ರಾಮಾಯಣ ಸಿನಿಮಾ ಟಿಕೆಟ್ ಕೇವಲ 99 ರೂಪಾಯಿ – ಚಿತ್ರ ತಂಡದಿಂದಲೇ ವಿಶೇಷ ಆಫರ್

ರಾಮಾಯಣ ಸಿನಿಮಾ ನೋಡಬೇಕು ಎಂದು ಪ್ಲ್ಯಾನ್ ಮಾಡಿದ್ದೀರಾ. ಟಿಕೆಟ್ ರೇಟ್ ಸ್ವಲ್ಪ ಜಾಸ್ತಿ ಅಂತಾ ತಲೆ ಕೆಡಿಸಿಕೊಳ್ಳಬೇಡಿ. ಸಿನಿಮಾ ತಂಡ ಭರ್ಜರಿ ಆಫರ್ ಕೊಟ್ಟಿದೆ. ಮಂಗಳವಾರ ಟಿಕೆಟ್ ರೇಟ್ 99 ರೂಪಾಯಿ ಎಂದು ಘೋಷಣೆ ಮಾಡಿದೆ.
ಇದನ್ನೂ ಓದಿ:₹2000 ಕೋಟಿ ಗಡಿಯತ್ತ ರಾಮಾಯಣ – ದ. ಭಾರತದಿಂದ ಯಶ್‌ಗೆ ಲಾಟ್ರಿ
ರಾಮಾಯಣ ಚಿತ್ರ ತಂಡ ಅಭಿಮಾನಿಗಳಿಗೆ ಒಂದು ವಿಶೇಷ ಆಫರ್ ನೀಡಿದೆ. ಒಂದು ದಿನದ ಮಟ್ಟಿಗೆ ಈ ಚಿತ್ರದ ಟಿಕೆಟ್ ದರ್ 99 ರೂಪಾಯಿ ಮಾತ್ರ ಇದೆ. ಗುರು ನಾನಕ್ ಜಯಂತಿ ಹಿನ್ನೆಲೆಯಲ್ಲಿ ಈ ಆಫರ್ ಇದೆ. ಮಂಗಳವಾರ ಮಾತ್ರ ಚಿತ್ರದ ಟಿಕೆಟ್ ದರ 99 ರೂಪಾಯಿ ಇದೆ. ಈ ಆಫರ್ 24.11.2026 ರಂದು ಮಾತ್ರ ಇರುತ್ತದೆ. ಈ ವಿಚಾರವನ್ನು ಚಿತ್ರ ತಂಡ ತನ್ನ The World of Ramayana ಪೇಜ್ ಮೂಲಕವೇ ಘೋಷಣೆ ಮಾಡಿದೆ.
ರಾಮಾಯಣ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ವಿಜಯಯಾತ್ರೆ ಮುಂದುವರಿಸಿದೆ. ಬಿಡುಗಡೆಯಾದ 19ನೇ ದಿನದಂದು ದೇಶಾದ್ಯಂತ ಒಟ್ಟು 12.70 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ದೇಶಾದ್ಯಂತ ಪ್ರದರ್ಶನಗೊಂಡ ಒಟ್ಟು 15,696 ಪ್ರದರ್ಶನಗಳಲ್ಲಿ ಪ್ರತಿ ಪ್ರದರ್ಶನಕ್ಕೆ ಸರಾಸರಿ 8,091 ಗಳಿಕೆಯನ್ನು ಈ ಚಿತ್ರ ದಾಖಲಿಸಿದೆ. ಭಾಷಾವಾರು ಗಳಿಕೆಯನ್ನು ಗಮನಿಸಿದರೆ, ಹಿಂದಿ ಅವತರಣಿಕೆಯು 13,442 ಪ್ರದರ್ಶನಗಳಿಂದ 9.25 ಕೋಟಿ ರೂಪಾಯಿ ಗಳಿಸಿ ಮುಂಚೂಣಿಯಲ್ಲಿದ್ದರೆ, ಮಲಯಾಳಂ 826 ಪ್ರದರ್ಶನಗಳಿಂದ 1.50 ಕೋಟಿ ರೂಪಾಯಿ, ಕನ್ನಡ 438 ಪ್ರದರ್ಶನಗಳಿಂದ 85 ಲಕ್ಷ ರೂಪಾಯಿ, ತಮಿಳು 565 ಪ್ರದರ್ಶನಗಳಿಂದ 80 ಲಕ್ಷ ರೂಪಾಯಿ ಮತ್ತು ತೆಲುಗು 425 ಪ್ರದರ್ಶನಗಳಿಂದ 30 ಲಕ್ಷ ರೂಪಾಯಿ ನೆಟ್ ಗಳಿಕೆ ಕಂಡಿದೆ.
ವಿಶ್ವದಾದ್ಯಂತ ಈ ಚಿತ್ರ ದೊಡ್ಡಮಟ್ಟದಲ್ಲಿಯೇ ರಿಲೀಸ್ ಆಗಿತ್ತು. ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಕೂಡ ಪಡೆದುಕೊಂಡಿದೆ. ದಿನೇ ದಿನೇ ಈ ಚಿತ್ರದ ಕಲೆಕ್ಷನ್ ಕೂಡ ಹೆಚ್ಚಾಗಿದೆ. ಈ ಹಿಂದಿನ ಚಿತ್ರಗಳ ದಾಖಲೆಗಳನ್ನ ಇದು ಬ್ರೇಕ್ ಮಾಡಿದೆ. ಈ ಮೂಲಕ ಬಾಲಿವುಡ್ ಸೇರಿ ಎಲ್ಲೆಡೆ ಭಾರೀ ಸದ್ದು ಮಾಡ್ತಾನೇ ಇದೆ. ರಾಮಾಯಣ ಚಿತ್ರ ಹಿಂದಿ ಭಾಷೆಯಲ್ಲಿಯೇ ತಯಾರಾಗಿದೆ. ಆದರೆ, ಇದು ಕನ್ನಡ ಸೇರಿದಂತೆ ಇತರ ಭಾಷೆಯಲ್ಲೂ ಡಬ್ ಆಗಿದೆ. ಆಯಾ ಪ್ರೇಕ್ಷಕರಿಗೆ ಅವರವರ ಭಾಷೆಯಲ್ಲಿಯೇ ರಾಮಾಯಣದ ಕಥೆ ಹೇಳಿದೆ. ನಿತೇಶ್ ತಿವಾರಿ ಈ ಚಿತ್ರವನ್ನ ಡರೆಕ್ಷನ್ ಮಾಡಿದ್ದಾರೆ. ಎ.ಆರ್.ರೆಹಮಾನ್ ಹಾಗೂ ಹ್ಯಾನ್ಸ್ ಜಿಮ್ಮರ್ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ. ನಮಿತ್ ಮಲ್ಹೋತ್ರಾ ಹಾಗೂ ಯಶ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.

ನೋಡಿರಿ

