ರಿಲೀಸ್ಗೂ ಮೊದಲೇ ದಾಖಲೆ ಬರೆದ ರಾಮಾಯಣ – ನಿರ್ಮಾಣ ಸಂಸ್ಥೆಗೆ ಸಾವಿರ ಕೋಟಿ ಲಾಭ!

ಬಾಲಿವುಡ್ ನಿತೇಶ್ ತಿವಾರಿ ಅವರ ರಾಮಾಯಣ ಸಿನಿಮಾದ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ಇತ್ತೀಚೆಗಷ್ಟೇ ರಿಲೀಸ್ ಆದ ರಾಮಾಯಣ ಪಾರ್ಟ್ 1ರ ಮೊದಲ ಗ್ಲಿಂಪ್ಸ್ ರಿಲೀಸ್ ಆಗಿತ್ತು. ಸಾಯಿ ಪಲ್ಲವಿ, ಯಶ್ ರಣಬೀರ್ ಕಪೂರ್ ಲುಕ್ ನೋಡಿ ಸಿನಿಪ್ರಿಯರು ಥ್ರಿಲ್ ಆಗಿದ್ರು. ಇದೀಗ ಈ ಸಿನಿಮಾ ಬಿಡುಗಡೆಗೂ ಮುನ್ನವೇ 1000 ಕೋಟಿ ರೂ. ವ್ಯವಹಾರ ಮಾಡಿದೆ ಅನ್ನೋ ವಿಚಾರ ಬಹಿರಂಗವಾಗಿದೆ.
ಇದನ್ನೂ ಓದಿ: ಬ್ರೆಜಿಲ್ನಲ್ಲಿ ಪಾಕ್ ವಿರುದ್ಧ ಮೋದಿ ಗುಡುಗು – ಭಯೋತ್ಪಾದನೆ ಬಗ್ಗೆ ದ್ವಿಮುಖ ನೀತಿಗೆ ಅವಕಾಶವಿಲ್ಲವೆಂದ ಪ್ರಧಾನಿ
ಹೌದು, ಬಿಗ್ ಬಜೆಟ್ ಸಿನಿಮಾ ರಾಮಾಯಣ ದೇಶದಾದ್ಯಂತ ಭಾರಿ ಸದ್ದು ಮಾಡ್ತಿದೆ. ರಾಮಾಯಣದ ಎರಡೂ ಭಾಗಗಳ ಬಜೆಟ್ 1600 ಕೋಟಿ ರೂಪಾಯಿ ಎಂದು ಅಂದಾಜಿಸಲಾಗ್ತಿದೆ. ಮೊದಲ ಭಾಗಕ್ಕೆ 835 ಕೋಟಿ ರೂ. 2ನೇ ಭಾಗಕ್ಕೆ 700 ಕೋಟಿ ರೂಪಾಯಿ. 2026 ರ ದೀಪಾವಳಿಯಂದು ಬಿಡುಗಡೆಯಾಗುತ್ತಿರುವ ಈ ಚಿತ್ರವು ಈಗಾಗಲೇ 1000 ಕೋಟಿ ರೂ. ವ್ಯವಹಾರ ಮಾಡಿದೆ.
ರಣಬೀರ್ ಕಪೂರ್ ಅವರ ರಾಮಾಯಣ ಚಿತ್ರವನ್ನು ಪ್ರೈಮ್ ಫೋಕಸ್ ಕಂಪನಿಯ ಮೂಲಕ ನಮಿತ್ ಮಲ್ಹೋತ್ರಾ ನಿರ್ಮಿಸುತ್ತಿದ್ದಾರೆ. ಈ ಕಂಪನಿಯು 2006 ರಿಂದ ಭಾರತೀಯ ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲ್ಪಟ್ಟಿದೆ. ಈಗ, ಕೆಲವು ದಿನಗಳ ಹಿಂದೆ ರಾಮಾಯಣದ ಮೊದಲ ನೋಟ ರಿಲೀಸ್ ಆಯಿತು. ಕಂಪನಿಯ ಷೇರು ಬೆಲೆ ಶೇಕಡಾ 30ರಷ್ಟು ಹೆಚ್ಚಾಗಿದೆ. ರಾಮಾಯಣ ಚಿತ್ರಕ್ಕೆ ನೀರಿನಂತೆ ಹಣವನ್ನು ಖರ್ಚು ಮಾಡಲಾಗಿದೆ. ಈಗ ಈ ಚಿತ್ರ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವುದರಿಂದ, ಈ ಬಗ್ಗೆಯೂ ಚರ್ಚೆ ಜೋರಾಗಿದೆ. ಇತ್ತೀಚೆಗೆ ಬಾಕ್ಸ್ ಆಫೀಸ್ ವರ್ಲ್ಡ್ವೈಡ್ನಲ್ಲಿ ಒಂದು ವರದಿ ಪ್ರಕಟವಾಗಿತ್ತು. ಜೂನ್ 25 ರಿಂದ ಜುಲೈ 1 ರ ನಡುವೆ ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್’ ಚಿತ್ರದ ಪಾಲು ಶೇ. 30 ರಷ್ಟು ಏರಿಕೆಯಾಗಿದೆ. 113.47 ರೂಪಾಯಿ ಇದ್ದ ಶೇರು. 149.69 ಕ್ಕೆ ಏರಿತು.
ಜುಲೈ 3 ರಂದು ಪ್ರೈಮ್ ಫೋಕಸ್ನ ಷೇರು 176 ರೂ.ಗೆ ಏರಿತು. ಜುಲೈ 1 ರಂದು ಕಂಪನಿಯ ಬಂಡವಾಳ 4,638 ಕೋಟಿ ರೂ.ಗಳಾಗಿದ್ದರೆ, ಕೇವಲ 48 ಗಂಟೆಗಳಲ್ಲಿ 5,641 ಕೋಟಿ ರೂ.ಗಳಿಗೆ ಏರಿತು. ಅಂದರೆ ಕೇವಲ ಎರಡು ದಿನಗಳಲ್ಲಿ 1000 ಕೋಟಿ ರೂ.ಗಳಿಗಿಂತ ಹೆಚ್ಚು ಲಾಭ ಗಳಿಸಿದೆ. ಆದಾಗ್ಯೂ, ಮಾರುಕಟ್ಟೆ ಮುಗಿಯುವ ಹೊತ್ತಿಗೆ ಪ್ರೈಮ್ ಫೋಕಸ್ನ ಷೇರು ಸ್ವಲ್ಪ ಕಡಿಮೆಯಾಗಿತ್ತು.

ನೋಡಿರಿ

