ಅನ್ನ ಕೊಟ್ಟ ಕೈ ಇನ್ನಿಲ್ಲ.. – ಅಜ್ಜಿ ಮೃತದೇಹ ಹಿಡಿದು ಕಣ್ಣೀರು ಹಾಕಿದ ಕೋತಿ!

ಮನುಷ್ಯರಿಗೆ ಸಹಾಯ ಮಾಡಿದ್ರೆ ಇವತ್ತಲ್ಲ, ನಾಳೆ ಮರೆಯುತ್ತಾರೆ. ಆದ್ರೆ ಪ್ರಾಣಿಗಳು ಹಾಗಲ್ಲ.. ಒಮ್ಮೆ ಮಾಡಿದ ಸಹಾಯವನ್ನ ಕೂಡ ಜೀವನ ಪರ್ಯಂತ ನೆನಪಲ್ಲಿ ಇಟ್ಟುಕೊಳ್ಳುತ್ತವೆ. ಇದೀಗ ಇಲ್ಲೊಂದು ಕಡೆ ಕೋತಿಯೊಂದಕ್ಕೆ ಪ್ರತಿದಿನ ತಿಂಡಿ, ಹಣ್ಣುಗಳನ್ನ ನೀಡುತ್ತಿದ್ದ ವೃದ್ದೆಯೊಬ್ಬರು ಮೃತಪಟ್ಟಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕೋತಿ ಮೃತದೇಹದ ಮುಂದೆ ಮಲಗಿ ಕಣ್ಣೀರು ಹಾಕಿದೆ. ಇದ್ರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿದೆ.
ಇದನ್ನೂ ಓದಿ: ವಾಹನ ಸವಾರರಿಗೆ ಬಿಗ್ ಶಾಕ್! – ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ!
ಈ ಹೃದಯವಿದ್ರಾವಕ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ 80 ವರ್ಷದ ಪಾರ್ವತಮ್ಮ ಮೃತಪಟ್ಟವರು. ಇದೀಗ ಪಾರ್ವತಮ್ಮ ಸಾವಿಗೆ ಕಪಿರಾಯ ಕಣ್ಣೀರು ಹಾಕಿದ್ದಾನೆ.
ಏನಿದು ಘಟನೆ?
ಪಾರ್ವತಮ್ಮ ಮನೆ ಬಳಿ ಕೋತಿಯೊಂದು ಪ್ರತಿನಿತ್ಯ ಬರುತ್ತಿತ್ತು. ಈ ವೇಳೆ ಕೋತಿಗೆ ಪಾರ್ವತಮ್ಮ ತಿಂಡಿ ಕೊಟ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಕೋತಿ ಜೊತೆ ನಿತ್ಯ ಒಡನಾಟ ಹೊಂದಿದ್ದ ವೃದ್ಧೆ ನಿನ್ನೆ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ವೃದ್ಧೆ ಸಾವಿಗೆ ಕೋತಿ ಮೂಕರೋದನ ವ್ಯಕ್ತಪಡಿಸಿದೆ. ವೃದ್ಧೆಯ ಮೃತದೇಹದ ಮೇಲೆ ಮಲಗಿ ಕೋತಿ ಕಣ್ಣೀರು ಹಾಕಿದೆ. ಕೋತಿ ಹಾಗೂ ವೃದ್ಧೆಯ ಬಾಂಧವ್ಯ ನೋಡಿ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಜ್ಜಿ ಬದುಕಿದ್ದಾಗ ಕೋತಿ ಜೊತೆ ಆಟವಾಡ್ತಿರೋ ವಿಡಿಯೋ ಹಾಗೂ ಅಜ್ಜಿಯ ಶವದ ಮುಂದೆ ರೋದನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೋಡಿರಿ

