ರಾಕಿಭಾಯ್ ರಾವಣಾರ್ಭಟ, ಲಂಕಾಸುರನಾಗಿ ಗೆದ್ದ ಯಶ್ – ರಾಮಾಯಣ ಕಂಪ್ಲೀಟ್ REVIEW

ರಾಮಾಯಣ ಅಂದರೆ ಕೇವಲ ಒಂದು ಕಥೆಯಲ್ಲ. ಅದು ಮನುಷ್ಯನ ಬದುಕಿಗೆ ದಾರಿದೀಪ. ನೂರು ವರ್ಷವಾಗಲಿ, ಸಾವಿರ ವರ್ಷಗಳೇ ಉರುಳಲಿ ರಾಮಾಯಣ ಮತ್ತು ಮಹಾಭಾರತದ ಕಥೆಗಳು ಎಂದಿಗೂ ಹಳೆಯದಾಗುವುದಿಲ್ಲ. ಅಂಥ ಮಹಾಕಾವ್ಯವನ್ನು ಅದ್ದೂರಿಯಾಗಿ ತೆರೆಗೆ ತಂದಿರುವ ಪ್ರಯತ್ನವೇ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಪಾರ್ಟ್ 1. ಹಾಗಾದರೆ ಎಲ್ಲರಿಗೂ ಗೊತ್ತಿರುವ ರಾಮಾಯಣ ಕಥೆಯಲ್ಲಿ ಹೊಸತೇನಿದೆ? ರಾವಣನಾಗಿ ಯಶ್ ಹೇಗೆ ಘರ್ಜಿಸಿದ್ದಾರೆ? ರಾಮನಾಗಿ ರಣ್‌ಬೀರ್ ಕಪೂರ್ ಎಷ್ಟು ಇಷ್ಟವಾಗುತ್ತಾರೆ? ಸಿನಿಮಾ ಗೆದ್ದಿದೆಯಾ? ಎಲ್ಲಿ ಎಡವಿದೆ? . ಅನ್ನೋದ್ದನ್ನ ನೋಡೋಣ.
ರಾಮಾಯಣ ಅಂದ್ರೆ ಎಲ್ಲರಿಗೂ ಗೊತ್ತಿರೇ ಕಥೆನೇ.. ಹಂಗಿದ್ರೂ ಯಾವ ಧೈರ್ಯದ ಮೇಲೆ ಸಾವಿರಾರು ಕೋಟಿ ಹಾಕಿ ಸಿನಿಮಾ ಮಾಡಿದ್ರು, ಹಾಕಿದ ದುಡ್ಡು ವಾಪಸ್ ಬರುತ್ತೆ ಕೇಳಿದ್ರೆ, ಖಂಡಿತವಾಗಿ ರಾಮಾಯಣ ಪಾರ್ಟ್ -1 ಉತ್ತರ ಕೊಡುತ್ತೆ.. ನನಗೆ ನನ್ನ ಕಣ್ಣ ಮುಂದೆಯೇ ಸಿನಿಮಾ ದೃಶ್ಯ ನಡೀತಾ ಇದೆ ಅಂತಲೇ ಅನಿಸುತಿತ್ತು.. ಅಷ್ಟು ಚೆನ್ನಾಗಿ ಸಿನಿಮಾ ಕಟ್ಟುಕೊಟ್ಟಿದ್ದಾರೆ.
ಮೊದಲಿಗೆ ಹೇಳಲೇಬೇಕಾದದ್ದು ನಮ್ಮ ಕನ್ನಡದ ಹೆಮ್ಮೆಯ ಯಶ್ ಬಗ್ಗೆ. ರಾವಣನ ಪಾತ್ರದಲ್ಲಿ ಯಶ್ ಅವರ ಎಂಟ್ರಿ, ಅವರ ಬಾಡಿ ಲ್ಯಾಂಗ್ವೇಜ್, ಆ ಗಾಂಭೀರ್ಯ, ಆ ಅಟಿಟ್ಯೂಡ್ ಎಲ್ಲವೂ ಗಮನ ಸೆಳೆಯುತ್ತವೆ. ರಾವಣನನ್ನು ಕೇವಲ ಖಳನಾಯಕನಾಗಿ ತೋರಿಸದೆ, ತನ್ನದೇ ಆದ ವ್ಯಕ್ತಿತ್ವ ತಮ್ಮ ಪಾತ್ರವಾಗಿ ಕಟ್ಟಿಕೊಡುವ ಪ್ರಯತ್ನ ಇಲ್ಲಿ ಕಾಣಿಸುತ್ತದೆ.
ಯಶ್ ತಮ್ಮ ಪಾತ್ರವನ್ನು ಅತಿಯಾಗಿ ಬಿಲ್ಡಪ್ ಕೊಟ್ಟಿದ್ದಾರೆ ಅಂತ ಸಿನಿಮಾ ನೋಡುವವರಿಗೆ ಕಥೆಯಲ್ಲಿನ ಅವರ ಪಾತ್ರದ ಮಹತ್ವ ಅರ್ಥವಾಗುತ್ತದೆ. ರಾವಣನಲ್ಲಿರುವ ಅಹಂಕಾರ, ಶಕ್ತಿ, ಸಾಮ್ರಾಜ್ಯದ ಗತ್ತು ಎಲ್ಲವನ್ನೂ ಯಶ್ ತಮ್ಮ ಅಭಿನಯದಲ್ಲಿ ತೋರಿಸಿದ್ದಾರೆ. ನಿಜ ಹೇಳಬೇಕೆಂದರೆ ರಾವಣನಾಗಿ ಯಶ್ ಪರದೆಯ ಮೇಲೆ ಕಾಣಿಸಿಕೊಳ್ಳುವ ಕ್ಷಣಗಳು ಅಭಿಮಾನಿಗಳಿಗೆ ಹಬ್ಬ.. ಯಶ್ ಒಂದೊಂದು ದೃಶ್ಯ ಕೂಡ ಪೈಸ ವಸೂಲಿ.. ರಾಮಾಯಣದಲ್ಲಿ ರಾವಣ ಕೊನೆಯಲ್ಲಿ ಬರುವುದಾದ್ರೂ, ಈ ಸಿನಿಮಾದಲ್ಲಿ ಮೊದಲೇ ಎಂಟ್ರಿನೇ ರಾವಣನದ್ದು.. ಅದು ಯಾಕೆ ಅನ್ನೋದು ನಿಮ್ಗೆ ಸಿನಿಮಾ ನೋಡಿದ್ರೆ ಗೊತ್ತಾಗುತ್ತೆ..
ಇನ್ನು ರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್ ಬಹಳ ಸಹಜವಾಗಿ ಕಾಣುತ್ತಾರೆ. ಅವರ ಮುಖದಲ್ಲಿನ ಶಾಂತತೆ, ಮಾತಿನಲ್ಲಿನ ಗಾಂಭೀರ್ಯ ಮತ್ತು ಪಾತ್ರಕ್ಕೆ ಬೇಕಾದ ಭಾವನೆಗಳು ಮನಮುಟ್ಟುತ್ತವೆ. ಸೀತಾಮಾತೆಯಾಗಿ ಸಾಯಿ ಪಲ್ಲವಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಅಭಿನಯದಲ್ಲಿ ಮುಗ್ಧತೆ, ಘನತೆ ಮತ್ತು ಭಾವನಾತ್ಮಕ ಸ್ಪರ್ಶವಿದೆ. ಸಾಕಷ್ಟು ಜನ ಸೀತೆಗೆ ಸಾಯಿ ಪಲ್ಲವಿ ಹಾಕಿಕೊಂಡು ಸರಿಯಿಲ್ಲ ಅನ್ನೋ ನೆಗೆಟಿವ್ ಕಾಮೆಂಟ್ ಕೂಡ ಮಾಡಿದ್ರು, ಆದ್ರೆ ಈ ಸಿನಿಮಾ ಆ ಪಾತ್ರಕ್ಕೆ ಸಾಯಿ ಪಲ್ಲವಿ ತಮ್ಮ ಸಹಜ ಅಭಿನಯದ ಮೂಲಕ ಜೀವ ತುಂಬಿದ್ದಾರೆ..
ಲಕ್ಷ್ಮಣನಾಗಿ ರವಿ ದುಬೆ ಕೂಡ ಗಮನ ಸೆಳೆಯುತ್ತಾರೆ. ಲಕ್ಷ್ಮಣನ ಪಾತ್ರ ಕೂಡ ನಮ್ಗೆ ಸೂಪರ್ ಅನ್ಸುತ್ತೆ.. ನನ್ನ ಅನಿಸಿಕೆ ಪ್ರಕಾರ, ರವಿ ದುಬೆ ಅವರೇ ರಾಮನ ಪಾತ್ರ ಮಾಡಬಹುದಿತ್ತು ಅಂತ ಅನಿಸುತ್ತೆ. ಆ ಮಟ್ಟಿಗೆ ಅವರು ಲಕ್ಷ್ಮಣ ಪಾತ್ರದಲ್ಲಿ ಕಂಗೊಳಿಸಿದ್ದಾರೆ. ದಶರಥ, ಕೌಸಲ್ಯೆ, ಸುಮಿತ್ರೆ, ಕೈಕೇಯಿ, ಮಂಥರೆ, ಭರತ, ಶತ್ರುಘ್ನ ಸೇರಿದಂತೆ ಅಯೋಧ್ಯೆಯ ಪಾತ್ರಗಳು ಕಥೆಗೆ ಪೂರಕವಾಗಿವೆ. ಇತ್ತ ಲಂಕೆಯಲ್ಲಿ ವಿವೇಕ್ ಓಬೆರಾಯ್, ರಕುಲ್ ಪ್ರೀತ್ ಸಿಂಗ್ ಮತ್ತು ಕಾಜಲ್ ಅಗರ್ವಾಲ್ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಇದನ್ನೂ ಓದಿ: ಪತ್ರಕ್ಕಾಗಿ ರಿಸ್ಕ್ ತಗೊಂಡ್ರಾ ಸೌಂದರ್ಯ ಮತ್ತು ಧನುಷ್? – ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಗೆ!?
ಈ ಸಿನಿಮಾದ ದೊಡ್ಡ ಶಕ್ತಿ ಅದರ ದೃಶ್ಯ ವೈಭವ. ಗ್ರಾಫಿಕ್ಸ್, VFX, ಕ್ಯಾಮರಾ ವರ್ಕ್..ಎಡಿಟಿಂಗ್.. ಯುದ್ಧ ಸೀನ್‌ಗಳು, ಕಾಡಿನಲ್ಲಿ ಫೈಟಿಂಗ್ ದೃಶ್ಯ ನಮ್ಗೆ 3Dಯಲ್ಲಿ ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತೆ ಅಂತ ಹೇಳಬಹುದು.. ವಿಶೇಷವಾಗಿ ರಾಮ-ಲಕ್ಷ್ಮಣರ ವನವಾಸದ ದೃಶ್ಯಗಳು, ರಾಕ್ಷಸರೊಂದಿಗಿನ ಯುದ್ಧಗಳು.. ನಾವು ಕೊಟ್ಟಿರೋ ದುಡ್ಡು ಜಟಾಯು-ರಾವಣನ ನಡುವಿನ ಆಕಾಶಯುದ್ಧದಲ್ಲೇ ವಾಪಸ್ ಬಂದು ಬಿಡುತ್ತೆ.. ಆ ಸೀನ್ ಮಾತ್ರ ಎಷ್ಟೇ VFX ಬಳಸಿದ್ರ, ಎಲ್ಲೂ ಕೂಡ ಅದುVFX ಅಂತ ಅನಿಸುತ್ತಾ ಇರಲಿಲ್ಲ.. ಕ್ಲೈಮ್ಯಾಕ್ಸ್‌ನಲ್ಲಿ ಜಟಾಯು ಮತ್ತು ರಾವಣನ ನಡುವಿನ ಫೈಟ್ ಮಾತ್ರ ಸೂಪರ್.. 3 ಗಂಟೆ 15 ನಿಮಿಷ ನಮ್ಗೆ ಎಲ್ಲೂ ಕೂಡ ಬೋರ್ ಆಗಲ್ಲ.. ಕಥೆ ಗೊತ್ತಿದ್ದರು ಕೂಡ ಹೊಸದಾಗಿ ಏನೋನ್ನೋ ತೋರಿಸಿದ್ದಾರೆ.. ನೀವು ಎಷ್ಟೇ ರಾಮಯಣ ಕಥೆ ನೋಡಿದ್ರೂ ನೀವು ಈ ಸಿನಿಮಾವನ್ನ 3D ಗ್ಲಾಸ್ ಹಾಕೊಂಡು ನೋಡಿದ್ರೆ, ನಮ್ಮ ಅಕ್ಕಪಕ್ಕನೇ ಆಗ್ತಾ ಇದೆ ಅನಿಸುತ್ತೆ.. ಈ ಸೀನ್ ಬೇಡವಿತ್ತು.. ಇಲ್ಲಿಗೆ ಆ ಸೀನ್ ಬೇಕಿತ್ತು ಅಂತ ಅನಿಸೋದೇ ಇಲ್ಲ.. ನನ್ನ ಪ್ರಕಾರ ಕೊಟ್ಟ ದುಡ್ಡಿಗೆ ಮೋಸ ಇಲ್ಲ..
ಇಷ್ಟೆಲ್ಲಾ ಅದ್ಭುತಗಳ ನಡುವೆ ಕೆಲವು ಮೈನಸ್ ಪಾಯಿಂಟ್ಸ್ ಇದ್ದೇ ಇರುತ್ತೆ.. ವಿಶೇಷವಾಗಿ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಇನ್ನೂ ಸ್ವಲ್ಪ ಧಮ್ ಬೇಕಿತ್ತು.. ಹಾಗಂತ ಈಗ ಇರೋದು ಏನು ಕಮ್ಮಿಇಲ್ಲ.. ಬಟ್ ಕೆಲ ಸೀನ್‌ಗಳಲ್ಲಿ ಇನ್ನೂ ಚೂರ್ ಸಂಗೀತದ ಟಕ್ ಮೂಲರ ಭಾವನೆಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಅವಕಾಶವಿತ್ತು. ಕಲೆ ಕಡೆ ಸಂಭಾಷಣೆಗಳಲ್ಲೂ ಇನ್ನಷ್ಟು ಗಟ್ಟಿತನ ಇರಬೇಕಿತ್ತು ಅನ್ಸುತ್ತೆ.. ಬಟ್ 0.1 ಪರ್ಸೆಂಟ್ ಅಷ್ಟು ಮೈನಸ್ ಪಾಯಿಂಟ್ಸ್ ಕಾಣಬಹುದಿತ್ತು..ನಿರ್ದೇಶಕರು ಈ ಸಿನಿಮಾವನ್ನ ತಮ್ಮದೇ ಕಲ್ಪನೆಯಲ್ಲಿ ಅದ್ಬುತವಾಗಿ ತೋರಿಸಿದ್ದಾರೆ..

ನೋಡಿರಿ

