ್ಞತೆಗಳೊಂದಿಗೆ ಸುರೇಖಾ ಮತ್ತು ಚಿರಂಜೀವಿ, ಕೊನಿಡೇಲ ಶೋಭನಾ ಮತ್ತು ಅನಿಲ್ ಕಾಮಿನೇನಿ.” ಎಂದು ಬರೆದುಕೊಂಡಿದ್ದಾರೆ.

ತಂದೆ ಚಿರಂಜೀವಿ ಅವರ ಪೋಸ್ಟ್ ಬೆನ್ನಲ್ಲೇ ಮಗ ರಾಮ್‌ಚರಣ್  ಕೂಡಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ” ನಾನು ಉಪಾಸನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ಸುರೇಖಾ ಮತ್ತು ಚಿರಂಜೀವಿ, ಕೊನಿಡೇಲ ಶೋಭನಾ ಮತ್ತು ಅನಿಲ್ ಕಾಮಿನೇನಿ ಕಡೆಯಿಂದ ಕೃತಜ್ಞತೆಗಳು” ಎಂದು ಬರೆದುಕೊಂಡಿದ್ದಾರೆ.

 

ಜೂನ್ ನಲ್ಲಿ, ರಾಮ್ ಚರಣ್ ಮತ್ತು ಉಪಾಸನಾ ಮದುವೆಯಾಗಿ 10 ವರ್ಷ ಕಳೆದಿತ್ತು. ಪದೇ ಪದೇ ದಂಪತಿಗೆ ಮಗುವಿನ ಬಗ್ಗೆ ಪ್ರಶ್ನೆ ಎದುರಾಗುತ್ತಿತ್ತು. ದಂಪತಿ ಅದೆಷ್ಟೋ ಬಾರಿ ಈ ಪ್ರಶ್ನೆಯನ್ನ ಎದುರಿಸಿದ್ದರು. ಈ ಹಿಂದೆ ರಾಮ್‌ಚರಣ್ , ನಾನು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇನೆ, ಉಪಾಸನಾ ಕೂಡಾ ಒಂದಿಷ್ಟು ಗುರಿ ಹೊಂದಿದ್ದಾಳೆ. ಸದ್ಯ ಮಗುವಿನ ಬಗ್ಗೆ ಯೋಚನೆ ಮಾಡಿಲ್ಲ ಎಂದು ಹೇಳಿದ್ದರು. ಇದೀಗ ಚಿರಂಜೀವಿ ಕುಟುಂಬ ಮಗುವಿನ ನಿರೀಕ್ಷೆಯಲ್ಲಿದ್ದು, ಸಂಭ್ರಮದಿಂದ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದೆ.

suddiyaana