ಕೃಷ್ಣನ ವೇಷದಲ್ಲಿ ರಾಮಾಚಾರಿ.. ಕಡೆಗೂ ಸತ್ಯ ಬಾಯ್ಬಿಟ್ಟ ರುಕ್ಮಿಣಿ! – ಸೇಡಿಗಾಗಿ ರೆಬಲ್‌ ಆದ ಚಾರು ಗಂಡ

ಕೃಷ್ಣನ ವೇಷದಲ್ಲಿ ರಾಮಾಚಾರಿ.. ಕಡೆಗೂ ಸತ್ಯ ಬಾಯ್ಬಿಟ್ಟ ರುಕ್ಮಿಣಿ! – ಸೇಡಿಗಾಗಿ ರೆಬಲ್‌ ಆದ ಚಾರು ಗಂಡ

ಸತ್ತಿದ್ದು ಕೃಷ್ಣ ರಾಮಾಚಾರಿ ಅಲ್ಲ ಅನ್ನೋದು ಈಗ ಚಾರುಗೆ ಗೊತ್ತಾಗಿದೆ.. ಪ್ರೀತಿಯ ಗಂಡ ಬದುಕಿದ್ದಾನೆ ಅನ್ನೋ ಖುಷಿಯಲ್ಲಿ ಚಾರುಲತಾ ಇದ್ದಾಳೆ.. ಆದ್ರೀಗ ಕುತಂತ್ರಿಗಳಿಗೆ ಬ್ಯಾಡ್‌ ಟೈಮ್‌ ಶುರುವಾಗಿದೆ. ರಾಮಾಚಾರಿ ಈಗ ಫುಲ್‌ ರೆಬಲ್‌ ಆಗಿದ್ದಾನೆ. ತಾನು ಕೃಷ್ಣ ಅಂತಾ ಹೇಳ್ಕೊಂಡು ತಮ್ಮನನ್ನ ಸಾಯಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾನೆ. ಇದೀಗ ಮಾನ್ಯತಾ ಮನೆಗೆ ರಾಮಾಚಾರಿ ಹೋಗಿದ್ದಾನೆ.. ರಾಮಾಚಾರಿ ಸತ್ತಿದ್ದು ಒಳ್ಳೆಯದ್ದೇ ಆಯ್ತು.. ನಾನೇ ಅವನನ್ನ ಸಾಯಿಸ್ಬೇಕು ಅಂತಾ ಇದ್ದೆ ಎಂದಿದ್ದಾನೆ.

ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಕೆಎನ್ ರಾಜಣ್ಣ ರಾಜೀನಾಮೆ – ರಾಹುಲ್ ಗಾಂಧಿಯವರ ಹೋರಾಟ ವಿರೋಧಿಸಿದ್ದಕ್ಕೆ ತಲೆದಂಡ?

ರಾಮಾಚಾರಿ ಸೀರಿಯಲ್‌ ಈಗ ದಿನದಿಂದ ದಿನಕ್ಕೆ ಕುತೂಹಲ ಮೂಡಿಸಿದೆ. ರಾಮಾಚಾರಿ ಸತ್ತಿದ್ದಾನೆ ಅಂತ ನಾರಾಯಣಾಚಾರ್ ಕುಟುಂಬ ಭಾವಿಸಿದೆ. ರಾಮಾಚಾರಿ ಇನ್ನಿಲ್ಲಅನ್ನೋ ನೋವಲ್ಲಿ ಚಾರು ಈ ಜೀವನವೇ ತನಗೆ ಬೇಡ ಅಂತ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಇನ್ನೇನು ಬಾವಿಗೆ ಹಾರ್ಬೇಕು ಅನ್ನುವಷ್ಟರಲ್ಲಿ ಮುರಾರಿ ಚಾರುಗೆ ಸತ್ಯ ಹೇಳಿದ್ದಾನೆ. ರಾಮಾಚಾರಿ ಸತ್ತಿಲ್ಲ.. ಬದುಕಿದ್ದಾನೆ. ಅಣ್ಣನಿಗಾಗಿ ಕೃಷ್ಣ ಪ್ರಾಣ ತ್ಯಾಗ ಮಾಡಿದ್ದಾನೆ ಅಂತಾ ಹೇಳಿದ್ದಾನೆ. ಇದೀಗ ರಾಮಚಾರಿ ಬದುಕಿರೋದು ಚಾರುಗೆ ಗೊತ್ತಾಗ್ತಿದ್ದಂತೆ ಆಕೆ ಖುಷಿ ಪಟ್ಟಿದ್ದಾಳೆ. . ಆದರೆ, ಈ ವಿಚಾರವನ್ನ ಯಾರಿಗೂ ಹೇಳಬಾರದು ಎಂದು ರಾಮಾಚಾರಿ ಚಾರುಲತಾಗೆ ಹೇಳಿದ್ದಾನೆ. ರಾಮಾಚಾರಿ ಬಂದ ಬೆನ್ನಲ್ಲೇ ಚಾರು ಮೊದಲಿನಂತಾಗಿದ್ದಾಳೆ. ತಲೆ ತುಂಬಾ ಹೂ ಮುಡಿದುಕೊಂಡು, ಕಲರ್‌ ಕಲರ್‌ ಸೀರೆ ಉಟ್ಕೊಂಡು ರೆಡಿಯಾಗಿದ್ದಾಳೆ. ಚಾರು ಮುಖದಲ್ಲಿ ಮಂದಹಾಸ ನೋಡಿ ಅತ್ತೆ ಮಾವ ಸಮಾಧಾನ ಮಾಡಿಕೊಂಡಿದ್ದಾರೆ. ಆದ್ರೀಗ ಸಾವನ್ನ ಗೆದ್ದು ಬಂದ ರಾಮಾಚಾರಿಗೆ ಕೃಷ್ಣನ ಸಾವಿಗೆ ಕಾರಣ ಯಾರು ಅನ್ನೋದು ಕೂಡ ಗೊತ್ತಾಗಿದೆ. ಇದೀಗ ಸೀರಿಯಲ್‌ ನಲ್ಲಿ ದೊಡ್ಡ ಟ್ವಿಸ್ಟ್‌ ಎದುರಾಗೋ ಮುನ್ಸೂಚನೆ ಸಿಕ್ಕಿದೆ.

ಇನ್ನು ರಾಮಾಚಾರಿ ಇಲ್ಲ ಅಂತ ಮಾನ್ಯತಾ, ನವದೀಪ್ ಸಕ್ಸೇನಾ, ರುಕ್ಮಿಣಿ ಖುಷಿಯಲ್ಲಿ ತೇಲಾಡ್ತಿದ್ದಾರೆ. ಈ ಹೊತ್ತಲ್ಲೇ ಅಲ್ಲಿಗೆ ರಾಮಾಚಾರಿ ಎಂಟ್ರಿ ಕೊಟ್ಟಿದ್ದಾನೆ. ತಮ್ಮನ ಸಾವಿನ ಸತ್ಯವನ್ನ ತಿಳಿದುಕೊಳ್ಳಲು ರಾಮಾಚಾರಿ ಬೇರೆಯದ್ದೇ ಪ್ಲಾನ್ ಮಾಡಿದ್ದಾನೆ. ಕೃಷ್ಣನ ವೇಷದಲ್ಲಿ ಅಲ್ಲಿಗೆ ಬಂದ ರಾಮಾಚಾರಿ, ರಾಮಾಚಾರಿಯನ್ನ ಕೊಂದಿದ್ದಕ್ಕೆ ಥ್ಯಾಂಕ್ಸ್. ಅವನನ್ನ ಸಾಯಿಸಬೇಕು ಅಂತ ನಾನು ಎಷ್ಟೆಷ್ಟೋ ಪ್ರಯತ್ನ ಪಟ್ಟಿದ್ದೆ. ಆದರೆ ಸಾಧ್ಯವಾಗಿರಲಿಲ್ಲ. ಈಗ ನನಗೆ ಸಮಾಧಾನ ಆಗಿದೆ ಅಂತ ಡ್ರಾಮಾ ಮಾಡಿದ್ದಾನೆ.. ಅದನ್ನ ಕೇಳಿ ಮಾನ್ಯತಾಗೆ ಶಾಕ್ ಆಗುತ್ತದೆ. ಆದರೆ, ರುಕ್ಮಿಣಿ ಬಾಯಿಂದ ಸತ್ಯ ಹೊರಗೆ ಬಂದೇಬಿಡುತ್ತದೆ. ನಾನು ಇದೇ ಗ್ಯಾಂಗ್‌ನಲ್ಲೇ ಇದ್ದೀನಿ. ರಾಮಾಚಾರಿಗೆ ಮೊದಲು ಚಾಕು ಹಾಕಿ ಚುಚ್ಚಿದ್ದು ನಾನೇ ಅಂತ ರುಕ್ಮಿಣಿ ಸತ್ಯ ಹೇಳಿಬಿಡ್ತಾಳೆ. ಅದನ್ನ ಕೇಳಿ ರಾಮಾಚಾರಿಗೆ ಶಾಕ್ ಆಗುತ್ತದೆ. ಆದ್ರೂ ಏನೂ ಆಗೇ ಇಲ್ಲ ಅನ್ನೋ ತರ ರಾಮಾಚಾರಿ ಆಕ್ಟ್‌ ಮಾಡಿದ್ದಾನೆ. ಇದೀಗ ರುಕ್ಮಿಣಿ ಈ ಗ್ಯಾಂಗ್ ಜೊತೆ ಹೇಗೆ ಸೇರಿದಳು.. ತನ್ನ ಮೇಲೆ ರುಕ್ಮಿಣಿಗೆ ಯಾಕೆ ದ್ವೇಷ ಅನ್ನೋ ಅನಮಾನ ರಾಮಾಚಾರಿಗೆ ಮೂಡಿದೆ.

ಅಂದ್ಹಾಗೆ  ರಾಮಾಚಾರಿ ಕೃಷ್ಣನ ವೇಷದಲ್ಲಿ ಹೋಗೋದಿಕ್ಕೂ ಒಂದು ಕಾರಣ ಇದೆ. ಚಾರು ತಂದೆಯನ್ನ ಮಾನ್ಯತಾ ಕುತಂತ್ರದಿಂದ ಜೈಲಿಗೆ ಕಳುಹಿಸಿದ್ದಾಳೆ. ಅವರನ್ನ ಬಿಡಿಸಿಕೊಂಡು ಬರ್ಬೇಕು ಅಂದ್ರೆ ಆಕೆ ಬಳಿ ಇರೋ ಫೈಲ್‌ ನ ತರ್ಬೇಕು. ಹೀಗಾಗೇ ರಾಮಾಚಾರಿ ಅವ್ರ ಮಧ್ಯೆ ಇದ್ದುಕೊಂಡು ಚಾರು ತಂದೆಯನ್ನ ಬಿಡಿಸಿಕೊಂಡು ಬರಲು ಪ್ಲ್ಯಾನ್‌ ಮಾಡಿದ್ದಾನೆ. ಇದೀಗ ರಾಮಾಚಾರಿ ಈ ಪ್ಲ್ಯಾನ್‌ ಸಕ್ಸಸ್‌ ಆಗುತ್ತಾ? ಕೃಷ್ಣನ ವೇಷದಲ್ಲಿದ್ದುಕೊಂಡೇ ಕುತಂತ್ರಿಗಳನ್ನ ಮಟ್ಟ ಹಾಕುತ್ತಾನಾ? ಎಲ್ಲರ ಬಣ್ಣವನ್ನ ಹೇಗೆ ಬಯಲು ಮಾಡ್ತಾನೋ.. ತಮ್ಮನನ್ನ ಕೊಂದವರ ಮೇಲೆ ಸೇಡು ತೀರಿಸಿಕೊಳ್ಳುತ್ತಾನೋ ಅಥವಾ ಅವರಿಗೆ  ಶಿಕ್ಷೆ ಆಗುವಂತೆ ಮಾಡ್ತಾನಾ ಅನ್ನೊ ಕ್ಯೂರಿಯಾಸಿಟಿ ಮೂಡಿದೆ.

Shwetha M